ನವದೆಹಲಿ (ಸೆ.28): ಬ್ಯಾಂಕಿಂಗ್ ವಲಯದಲ್ಲಿ ಚೆಕ್ ಪಾವತಿಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಕಣ್ಣೀಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಪದ್ದತಿ ಜಾರಿಗೆ ಮುಂದಾಗಿದೆ. ಇದೇ ಕಾರಣದಿಂದ ಚೆಕ್ ಪಾವತಿಗೆ 'ಧನಾತ್ಮಾಕ ಪಾವತಿ ವ್ಯವಸ್ಥೆ' ಕುರಿತು ಆರ್ಬಿಐ ಅಧಿಸೂಚನೆ ಹೊರಡಿಸಿದೆ. ಈ ವ್ಯವಸ್ಥೆ ಮುಂದಿನ ವರ್ಷ ಎಂದರೆ 2021ನೇ ಜನವರಿಯಿಂದ ಈ ವ್ಯವಸ್ಥೆ ಚಾಲನೆಗೆ ಬರಲಿದೆ. ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚಿನ ಹಣಪಾವತಿ ಮಾಡುವಾಗ ಈ ನಿಯಮಪಾಲನೆ ಅವಶ್ಯಕವಾಗಿದೆ. ಇದರಿಂದ ಚೆಕ್ ಬೊನ್ಸ್, ಚೆಕ್ ವ್ಯವಹಾರಗಳಲ್ಲಿನ ವ್ಯತ್ಯಾಸಗಳು ಶೀಘ್ರ ಪತ್ತೆಯಾಗಲಿದೆ.
ಏನಿದು 'ಧನಾತ್ಮಾಕ ಪಾವತಿ ವ್ಯವಸ್ಥೆ'
- ಈ ಪದ್ದತಿ ಅಡಿ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಚೆಕ್ಬುಕ್ ಮೂಲಕ ವ್ಯವಹಾರ ಮಾಡುವ ಗ್ರಾಹಕರು ಪ್ರಮುಖ ವಿವರಗಳನ್ನು ಬ್ಯಾಂಕ್ಗೆ ಮರುದೃಢೀಕರಣ ಮಾಡಬೇಕಾಗುತ್ತದೆ. ಚೆಕ್ ನೀಡಿದ ದಿನಾಂಕ, ಪಾವತಿ ಮಾಡಿದ ವ್ಯಕ್ತಿಯ ಹೆಸರು. ಪಾವತಿದಾರರ ವಿವರ ಮತ್ತು ಹಣದ ಕುರಿತು ವಿವರ ನೀಡಬೇಕು.
- ಅದರಲ್ಲಿಯೂ ಐದು ಲಕ್ಷಕ್ಕೂ ಹೆಚ್ಚಿನ ಪಾವತಿಗೆ ಈ ದೃಢೀಕರಣ ಕಡ್ಡಾಯವಾಗಿದೆ.
- ಈ ವ್ಯವಸ್ಥೆ ಚೆಕ್ ಪಾವತಿದಾರರು ಕನಿಷ್ಠ ಮಾಹಿತಿಯನ್ನು ಅಂದರೆ ಚೆಕ್ನ ದಿನಾಂಕ ಹೆಸರು ಸೇರಿದಂತೆ ಮೇಲೆ ತಿಳಿಸಿದ ಅಂಶಗಳನ್ನು ಮೊಬೈಲ್ ಸಂದೇಶ, ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಗ್ ಅಥವಾ ಎಟಿಎಂ ಮೂಲಕ ಚೆಕ್ ನೀಡಲಾಗುವುದು.
- ಚೆಕ್ ವ್ಯವಹಾರಕ್ಕೂ ಮುನ್ನ ಗ್ರಾಹಕರು ನೀಡಿರುವ ವಿವರಗಳನ್ನು ಕೂಡ ಒಮ್ಮೆ ಪರಿಶೀಲಿಸಲಾಗುವುದು ಇದರಿಂದ ಅವ್ಯವಹಾರ ತಡೆಗೆ ಸಹಾಯವಾಗಲಿದೆ.
- ಅಷ್ಟೇ ಅಲ್ಲದೇ, ಚೆಕ್ ವಿತ್ ಡ್ರಾ ಆದಲ್ಲಿ, ವ್ಯತ್ಯಾಸ ಕಂಡುಬಂದಲ್ಲಿ ಬ್ಯಾಂಕ್ಗಳು ಚೆಕ್ಗಳನ್ನು ಮೊಟಕುಗೊಳಿಸುವ ಮೂಲಕ ತಕ್ಷಣಕ್ಕೆ ಪರಿಹಾರ ಕ್ರಮ ತೆಗೆದುಕೊಳ್ಳಲಿದೆ.
- ರಾಷ್ಟ್ರೀಯ ಪಾವತಿ ನಿಗಮ ಈ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಿದೆ. 50ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಚೆಕ್ ನೀಡುವ ಎಲ್ಲಾ ಖಾತೆದಾರರಿಗೆ ಇದನ್ನು ಸಕ್ರಿಯಗೊಳಿಸಾಗುವುದು.
- 'ಧನಾತ್ಮಾಕ ಪಾವತಿ ವ್ಯವಸ್ಥೆ' ಕುರಿತು ಅರಿವು ಮೂಡಿಸಲು ಮೊಬೈಲ್ ಸಂದೇಶಗಳನ್ನು ಆಯಾ ಬ್ಯಾಂಕ್ ಗ್ರಾಹಕರಿಗೆ ನೀಡಲಿದೆ. ಇದರ ಜೊತೆಗೆ ಎಟಿಎಂ ಹಾಗೂ ಬ್ಯಾಂಕ್ ವೆಬ್ಸೈಟ್ ಮತ್ತು ಇಂಟರ್ನೆಟ್ ಬ್ಯಾಂಕ್ ಮೂಲಕವೂ ಜಾಗೃತಿ ಮೂಡಿಸಲಾಗುವುದು.
- 'ಧನಾತ್ಮಾಕ ಪಾವತಿ ವ್ಯವಸ್ಥೆ' ಅನುಸಾರವಾಗಿ ಚೆಕ್ ಸ್ವೀಕರಿಸುವಾಗಿನ ತೊಂದರೆಗಳನ್ನು ಸಿಟಿಸಿ ಗ್ರೇಡ್ ಮೂಲಕ ಪರಿಹಾರ ಮಾಡಲಾಗುದು.
- ಜೊತೆಗೆ ಸಿಟಿಎಸ್ ಹೊರಗೆ ಠೇವಣಿಸಿ ಇರಿಸಿದ ಚೆಕ್ಗಳಿಗೆ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರಲು ಕೂಡ ಬ್ಯಾಂಕ್ಗಳು ಮುಕ್ತವಾಗಿರುತ್ತವೆ.