ಎಂ.ಕೆ ಅಳಗಿರಿ ಯೂಟರ್ನ್​: ಸ್ಟಾಲಿನ್​ ನಮ್ಮ ನಾಯಕ ಎಂದು ಒಪ್ಪಿಕೊಂಡ ಬಂಡಾಯ ಡಿಎಂಕೆ ನಾಯಕ


Updated:August 30, 2018, 4:19 PM IST
ಎಂ.ಕೆ ಅಳಗಿರಿ ಯೂಟರ್ನ್​: ಸ್ಟಾಲಿನ್​ ನಮ್ಮ ನಾಯಕ ಎಂದು ಒಪ್ಪಿಕೊಂಡ ಬಂಡಾಯ ಡಿಎಂಕೆ ನಾಯಕ

Updated: August 30, 2018, 4:19 PM IST
ನ್ಯೂಸ್​-18 ಕನ್ನಡ

ಚೆನ್ನೈ(ಆಗಸ್ಟ್​.30): ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಅಕಾಲಿಕ ಮರಣದ ನಂತರ ಪಕ್ಷದ ಅಧ್ಯಕ್ಷಗಿರಿಗಾಗಿ ಅಣ್ಣ ಎಂ.ಕೆ ಅಳಗಿರಿ ಮತ್ತು ತಮ್ಮ ಸ್ಟಾಲಿನ್​ ನಡುವೆ ಜಿದ್ಧಾಜಿದ್ದಿ ಮುಂದುವರೆದಿತ್ತು.

ಅಣ್ಣ ಎಂ.ಕೆ.ಅಳಗಿರಿಯ ವಿರೋಧದ ನಡುವೆಯೂ ತಮ್ಮ ಎಂ.ಕೆ.ಸ್ಟಾಲಿನ್‌ ಡಿಎಂಕೆಯ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಈ ಬೆನ್ನಲ್ಲೇ ಸ್ಟಾಲಿನ್ ವಿರುದ್ಧವಾಗಿದ್ದ ಅಣ್ಣ ಅಳಗಿರಿಯೇ ಖುದ್ದು ನಾನು ತಮ್ಮನ​ ಜತೆಗೆ ಕೆಲಸ ಮಾಡಲು ಸಿದ್ದ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ಧಾರೆ.

ಸ್ಟಾಲಿನ್​​ ಮತ್ತು ಪಕ್ಷದ ವಕ್ತಾರರ ವಿರುದ್ಧ ಅಳಗಿರಿ ಬಹಿರಂಗ ಹೇಳಿಕೆಗಳನ್ನು ನೀಡತ್ತಲೇ ಬರುತ್ತಿದ್ದರು. ಹೀಗಾಗಿ ಪಕ್ಷದಿಂದ ಎಂ.ಕೆ ಅಳಗಿರಿಯನ್ನು ಈ ಹಿಂದೆ ಕರುಣಾನಿಧಿ ಅವರೇ  ವಜಾ ಮಾಡಿದ್ದರು.  ಅರ್ಧ ಶತಮಾನದ ಕಾಲ ಕರುಣಾನಿಧಿಯವರ ಹಿಡಿತದಲ್ಲಿದ್ದ ಡಿಎಂಕೆ ರಾಜಕೀಯ ಉತ್ತರಾಧಿಕಾರಿ ಪಟ್ಟ ಈಗ ಅವರ ಕಿರಿಯ ಪುತ್ರ ಸ್ಟಾಲಿನ್​ಗೆ ನೀಡಲಾಗಿದೆ.

ಸದ್ಯ ಈ ಸಂಬಂಧ ಮತ್ತೊಮ್ಮೆ ಉದ್ಘಾರ ಎಳೆದಿರುವ ಅಳಗಿರಿ ನಾವು ಸ್ಟಾಲಿನ್​ನನ್ನು ನಾಯಕನಾಗಿ ಒಪ್ಪಿಕೊಳ್ಳಲು ಸಿದ್ದ ಎಂದು ಹೇಳಿದ್ಧಾರೆ. ಅಲ್ಲದೇ ನಮ್ಮನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಲು ಪಣ ತೊಡುತ್ತೇವೆ ಎನ್ನುವ ಮೂಲಕ ತಮ್ಮನ್ನು ಪಕ್ಷಕ್ಕೆ ಕರೆದುಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.

ಕುಟುಂಬದೊಳಗೆ ಸ್ಟಾಲಿನ್‌ ವಿರುದ್ಧ ಆಕ್ರೋಶ ವ್ಯಕ್ತವಾದರೂ ಪಕ್ಷದೊಳಗೆ ಯಾವುದೇ ರೀತಿಯ ವಿರೋಧ ವ್ಯಕ್ತವಾಗಲಿಲ್ಲ. ಹೀಗಾಗಿ ಇತ್ತೀಚೆಗೆ ಸಭೆ ನಡೆಸಿದ ಡಿಎಂಕೆಯ ಸಾಮಾನ್ಯ ಸಮಿತಿ ಸ್ಟಾಲಿನ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದೆ.
Loading...

ಈ ಹಿಂದೆ ಸ್ವತಃ ಕರುಣಾನಿಧಿ ಅವರಿಂದಲೇ ಡಿಎಂಕೆಯಿಂದ ಉಚ್ಚಾಟಿತಗೊಂಡಿದ್ದ ಅಳಗಿರಿ ಅವರು ಸ್ಟಾಲಿನ್‌ ವಿರುದ್ಧ ಬಂಡೆದ್ದಿದ್ದರು. ಸದ್ಯ ಎಲ್ಲವನ್ನು ಮರೆತು ತಮ್ಮ ಮಾತಿಗೆ ಯಾರು ಸೊಪ್ಪ ಹಾಕಲಿಲ್ಲ ಎಂಬ ಕಾರಣಕ್ಕೆ ಮತ್ತೆ ಸ್ಟಾಲಿನ್​ ಜತೆಗೆ ಬರುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ . ಅಲ್ಲದೇ ಪಕ್ಷಕ್ಕೆ ಸೇರಿಸಿಕೊಂಡರೆ ಜೊತೆಗೂಡಿ ಕೆಲಸ ಮಾಡಲು ಸಿದ್ಧ ಎಂದು ಬಹಿರಂಗವಾಗಿ ತಿಳಿಸಿದ್ದಾರೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...