Union Budget 2022: ಶೀಘ್ರದಲ್ಲೇ RBIನಿಂದಲೇ ಡಿಜಿಟಲ್​ ಕರೆನ್ಸಿ ಆರಂಭ, ಜೊತೆಗೆ ಈ ವರ್ಷವೇ 5ಜಿ ಬರಲಿದೆ!

ಬ್ಲಾಕ್​ಚೈನ್​ ಮೂಲಕ ಆರ್​​ಬಿಐನಿಂದ ಡಿಜಿಟಲ್​ ರೂಪಾಯಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಇದು ಪ್ರಾಯೋಗಿಕ ಹಂತಕ್ಕೆ ಬೇಕಿರುವ ಸಿದ್ದತೆಗಳನ್ನು ಆರ್​ಬಿಐ ಮಾಡಿಕೊಂಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1 ಗಂಟೆ 33 ನಿಮಿಷಗಳ ಕಾಲ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Seetharaman)​ ಬಜೆಟ್​ 2022 ಮಂಡಿಸಿದ್ದಾರೆ. ಇದೇ ಬಜೆಟ್​ನಲ್ಲೇ ಶ್ರೀಘ್ರದಲ್ಲೇ ಡಿಜಿಟಲ್​ ಕರೆನ್ಸಿ (Digital Currency) ವಿತರಣೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಅವರು ಹೇಳಿದ್ದಾರೆ. ಬ್ಲಾಕ್​ಚೈನ್​ (Blockchain) ಮೂಲಕ ಆರ್​​ಬಿಐ (RBI) ನಿಂದ ಡಿಜಿಟಲ್​ ರೂಪಾಯಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಇದು ಪ್ರಾಯೋಗಿಕ ಹಂತಕ್ಕೆ ಬೇಕಿರುವ ಸಿದ್ದತೆಗಳನ್ನು ಆರ್​ಬಿಐ ಮಾಡಿಕೊಂಡಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India), ರೂಪಾಯಿಯ ಡಿಜಿಟಲ್‌ ಕರೆನ್ಸಿಯನ್ನು ಬಿಡುಗಡೆಗೊಳಿಸಲು ಪರಿಶೀಲಿಸುತ್ತಿದೆ ಎಂದು ಡೆಪ್ಯುಟಿ ಗವರ್ನರ್‌ ಟಿ. ರಬಿ ಶಂಕರ್‌ ಕೆಲ ತಿಂಗಳ ಹಿಂದೆ ತಿಳಿಸಿದ್ದರು. ಅದರಂತೆ ಈ ವರ್ಷದಲ್ಲೇ ಈ ಡಿಜಿಟಲ್​ ಕರೆನ್ಸಿ ಸೇವೆ ಕೂಡ ಆರಂಭವಾಗಲಿದೆ.  ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ 2022-23ರಲ್ಲಿ ರಿಸರ್ವ್​ ಬ್ಯಾಂಕ್​ನಿಂದ (Reserve Bank) ಡಿಜಿಟಲ್ ಕರೆನ್ಸಿ ಬಿಡುಗಡೆಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಭಾರತದ ಹಳ್ಳಿ-ಹಳ್ಳಿಯಲ್ಲೂ ಅಂಚೆ ಕಚೇರಿ ಮೂಲಕ ಡಿಜಿಟಲ್ ಬ್ಯಾಂಕಿಂಗ್ (Digital Banking), ಇ- ಪಾಸ್​ಪೋರ್ಟ್​, ಡಿಜಿಟಲ್ ಪೇಮೆಂಟ್ ಮುಂತಾದ ಯೋಜನೆಗಳನ್ನು ಘೋಷಿಸಲಾಗಿದೆ.

ಹೇಗೆ ಕೆಲಸ ಮಾಡುತ್ತೆ ಡಿಜಿಟಲ್​ ಕರೆನ್ಸಿ?

ಉದ್ದೇಶಿತ 'ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ (ಸಿಬಿಡಿಸಿ)' ವರ್ಚುವಲ್‌ ಕರೆನ್ಸಿ ಅಥವಾ ಕ್ರಿಪ್ಟೊಕರೆನ್ಸಿಯಾಗಿದ್ದು, ಆರ್‌ಬಿಐ ಬಿಡುಗಡೆಗೊಳಿಸಲಿದೆ. ರೂಪಾಯಿ ಕರೆನ್ಸಿಗೆ ಪರ್ಯಯವಾಗಿ ಇದನ್ನು ಬಳಸಬಹುದು. ಖಾಸಗಿ ಕ್ರಿಪ್ಟೊ ಕರೆನ್ಸಿಗಳಂತೆ ಇದು ಇರುವುದಿಲ್ಲ. ಸರ್ಕಾರಿ ಡಿಜಿಟಲ್‌ ಕರೆನ್ಸಿ ಇದಾಗಲಿದೆ. ಮಾತ್ರವಲ್ಲದೆ ಕ್ರಿಪ್ಟೊ ಕರೆನ್ಸಿಗಳಿಂದ ಆರ್ಥಿಕತೆಗೆ ಸಂಭವನೀಯ ಅಪಾಯವನ್ನು ಕನಿಷ್ಠಗೊಳಿಸಲಿದೆ. ಸಿಬಿಡಿಸಿಯಿಂದ ನಗದಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಕರೆನ್ಸಿ ಮುದ್ರಣ ವೆಚ್ಚದಲ್ಲಿ ಉಳಿತಾಯವಾಗಲಿದೆ.

ಇದನ್ನು ಓದಿ : ಮೇಕ್​ ಇನ್​ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಸರ್ಕಾರದ ಮುಂದಿನ ಗುರಿ!

ಡಿಜಿಟಲ್​ ಕರೆನ್ಸಿಯಿಂದ ಆಗುವ ಲಾಭವೇನು?

ಹಣಕಾಸು ವರ್ಗಾವಣೆಗಳಿಗೆ ಅನುಕೂಲವಾಗಲಿದೆ. ಚೀನಾ, ರಷ್ಯಾ ಮತ್ತು ಬ್ರಿಟನ್‌ನಲ್ಲಿ ಡಿಜಿಟಲ್‌ ಕರೆನ್ಸಿಯ ಪ್ರಯೋಗಗಳು ನಡೆಯುತ್ತಿವೆ. ಭಾರತವೂ ಇದೇ ಸಾಲಿಗೆ ಸೇರ್ಪಡೆಯಾಗಲಿದೆ. ಸದ್ಯ ಎಲ್ಲವೂ ಡಿಜಟಲೀಕರಣವಾಗಿರುವುದರಿಂದ ಜಾಗತಿಕವಾಗಿ ಕಾಗದದ ಹಣದ ಬದಲಿಗೆ ಡಿಜಿಟಲ್ ನಗದು ಎಲ್ಲರಿಗೂ ಸರಳ ಆರ್ಥಿಕ ಚಟುವಟಿಕೆಗೆ ಅನುಕೂಲಕಾರಿಯಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯ ಅವಲಂಬನೆಯಿಂದ ವಿಳಂಬ ಕಡಿಮೆಯಾಗುವುದರ ಜೊತೆಗೆ ತೆರಿಗೆ ವಂಚನೆಯಂಥ ಹಣದ ಸೋರಿಕೆಯನ್ನು ತಡೆಯಬಹುದಾಗಿದೆ.. ಡಿಜಿಟಲ್ ಆಸ್ತಿ ವರ್ಗಾವಣೆಯ ಮೇಲೆ 30 ಪ್ರತಿಶತ ತೆರಿಗೆ ವಿಧಿಸಲಾಗುವುದು. ಡಿಜಿಟಲ್ ಸ್ವತ್ತುಗಳ ಉಡುಗೊರೆಗಳಿಗೂ ತೆರಿಗೆ ವಿಧಿಸಲಾಗುತ್ತದೆ.

ಇದನ್ನು ಓದಿ : ಆದಾಯ ತೆರಿಗೆ ಸಲ್ಲಿಸುವ ಜನರಿಗೆ ಬಿಗ್ ರಿಲೀಫ್ ನೀಡಿದ ವಿತ್ತ ಸಚಿವರು

ಈ ವರ್ಷವೇ 5ಜಿ ಸೇವೆ ಆರಂಭ!

ದೇಶದಲ್ಲಿ ಶೀಘ್ರದಲ್ಲೇ 5ಜಿ ಸಂಪರ್ಕದ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿದ್ದಾರೆ. 5ಜಿ ಸಂಪರ್ಕ ಸೇವೆಗಳಿಗಾಗಿ ಇದೇ ವರ್ಷ ತರಂಗಾಂತರಗಳ ಹರಾಜು ಪ್ರಕ್ರಿಯೆ ನಡೆಸುವುದಾಗಿ ಬಜೆಟ್​ ಮಂಡನೆಯಲ್ಲಿ ಅವರು ತಿಳಿಸಿದ್ದಾರೆ. ಈ ಮೂಲಕ ದೇಶದಲ್ಲಿ 2023ಕ್ಕೆ ಖಾಸಗಿ ದೂರಸಂಪರ್ಕ ಸೇವಾಧಾರ ಕಂಪನಿಗಳ ಮೂಲಕ ಗ್ರಾಹಕರಿಗೆ 5ಜಿ ಸಂಪರ್ಕ ಸೇವೆ ಪೂರೈಕೆ ಸಾದ್ಯವಾಗಲಿದೆ. ಪಿಐಎಲ್‌ ಯೋಜನೆಯ ಭಾಗವಾಗಿ ವಿನ್ಯಾಸ ಆಧಾರಿತ ತಯಾರಿಕೆಯಿಂದ 5ಜಿಗಾಗಿ ಸಮರ್ಥ ವ್ಯವಸ್ಥೆ ರೂಪಿಸುವುದು ಸಾಧ್ಯವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದ್ದಾರೆ. ಇನ್ನೂ ಈ ಬಾರಿ ಬಜೆಟ್​ನಲ್ಲಿ ಕೃಷ್ಟಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
Published by:Vasudeva M
First published: