RBI:100ರೂ ಮುಖಬೆಲೆಯ ಹಳೆ ನೋಟು ರದ್ದಿಗೆ ಮುಂದಾದ ಆರ್​ಬಿಐ

ಮಾರ್ಚ್​, ಏಪ್ರಿಲ್​ ವೇಳೆಗೆ ಹಳೆಯ 100, 10 ಮತ್ತಯ 5 ರೂ ನೋಟುಗಳನ್ನು ರದ್ದು ಮಾಡಲು ಆರ್​ಬಿಐ ಚಿಂತಿಸಿದೆ

100ರೂ ಮುಖಬೆಲೆಯ ಹಳೆ ನೋಟು

100ರೂ ಮುಖಬೆಲೆಯ ಹಳೆ ನೋಟು

 • Share this:
  ನವದೆಹಲಿ (ಜ.22): ಈ ಹಿಂದೆ ಏಕಾಏಕಿ ನೋಟ್​ ಅಮಾನ್ಯೀಕರಣದಿಂದ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ​ ಆದರೆ, ಈಗ ಆರ್​ಬಿಐ ಹಂತ ಹಂತವಾಗಿ  100 ರೂ ಮುಖಬೆಲೆಯ ಹಳೆಯ ನೋಟುಗಳ ರದ್ದಿಗೆ ಮುಂದಾಗಿದೆ. ಈ ಕುರಿತು ಆರ್​ಬಿಐ ಜನರಲ್​ ಮ್ಯಾನೇಜರ್​ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಭಾರತೀಯ ರಿಸರ್ವ್​ ಬ್ಯಾಂಕ್​ ಸಹಾಯಕ ಜನರಲ್​ ಮ್ಯಾನೇಜರ್​ ಬಿ ಮಹೇಶ್​,  ಪ್ರಸ್ತುತ ಚಲಾವಣೆಯಲ್ಲಿರುವ 100, 10 ಮತ್ತು 5 ರೂಗಳ ಹಳೆಯ ನೋಟುಗಳನ್ನು ಮಾರ್ಚ್​ ಒಳಗೆ ರದ್ದು ಮಾಡಲು ನಿರ್ಧರಿಸಲಾಗಿದೆ ಎಂದು  ತಿಳಿಸಿದ್ದಾರೆ. ಜಿಲ್ಲಾ ಮಟ್ಟದ ಬ್ಯಾಂಕಿಂಗ್​ ಭದ್ರತಾ ಸಮಿತಿ ಮತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್​, ಏಪ್ರಿಲ್​ ವೇಳೆಗೆ ಹಳೆಯ 100, 10 ಮತ್ತು 5 ರೂ ನೋಟುಗಳನ್ನು ರದ್ದು ಮಾಡಲು ಆರ್​ಬಿಐ ಚಿಂತಿಸಿದೆ ಎಂದರು.

  ಇದೇ ವೇಳೆ 10 ರೂಪಾಯಿ ನಾಣ್ಯಗಳನ್ನು ಮಾರುಕಟ್ಟೆಗೆ ಪರಿಚಯಿಸಿ 15 ವರ್ಷಗಳಾದರೂ ಇವುಗಳ ವಹಿವಾಟು ನಡೆಸಲು ವ್ಯಾಪಾರಿಗಳು ಮತ್ತು ಉದ್ಯಮಿಗಳು ಹಿಂಜರಿಯುತ್ತಾರೆ. ಇದು ಆರ್​ಬಿಐಗೆ ಸಮಸ್ಯೆಯಾಗಿದೆ. ಬ್ಯಾಂಕಿನಲ್ಲಿ 10 ರೂಪಾಯಿ ನಾಣ್ಯಗಳ ರಾಶಿ ಸಂಗ್ರಹವಾಗಿದೆ ಎಂದರು. ಇದೇ ವೇಳೆ ನಾಣ್ಯಗಳ ವಹಿವಾಟಿನ ಬಗ್ಗೆ ಹಬ್ಬಿರುವ ಗಾಳಿ ಸುದ್ದಿಗಳನ್ನು ಹೋಗಲಾಡಿಸಿ ಜನರಲ್ಲಿ ಬ್ಯಾಂಕ್​ಗಳು ಜಾಗೃತಿ ಕಾರ್ಯ ನಡೆಸಬೇಕು. ಜೊತೆಗೆ ಈ ನಾಣ್ಯಗಳನ್ನು ಸಾರ್ವಜನಿಕ ವಲಯದಲ್ಲಿ ವಹಿವಾಟುವಾಗುವಂತೆ ನೋಡಿಕೊಳ್ಳಬೇಕು ಎಂದರು.

  2019ರಲ್ಲಿ ಆರ್​ಬಿಐ ನೇರಳೆ ಬಣ್ಣದ 100 ರೂಪಾಯಿಗಳನ್ನು ಬಿಡುಗಡೆ ಮಾಡಲಾಯಿತು. ಗುಜರಾತ್​ನ ಪಟಾನ್​ ಸರಸ್ವತಿ ನದಿಯ ದಡದ ಬಳಿಯಿರುವ ರಾಣಿ ಕಿ ವಾವ್​ ಚಿತ್ರಣವನ್ನು ಈ ನೋಟು ಹೊಂದಿದೆ. ಈ 100 ರೂ ನೋಟುಗಳನ್ನು ಕಾನೂನು ಟೆಂಡರ್​ನಂತೆ ಮುಂದುವರೆಸಲಾಗುವುದು ಎಂದರು.
  Published by:Seema R
  First published: