RBI ಹೊಸ ನಿಯಮ: ವಾರಾಂತ್ಯದ ರಜಾ ದಿನಗಳಲ್ಲೂ ಬಿಲ್‍ಗಳ ಪಾವತಿಗೆ ಅವಕಾಶ

ಆಗಸ್ಟ್ 1 ನೇ ದಿನಾಂಕದಿಂದ ವಾರದ ಕೊನೆಯಲ್ಲಿಯೂ ಹಣದ ವಹಿವಾಟಿಗೆ ಆರ್‌ಬಿಐ ಅವಕಾಶ ನೀಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್.

ಭಾರತೀಯ ರಿಸರ್ವ್ ಬ್ಯಾಂಕ್.

  • Share this:

    ವ್ಯಕ್ತಿಯು ಯಾವುದೇ ಹಣದ ವಹಿವಾಟಿಗೆ ವಾರದ ಕೊನೆ ಬರುವ ಬದಲು ಆ ಕೆಲಸವನ್ನು ಮಾಡಿ ಮುಗಿಸಬೇಕಾಗಿತ್ತು. ಆದರೆ ಆಗಸ್ಟ್ ತಿಂಗಳಿನಿಂದ ಗ್ರಾಹಕರಿಗೆ ಆ ಯಾವುದೇ ತೊಂದರೆ ಇಲ್ಲ. ಏಕೆಂದರೆ ಆರ್‌ಬಿಐ ಈ ನಿಯಮದಲ್ಲಿ ಬದಲಾವಣೆ ತಂದಿದೆ.ಅಂದರೆ ಸಂಬಳ, ಪಿಂಚಣಿ ಹಣ, ಮತ್ತು ಇಎಂಐ ಪಾವತಿಯನ್ನು ವಾರದ ಅಂತ್ಯದೊಳಗೆ ಗ್ರಾಹಕರು ಪಾವತಿ ಮಾಡಬೇಕಾಗಿತ್ತು. ಆದರೆ ಗ್ರಾಹಕರು ಆಗಸ್ಟ್ 1 ನೇ ದಿನಾಂಕದಿಂದ ವಾರದ ಕೊನೆಯಲ್ಲಿಯೂ ಹಣದ ವಹಿವಾಟಿಗೆ ಆರ್‌ಬಿಐ ಅವಕಾಶ ನೀಡಿದೆ.


    ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ನ್ಯಾಚ್) ನ ನಿಯಮಗಳನ್ನು ಬದಲಾಯಿಸಿದ ಆರ್‌ಬಿಐ ಈ ಹೊಸ ನಿಯಮ ಜಾರಿಗೆ ತಂದಿದೆ. ಈ ಮೂಲಕ ನ್ಯಾಚ್‍ನ ಸೇವೆಗಳು ವಾರ ಪೂರ್ತಿ ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರಸ್ತುತ ಸೋಮವಾರದಿಂದ ಶುಕ್ರವಾರದವರೆಗೆ ಬ್ಯಾಂಕುಗಳು ತೆರೆದಾಗ ಮಾತ್ರ ಸೇವೆ ಲಭ್ಯವಿತ್ತು.


    ಎಲ್ಲಾ ದಿನ ನ್ಯಾಚ್ ಸೌಲಭ್ಯ
    ಕೆಲವೊಮ್ಮೆ, ತಿಂಗಳ ಮೊದಲ ದಿನವು ವಾರಾಂತ್ಯದಲ್ಲಿ ಬರುತ್ತದೆ, ಈ ಕಾರಣದಿಂದಾಗಿ ಜನರು ತಮ್ಮ ಸಂಬಳವನ್ನು ಜಮಾ ಮಾಡಲು ಸೋಮವಾರದವರೆಗೆ ಕಾಯಬೇಕಾಗುತ್ತದೆ. ಗ್ರಾಹಕರ ಕ್ರೆಡಿಟ್ ನೀತಿ ಪರಿಶೀಲನೆಯ ಸಂದರ್ಭದಲ್ಲಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರ ಅನುಕೂಲವನ್ನು ಇನ್ನಷ್ಟು ಹೆಚ್ಚಿಸಲು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್‍ಟಿಜಿಎಸ್), ನ್ಯಾಚ್ (ಪ್ರಸ್ತುತ ಬ್ಯಾಂಕುಗಳಲ್ಲಿ ಕೆಲಸದ ದಿನಗಳಲ್ಲಿ ಲಭ್ಯ) ತಮ್ಮ ಸೇವೆಯನ್ನು ಆಗಸ್ಟ್ 1, 2021 ರಿಂದ ಜಾರಿಗೆ ಬರುವಂತೆ ವಾರದ ಎಲ್ಲಾ ದಿನಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ.


    ಈಗ ವಾರಾಂತ್ಯದಲ್ಲಿಯೂ ಸಂಬಳ, ಪಿಂಚಣಿ, ಇಎಂಐ ಪಾವತಿ
    ನ್ಯಾಚ್ ಎನ್ನುವುದು ಭಾರತದ ಪಾವತಿ ನಿಗಮ (ಎನ್‍ಪಿಸಿಐ) ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆಯಾಗಿದೆ. ಇದು ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಸಾಲ ವರ್ಗಾವಣೆಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆ. ಇದಲ್ಲದೆ ವಿದ್ಯುತ್ ಬಿಲ್, ಗ್ಯಾಸ್, ಟೆಲಿಫೋನ್, ನೀರು, ಸಾಲ ಇಎಂಐ, ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ವಿಮಾ ಪ್ರೀಮಿಯಂ ಪಾವತಿ ಸೌಲಭ್ಯವನ್ನು ಸಹ ಒದಗಿಸುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ನೀವು ಸೋಮವಾರದಿಂದ ಶುಕ್ರವಾರದವರೆಗೆ ಕಾಯಬೇಕಾಗಿಲ್ಲ, ಅಂದರೆ, ಈ ಎಲ್ಲಾ ಸೌಲಭ್ಯಗಳನ್ನು ವಾರಾಂತ್ಯದಲ್ಲಿಯೂ ಸಹ ಪಡೆಯಬಹುದು.


    ಇದನ್ನೂ ಓದಿ: Debit - Credit Card: ಆಗಸ್ಟ್ 1ರಿಂದ ATMನಿಂದ ಹಣ ಡ್ರಾ ಮಾಡಿದಾಗ ಶುಲ್ಕ ತೆರಬೇಕು, RBI ಹೊಸಾ ನಿಯಮ

    ನ್ಯಾಚ್ ತನ್ನ ಫಲಾನುಭವಿಗಳಿಗಾಗಿ ಜನಪ್ರಿಯ ಮತ್ತು ಪ್ರಮುಖ ಡಿಜಿಟಲ್ ಮೋಡ್ ಆಫ್ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‍ಫರ್ (ಡಿಬಿಟಿ) ಯಾಗಿ ಹೊರಹೊಮ್ಮಿದೆ ಎಂದು ಆರ್‌ಬಿಐ ಹೇಳಿದೆ,


    ಇದು ಕೋವಿಡ್-19 ಸಮಯದಲ್ಲಿ ಸರ್ಕಾರದ ಸಬ್ಸಿಡಿಗಳನ್ನು ಸಮಯೋಚಿತವಾಗಿ ಮತ್ತು ಪಾರದರ್ಶಕವಾಗಿ ವರ್ಗಾಯಿಸಲು ಸಹಾಯ ಮಾಡುತ್ತದೆ. ಪ್ರಸ್ತುತ, ಬ್ಯಾಂಕುಗಳು ಕೆಲಸ ಮಾಡುವ ದಿನಗಳಲ್ಲಿ ಮಾತ್ರ ನ್ಯಾಚ್ ಸೇವೆಗಳು ಲಭ್ಯವಿರುತ್ತವೆ, ಆದರೆ ಆಗಸ್ಟ್ 1 ರಿಂದ ಈ ಸೌಲಭ್ಯವು ಎಲ್ಲಾ 7 ದಿನಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ.

    First published: