ಶೇ. 7.75 ಬಡ್ಡಿಯ ಸರ್ಕಾರಿ ಬಾಂಡ್ ಖರೀದಿಸಲು ಇವತ್ತೇ ಕೊನೆಯ ದಿನ

ಗವರ್ನ್ಮೆಂಟ್ ಬಾಂಡ್​ಗಳಿಗೆ ಯಾವತ್ತೂ ಬೇಡಿಕೆ ಇರುತ್ತದೆ. ಸರ್ಕಾರವೇ ಇದನ್ನ ಬಿಡುಗಡೆ ಮಾಡುತ್ತಿರುವುದರಿಂದ ಮ್ಯುಚುವಲ್ ಫಂಡ್ ಮೊದಲಾದವಕ್ಕಿಂತ ಈ ಬಾಂಡ್​ಗಳು ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿದೆ.

ಆರ್​ಬಿಐ

ಆರ್​ಬಿಐ

 • News18
 • Last Updated :
 • Share this:
  ನವದೆಹಲಿ(ಮೇ 28): ಹಣಕಾಸು ಹೊಂದಿಸಲು ಕೇಂದ್ರ ಸರ್ಕಾರ ಕೊಟ್ಟಿದ್ದ ಶೇ. 7.75 ಬಡ್ಡಿ ಕೊಡುವ ಬಾಂಡ್​ಗಳ ಆಫರ್ ಇವತ್ತಿಗೆ ಕೊನೆಯಾಗುತ್ತಿದೆ. ನಾಳೆಯಿಂದ ಈ ಯೋಜನೆ ಇರುವುದಿಲ್ಲ. ಸರ್ಕಾರಿ ಬಾಂಡ್​​ಗಳನ್ನು ಕೊಳ್ಳಲು ಇವತ್ತೇ ಕೊನೆಯ ಅವಕಾಶವಾಗಿದೆ. ಆದರೆ, ಬಾಂಡ್ ಮಾರಾಟ ಯಾಕೆ ನಿಲ್ಲಿಸಲಾಯಿತು ಎಂದು ಆರ್​ಬಿಐ ಕಾರಣ ನೀಡಿಲ್ಲ. ಮೂಲಗಳ ಪ್ರಕಾರ, ಆರ್​ಬಿಐನ ರಿವರ್ಸ್ ರೆಪೋ ಮತ್ತು ರೆಪೋ ದರಗಳ ನಿರಂತರ ಇಳಿಕೆಯಿಂದಾಗಿ ಠೇವಣಿ ಮೇಲಿನ ಬಡ್ಡಿ ದರ ಕೂಡ ಕಡಿಮೆಯಾಗಿದೆ. ಹೀಗಾಗಿ, ಸರ್ಕಾರಿ ಬಾಂಡ್​ಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ 2018ರ 7.75% ಟ್ಯಾಕ್ಸಬಲ್ ಸೇವಿಂಗ್ಸ್ ಬಾಂಡ್ಸ್ ಯೋಜನೆ ಅಂತ್ಯಗೊಳ್ಳುತ್ತಿದೆ ಎನ್ನಲಾಗಿದೆ.

  ಗವರ್ನ್ಮೆಂಟ್ ಬಾಂಡ್​ಗಳಿಗೆ ಯಾವತ್ತೂ ಬೇಡಿಕೆ ಇರುತ್ತದೆ. ಸರ್ಕಾರವೇ ಇದನ್ನ ಬಿಡುಗಡೆ ಮಾಡುತ್ತಿರುವುದರಿಂದ ಮ್ಯುಚುವಲ್ ಫಂಡ್ ಮೊದಲಾದವಕ್ಕಿಂತ ಈ ಬಾಂಡ್​ಗಳು ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲಾಗಿದೆ.

  ಯಾಕೆ ಈ ಬಾಂಡ್ ಮಾರಲಾಗುತ್ತದೆ?

  ಸರ್ಕಾರಕ್ಕೆ ಹೆಚ್ಚುವರಿ ಹಣಕಾಸಿನ ಅಗತ್ಯ ಇದ್ದಾಗ ಈ ರೀತಿಯ ಬಾಂಡ್​ಗಳನ್ನ ಮಾರಾಟಕ್ಕಿಡುತ್ತದೆ. ನಿರ್ದಿಷ್ಟ ಅವಧಿ ಮತ್ತು ಬಡ್ಡಿದರ ನಿಗದಿಯಾಗಿರುತ್ತದೆ. ಬಾಂಡ್ ಮಾಲಿಕರಿಗೆ ನಿಯಮಿತವಾಗಿ ಬಡ್ಡಿ ಪಾವತಿ ಮಾಡಲಾಗುತ್ತದೆ. ಅವಧಿ ಮುಗಿದ ಬಳಿಕ ಮೂಲ ಹಣವನ್ನ ಮರಳಿಸಲಾಗುತ್ತದೆ. ಹಾಗೆಯೇ, ಈ ಬಾಂಡ್​ಗಳನ್ನು ಮಾರುವಂತಿಲ್ಲ, ಅವಧಿಗೆ ಮುನ್ನ ಹಿಂಪಡೆಯುವಂತಿಲ್ಲ ಎಂಬುದು ಸೇರಿದಂತೆ ಕೆಲ ನಿಯಮಗಳೂ ಇವೆ.

  ಇದನ್ನೂ ಓದಿ: ಕೊರೋನಾ ನಿಗ್ರಹಕ್ಕೆ ಬೇಕಾದ ಉಷ್ಣಾಂಶ ಮತ್ತು ತೇವಾಂಶ ಎಷ್ಟು?; ಎಸಿ ಸೆಟ್ಟಿಂಗ್ ಎಷ್ಟಿರಬೇಕು?

  ಎಲ್ಲಿ ಸಿಗುತ್ತದೆ?

  ಎಸ್​ಬಿಐ, ಐಸಿಐಸಿಐ, ಹೆಚ್​ಡಿಎಫ್​ಸಿ ಮೊದಲಾದ ಬ್ಯಾಂಕುಗಳಲ್ಲಿ ಈ ಬಾಂಡ್​ಗಳನ್ನು ಖರೀದಿಸಬಹುದಾಗಿದೆ. ಇನ್ವೆಸ್ಟ್​ಮೆಂಟ್ ಪೋರ್ಟಲ್​ಗಳ ಮೂಲಕವೂ ಸರ್ಕಾರಿ ಬಾಂಡ್ ಕೊಳ್ಳಬಹುದಾಗಿದೆ. ಎಷ್ಟು ಬಾಂಡ್​ಗಳನ್ನ ಬೇಕಾದರೂ ನಾವು ಕೊಳ್ಳಬಹುದಾಗಿದೆ.

  First published: