ಗ್ರಾಹಕರಿಗೆ ಸಿಹಿಸುದ್ದಿ: ಪ್ರಮುಖ ಪಾಲಿಸಿಗಳ ದರ ಇಳಿಕೆಗೆ ಮುಂದಾದ ಆರ್​​ಬಿಐ

ಕಾರ್ಪೊರೇಟ್ ತೆರಿಗೆಯಂತೆ ಕೆಲವು ವಸ್ತುಗಳ ಮೇಲಿನ ಜಿಎಸ್​​ಟಿ ಕಡಿಮೆಯೂ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ  ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ.

news18
Updated:September 30, 2019, 6:15 PM IST
ಗ್ರಾಹಕರಿಗೆ ಸಿಹಿಸುದ್ದಿ: ಪ್ರಮುಖ ಪಾಲಿಸಿಗಳ ದರ ಇಳಿಕೆಗೆ ಮುಂದಾದ ಆರ್​​ಬಿಐ
ಸಾಂದರ್ಭಿಕ ಚಿತ್ರ
  • News18
  • Last Updated: September 30, 2019, 6:15 PM IST
  • Share this:
ನವದೆಹಲಿ(ಸೆ.30): ಹಬ್ಬದ ಋತುವಿನಲ್ಲಿ ರಿಸರ್ವ್​​ ಬ್ಯಾಂಕ್​​ ಆಫ್​​ ಇಂಡಿಯಾ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್​​ ತೆರಿಗೆ ಮಾಡಿದ ಬೆನ್ನಲ್ಲೀಗ ಆರ್​ಬಿಐ ಸಂಸ್ಥೆಯೂ ಪ್ರಮುಖ ನೀತಿಗಳ ದರ ಇಳಿಕೆ ಮಾಡಲು ಮುಂದಾಗಿದೆ.

ಆರ್ಥಿಕ ಚಟುವಟಿಕೆಗಳ ಉತ್ತೇಜನೆಗಾಗಿ ಭಾರತೀಯ ರಿಸರ್ವ್​​ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಆರ್​​ಬಿಐ ಸಂಸ್ಥೆ ಪ್ರಮುಖ ಪಾಲಿಸಿಗಳ ದರ ಇಳಿಕೆ ಮಾಡಲಿದ್ದು, ಮುಂದಿನ ಅಕ್ಟೋಬರ್​​​​ 4ರಿಂದ ಈ ದರ ಚಾಲ್ತಿಗೆ ಬರಲಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿತ್ತು. ಈ ಬೆನ್ನಲ್ಲೀಗ ಆರ್​​ಬಿಐ ಕೂಡ ಪ್ರಮುಖ ಪಾಲಿಸಿಗಳ ದರ ಇಳಿಕೆಗೆ ಮುಂದಾಗಿದೆ. ಈ ನೂತನ ಪಾಲಿಸಿಗಳ ದರವನ್ನು ಇದೇ ಶುಕ್ರವಾರ ಆರ್​​ಬಿಐ ಗವರ್ನರ್​​​ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ ಪ್ರಕಟಿಸಲಿದೆ.

ಆರ್​​ಬಿಐ ಈಗಾಗಲೇ 4 ಬಾರಿ ರೆಪೋ ದರ ಕಡಿತಗೊಳಿಸಿದೆ. ರೆಪೋ ದರ ಕಡಿತದಿಂದಾಗಿ ಎಸ್​​ಬಿಐ ಗೃಹಸಾಲ ಬಡ್ಡಿದರ ಶೇ.0.10ರಷ್ಟು ಕಡಿತವಾಗಿತ್ತು. ಈ ಮೂಲಕ 2019-20 ಆರ್ಥಿಕ ವರ್ಷದಲ್ಲಿ ಎಸ್​ಬಿಐ 5ನೇ ಬಾರಿ ಈ ರೀತಿ ಎಂಸಿಎಲ್‌ ಆರ್ ದರ ಇಳಿಕೆ ಮಾಡಿತ್ತು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಸ್ಟೀಸ್​​ ತಾಹಿಲ್​​​​ ರಮಣಿ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್​ ಆದೇಶ

ಕಾರ್ಪೊರೇಟ್ ತೆರಿಗೆಯಂತೆ ಕೆಲವು ವಸ್ತುಗಳ ಮೇಲಿನ ಜಿಎಸ್​​ಟಿ ಕಡಿಮೆಯೂ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ  ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ.

2019-20 ಸಾಲಿನಲ್ಲಿ ಜಿಡಿಪಿ ಶೇ.7.2ರಷ್ಟು ಪ್ರಗತಿ ಹೊಂದಿದೆ ಎಂದು ಆರ್​ಬಿಐ ಅಂದಾಜಿಸಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ ಅರ್ಧ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.6.8-7.1 ರ ಶ್ರೇಣಿಯಲ್ಲಿ ಪ್ರಗತಿ ಸಾಧಿಸಿದೆ. ಹಾಗೂ ದ್ವಿತಿಯಾರ್ಧ ಸಾಲಿನಲ್ಲಿ ಜಿಡಿಪಿ ಶೇ.7.3-7.4 ರ ಶ್ರೇಣಿಯಲ್ಲಿ ಸಮತೋಲನ ಕಾಯ್ದುಕೊಂಡಿದೆ.---------
First published: September 30, 2019, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading