ಶೀಘ್ರದಲ್ಲೇ 20 ರೂ. ಮುಖಬೆಲೆಯ ಹೊಸ ನೋಟು ಮಾರುಕಟ್ಟೆಗೆ; ಏನಿದರ ವಿಶೇಷತೆ ಗೊತ್ತಾ!?

ಈ ನೋಟು ಹಸಿರು ಮಿಶ್ರಿತ ಹಳದಿ ಬಣ್ಣವಿರಲಿದೆ. ಇದರಲ್ಲಿ ಒಂದು ಬಂದಿಯಲ್ಲಿ ಮಹಾತ್ಮಾ ಗಾಂಧಿ ಚಿತ್ರಣ ಮತ್ತೊಂದು ಬದಿಯಲ್ಲಿ ಎಲ್ಲೋರ ಗುಹೆ ಚಿತ್ರವಿರಲಿದೆ. ಈ ಹೊಸ ನೋಟಿನ ಉದ್ದ ಅಗಲ 63ಮಿ.ಮಿ*129 ಮಿ.ಮಿ ಇರಲಿದೆ.

Seema.R | news18
Updated:April 27, 2019, 1:10 PM IST
ಶೀಘ್ರದಲ್ಲೇ  20 ರೂ. ಮುಖಬೆಲೆಯ ಹೊಸ ನೋಟು ಮಾರುಕಟ್ಟೆಗೆ; ಏನಿದರ ವಿಶೇಷತೆ ಗೊತ್ತಾ!?
20 ರೂ ಹೊಸ ನೋಟು
  • News18
  • Last Updated: April 27, 2019, 1:10 PM IST
  • Share this:
ನವದೆಹಲಿ (ಏ.27): ನೋಟು ಅಮಾನ್ಯೀಕರಣವಾದ ಬಳಿಕ ಹೊಸ ಬಣ್ಣದ, 2000, 200, 100 ಹಾಗೂ 50, 10 ರೂ. ಮುಖಬೆಲೆಯ ಬಣ್ಣದ ನೋಟುಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಇದೀಗ 20 ರೂ ಮುಖಬೆಲೆಯ ಹೊಸ ನೋಟನ್ನು ಮಾರುಕಟ್ಟೆಗೆ ತರಲು ಆರ್​ಬಿಐ ಸಜ್ಜಾಗಿದೆ,

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ರಿಸರ್ವ್​ ಬ್ಯಾಂಕ್​,  20 ರೂ ಮುಖ ಬೆಲೆಯ ಹೊಸ ನೋಟು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ನೋಟಿನಲ್ಲಿ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಸಹಿಇರಲಿದೆ.ಈ ನೋಟು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರಲಿದೆ. ಇದರಲ್ಲಿ ಒಂದು ಬದಿಯಲ್ಲಿ ಮಹಾತ್ಮ ಗಾಂಧಿ ಚಿತ್ರಣ, ಮತ್ತೊಂದು ಬದಿಯಲ್ಲಿ ಎಲ್ಲೋರ ಗುಹೆ ಚಿತ್ರವಿರಲಿದೆ. ಈ ಹೊಸ ನೋಟು 63 ಮಿ.ಮೀ * 129 ಮಿ.ಮೀ. ಸುತ್ತಳತೆ ಹೊಂದಿದೆ. ಸದ್ಯ ಚಲಾವಣೆಯಲ್ಲಿರುವ 20ರೂ ದರದ ನೋಟು ಕೂಡ ಮಾನ್ಯತೆ ಹೊಂದಿರಲಿದೆ ಎಂದು ತಿಳಿಸಲಾಗಿದೆ.

 
First published:April 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ