ರೆಪೋ ದರ ಇಳಿಸಿದ ಆರ್​ಬಿಐ; ಕಡಿಮೆಯಾಗಲಿದೆಯಾ ಬಡ್ಡಿ ದರ?

ಶಕ್ತಿಕಾಂತ ದಾಸ್ ಅವರು ನೂತನ ಆರ್​ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಗಮನಾರ್ಹ ಬೆಳವಣಿಗೆ ಇದಾಗಿದೆ.

Vijayasarthy SN | news18
Updated:February 7, 2019, 1:02 PM IST
ರೆಪೋ ದರ ಇಳಿಸಿದ ಆರ್​ಬಿಐ; ಕಡಿಮೆಯಾಗಲಿದೆಯಾ ಬಡ್ಡಿ ದರ?
ಫೈಲ್​ ಫೋಟೊ: ಆರ್​ಬಿಐ ಕಚೇರಿ
  • News18
  • Last Updated: February 7, 2019, 1:02 PM IST
  • Share this:
ನವದೆಹಲಿ(ಫೆ. 07): ಬರೋಬ್ಬರಿ 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ಬಾರಿಗೆ ತನ್ನ ರೆಪೋ ದರವನ್ನು ಇಳಿಕೆ ಮಾಡಲು ನಿರ್ಧರಿಸಿದೆ. 25 ಮೂಲಾಂಕದಷ್ಟು ದರ ಕಡಿಮೆ ಮಾಡಿದ್ದು ನೂತನ ರೆಪೋ ದರವು 6.25 ಇದೆ. ಈ ಮುಂಚೆ ಇದು 6.50 ಇತ್ತು. ಆರ್​ಬಿಐನ ಈ ಕ್ರಮದಿಂದ ಜನಸಾಮಾನ್ಯರಿಗೆ ಆಗುವ ಪ್ರಮುಖ ಲಾಭಗಳಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಆಗುವ ಇಳಿಕೆಯೂ ಒಂದು. ಇವತ್ತು ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)ಈ ಮಹತ್ವದ ನಿರ್ಧಾರ ಕೈಗೊಂಡಿದೆ. ರೆಪೋ ದರ ಇಳಿಕೆ ಮಾಡುವ ಕ್ರಮಕ್ಕೆ ಈ ಸಮಿತಿ 4-2 ಬಹುಮತದೊಂದಿಗೆ ಅಂಗೀಕರಿಸಿದೆ. ಸಮಿತಿಯ ಸದಸ್ಯರಾದ ವಿರಳ್ ಆಚಾರ್ಯ ಮತ್ತು ಚೇತನ್ ಘಾಟೆ ಅವರಿಬ್ಬರು ಮಾತ್ರ ಆರ್​ಬಿಐ ದರ ವ್ಯತ್ಯಾಸವಾಗಬಾರದೆಂಬ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೇವಣ್ಣ ಹಾಸನದಿಂದ ಚನ್ನರಾಯಪಟ್ಟಣ ಕ್ರಾಸ್ ಮಾಡಿದ್ರೆ ಹೊಸ ಕೆಲಸ; ಬೆಂಗಳೂರಿನಿಂದ ನೆಲಮಂಗಲ ದಾಟಿದರೆ ಕೆಲಸ ಪಕ್ಕಾ: ರೇವಣ್ಣ ಕೆಲಸಕ್ಕೆ ಪತ್ನಿ ಮಾರ್ಕ್ಸ್

ಶಕ್ತಿಕಾಂತ ದಾಸ್ ಅವರು ನೂತನ ಆರ್​ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ ಆರ್​ಬಿಐ ತೋರಿದ ರಿಯಾಯಿತಿಯನ್ನು ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ರವಾನಿಸಿದರೆ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಫ್ಲೋಟಿಂಗ್ ಬಡ್ಡಿಯ ಮೇಲೆ ಸಾಲ ಪಡೆದವರಿಗೆ ಈ ಲಾಭ ಸಿಗಲಿದೆ. ಅವರು ಕಟ್ಟುವ ಸಾಲದ ಕಂತುಗಳ ಮೊತ್ತ ಕಡಿಮೆಯಾಗಲಿದೆ.

ಹಣದುಬ್ಬರನ್ನು ಶೇ. 4ರ ಮಟ್ಟಕ್ಕೆ ನಿಭಾಯಿಸಲು ಆರ್​ಬಿಐ ಈ ರೆಪೋ ದರ ಕಡಿತದ ನಿರ್ಧಾರ ಕೈಗೊಂಡಿದೆ. ಆದರೆ, ಸಿಎಲ್​ಆರ್ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್​ ಲಿಪ್​ ಲಾಕ್​ ದೃಶ್ಯ ವೈರಲ್!

ಏನಿದು ರೆಪೋ ದರ?

ರೆಪೋ ಅಂದರೆ ರೀಪರ್ಚೇಸ್ ರೇಟ್, ಅಂದರೆ ಮರುಖರೀದಿ ದರ. ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆಯು ಕಮರ್ಷಿಯಲ್ ಬ್ಯಾಂಕುಗಳಿಗೆ ನೀಡುವ ಹಣದ ಮೇಲಿನ ದರವಾಗಿದೆ.
First published: February 7, 2019, 12:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading