HDFC ಬ್ಯಾಂಕ್​ಗೆ 10 ಕೋಟಿ ದಂಡ ವಿಧಿಸಿದ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ!

RBI Penalty: ಆರ್​ಬಿಐ ಶೋ ಕಾಸ್ ನೋಟಿಸ್‌ಗೆ HDFC ಬ್ಯಾಂಕ್ ನೀಡಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ಸಲ್ಲಿಕೆಗಳು, ಜೊತೆಗೆ ಬ್ಯಾಂಕ್ ಒದಗಿಸಿದ ಹೆಚ್ಚಿನ ಸ್ಪಷ್ಟೀಕರಣಗಳು ಅಥವಾ ದಾಖಲೆಗಳ ಪರಿಶೀಲನೆ ಪರಿಗಣಿಸಿದ ನಂತರ ಮೇಲಿನ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ತಿಳಿದು ಆರ್‌ಬಿಐ ವಿತ್ತೀಯ ದಂಡವನ್ನು ವಿಧಿಸಿದೆ.

ಹೆಚ್​ಡಿಎಫ್​ಸಿ.

ಹೆಚ್​ಡಿಎಫ್​ಸಿ.

  • Share this:
    ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ (RBI) ನಿಯಮ ಉಲ್ಲಂಘಿಸಿದ್ದ ಕಾರಣಕ್ಕೆ ಎಚ್​ಡಿಎಫ್​ಸಿ ಬ್ಯಾಂಕ್​ಗೆ 10 ಕೋಟಿ ದಂಡ ಹಾಕಿದೆ. 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 6 (2) ಮತ್ತು ಸೆಕ್ಷನ್ 8 ರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ HDFC ಬ್ಯಾಂಕ್ ಲಿಮಿಟೆಡ್‌ಗೆ ಆರ್‌ಬಿಐ ಶುಕ್ರವಾರದಂದು 10 ಕೋಟಿ ವಿತ್ತೀಯ ದಂಡ ವಿಧಿಸಿದೆ.

    ಕೇಂದ್ರ ಬ್ಯಾಂಕ್ ಈ ಬಗ್ಗೆ ಇಂದು ಹೇಳಿಕೆ ನೀಡಿದ್ದು, ಎಚ್​ಡಿಎಫ್​ಸಿ ಬ್ಯಾಂಕ್​ ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ. ಆದರೆ ಈ ಬ್ಯಾಂಕ್​ನ  ಯಾವುದೇ ವಹಿವಾಟಿನ ಸಿಂಧುತ್ವವನ್ನು ಅಥವಾ ಬ್ಯಾಂಕ್ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ಒಪ್ಪಂದದ ಮೇಲೆ ಉಚ್ಚರಿಸಲು ಉದ್ದೇಶಿಸಿಲ್ಲ ಎಂದು ತಿಳಿಸಿದೆ.

    ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಕಾಯ್ದೆಯಲ್ಲಿ ಸೆಕ್ಸನ್​ 47ಎ (1) (ಸಿ) ಜನತೆಗೆ ಸೆಕ್ಷನ್​ 46 (4)(ಐ) ಅಡಿ ಇರುವ ಅಧಿಕಾರವನ್ನು ಬಳಸಿಕೊಂಡು ಎಚ್​ಡಿಎಫ್​ಸಿ ಬ್ಯಾಂಕ್​ ಮೇಲೆ ದಂಡ ವಿಧಿಸಿದೆ. ಎಚ್​ಡಿಎಪ್​ಸಿ ಬ್ಯಾಂಕ್​ ವಾಹನ ಸಾಲದ ಪೋರ್ಟ್​ ಪೋಲಿಯೋದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ವಿಷಲ್​ ಬ್ಲೋವರ್​ ಒಬ್ಬರು ದೂರು ನೀಡದ್ದರು. ಇದನ್ನು ಪರಿಶೀಲಿಸಿದಾಗ ತಪ್ಪು ಕಂಡುಬಂದಿದೆ. ಅದಕ್ಕಾಗಿ ಎಚ್​ಡಿಎಫ್​ಸಿ ಬ್ಯಾಂಕ್​ ಮೇಲೆ ಈ ನಿರ್ಧಾರ ಕೈಗೊಂಡಿದೆ.

    ಇನ್ನು ಆರ್​ಬಿಐ ಶೋ ಕಾಸ್ ನೋಟಿಸ್‌ಗೆ ಬ್ಯಾಂಕ್ ನೀಡಿದ ಉತ್ತರ, ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಮೌಖಿಕ ಸಲ್ಲಿಕೆಗಳು, ಜೊತೆಗೆ ಬ್ಯಾಂಕ್ ಒದಗಿಸಿದ ಹೆಚ್ಚಿನ ಸ್ಪಷ್ಟೀಕರಣಗಳು ಅಥವಾ ದಾಖಲೆಗಳ ಪರಿಶೀಲನೆ ಪರಿಗಣಿಸಿದ ನಂತರ ಮೇಲಿನ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ತಿಳಿದು ಆರ್‌ಬಿಐ ವಿತ್ತೀಯ ದಂಡವನ್ನು ವಿಧಿಸಿದೆ.
    Published by:Harshith AS
    First published: