RBI Repo Rate: ಸತತ 5ನೇ ಬಾರಿ ರೆಪೋ ದರ ಇಳಿಕೆ ಮಾಡುವ ಚಿಂತನೆಯಲ್ಲಿ ಆರ್​ಬಿಐ; ಇನ್ನಷ್ಟು ಅಗ್ಗವಾಗಲಿದೆಯಾ ಸಾಲ?

ಇತ್ತೀಚೆಗೆ ಪ್ರಕಟಿಸಿದ ಕಾರ್ಪೊರೇಟ್ ಟ್ಯಾಕ್ಸ್ ಕಡಿತದಿಂದ ವಿದೇಶೀ ಬಂಡವಾಳ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆಯಾದರೂ ಅದಕ್ಕೆ ಇನ್ನೂ ಸಮಯ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ದೇಶೀಯ ಅನುಭೋಗವನ್ನು ಉತ್ತೇಜಿಸುವ ಕ್ರಮಗಳ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಆರ್​ಬಿಐನ ರೆಪೋ ದರ ಇಳಿಕೆಯೂ ಅಂಥ ಕ್ರಮಗಳಲ್ಲೊಂದಾಗಿದೆ.

Vijayasarthy SN | news18
Updated:October 3, 2019, 11:05 AM IST
RBI Repo Rate: ಸತತ 5ನೇ ಬಾರಿ ರೆಪೋ ದರ ಇಳಿಕೆ ಮಾಡುವ ಚಿಂತನೆಯಲ್ಲಿ ಆರ್​ಬಿಐ; ಇನ್ನಷ್ಟು ಅಗ್ಗವಾಗಲಿದೆಯಾ ಸಾಲ?
ಪ್ರಾತಿನಿಧಿಕ ಚಿತ್ರ
  • News18
  • Last Updated: October 3, 2019, 11:05 AM IST
  • Share this:
ನವದೆಹಲಿ(ಅ. 03): ಅನಿರೀಕ್ಷಿತ ರೀತಿಯಲ್ಲಿ ಸತತವಾಗಿ ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಪುಷ್ಟಿ ನೀಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಲೇ ಇದೆ. ಕಳೆದ ನಾಲ್ಕು ಬಾರಿ ಸತತವಾಗಿ ರೆಪೋ ದರ ಇಳಿಕೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿಯೂ ಅದೇ ಹಾದಿಯಲ್ಲಿ ಸಾಗುವ ಇರಾದೆಯಲ್ಲಿದೆ. ಮೂಲಗಳ ಪ್ರಕಾರ ಆರ್​ಬಿಐ ಮತ್ತೊಮ್ಮೆ ರೆಪೋ ದರ ಇಳಿಕೆ ಮಾಡುವ ಚಿಂತನೆಯಲ್ಲಿದೆ. ಇನ್ನಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ಸಿಗುವಂತೆ ಮಾಡಿ ಆ ಮೂಲಕ ಜನರ ಅನುಭೋಗದ ಪ್ರಮಾಣ ಹೆಚ್ಚಿಸುವ ಉದ್ದೇಶ ಇದರಲ್ಲಿದೆ.

ಇದೇ ಶುಕ್ರವಾರದಂದು ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು, ಅದರಲ್ಲಿ ರೆಪೋ ದರ ಇಳಿಕೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಇದೆ. ಕಳೆದ ಬಾರಿ ನಡೆದ ಸಮಿತಿ ಸಭೆಯಲ್ಲಿ ಆರ್​ಬಿಐ ರೆಪೋ ದರದಲ್ಲಿ 35 ಬೇಸಿಸ್ ಪಾಯಿಂಟ್​ಗಳಷ್ಟು ಕಡಿತಗೊಳಿಸಿ ಶೇ. 5.4ಕ್ಕೆ ತಂದು ನಿಲ್ಲಿಸಿತ್ತು. ಈ ಬಾರಿ ಸುಮಾರು 25 ಮೂಲಾಂಕಗಳಷ್ಟು ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಹಜ ಸ್ಥಿತಿಯತ್ತ ಜಮ್ಮು-ಕಾಶ್ಮೀರ: ಅ.3ರಿಂದಲೇ ಶಾಲಾ-ಕಾಲೇಜುಗಳು ಪುನರಾರಂಭ

ದೇಶದ ಜಿಡಿಪಿ ಬೆಳವಣಿಗೆ ದರ ಶೇ. 5ಕ್ಕೆ ಇಳಿಕೆಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಆರ್ಥಿಕ ದುಸ್ಥಿತಿ ಇದೆ. ನಿರುದ್ಯೋಗ ಪ್ರಮಾಣವು ಆತಂಕಕಾರಿ ಎನ್ನುಷ್ಟರ ಮಟ್ಟಿಗೆ ಏರಿಕೆಯಾಗುತ್ತಿದೆ. ಇನ್ನೂ ಕಳವಳಕಾರಿ ಅಂಶವೆಂದರೆ ಆರ್ಥಿಕ ಅಭಿವೃದ್ಧಿಗೆ ಬುನಾದಿ ಎಂದೇ ಪರಿಗಣಿಸಲಾಗಿರುವ ಎಂಟು ಪ್ರಮುಖ ವಲಯಗಳು ಋಣಾತ್ಮಕ ಬೆಳವಣಿಗೆ ಕಂಡಿರುವುದು ಸರ್ಕಾರದೊಳಗಿನ ಆರ್ಥಿಕ ತಜ್ಞರಿಗೂ ಹತಾಶೆ ತಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವಿಧ ರೀತಿಯಲ್ಲಿ ಸುಧಾರಣಾ ಕ್ರಮ ಕೈಗೊಂಡರೂ, ಹಲವು ರಿಲೀಫ್ ಪ್ಯಾಕೇಜ್ ಘೋಷಿಸಿದರೂ ಆರ್ಥಿಕತೆಗೆ ಪುಷ್ಟಿ ಸಿಗುವ ಸೂಚನೆ ಕಾಣುತ್ತಿಲ್ಲ.

ಇತ್ತೀಚೆಗೆ ಪ್ರಕಟಿಸಿದ ಕಾರ್ಪೊರೇಟ್ ಟ್ಯಾಕ್ಸ್ ಕಡಿತದಿಂದ ವಿದೇಶೀ ಬಂಡವಾಳ ಹೂಡಿಕೆ ಹರಿದುಬರುವ ನಿರೀಕ್ಷೆ ಇದೆಯಾದರೂ ಅದಕ್ಕೆ ಇನ್ನೂ ಸಮಯ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ದೇಶೀಯ ಅನುಭೋಗವನ್ನು ಉತ್ತೇಜಿಸುವ ಕ್ರಮಗಳ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಆರ್​ಬಿಐನ ರೆಪೋ ದರ ಇಳಿಕೆಯೂ ಅಂಥ ಕ್ರಮಗಳಲ್ಲೊಂದಾಗಿದೆ.

ಇದನ್ನೂ ಓದಿ: ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಬಾಪು ಬೋಧನೆಯಲ್ಲಿ ಪರಿಹಾರವಿದೆ; ಪ್ರಧಾನಿ ಮೋದಿ

ಎನಿದು ರೆಪೋ ದರ?
Loading...

ರೆಪೋ ದರ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ರೆಪೋ ದರ ಇಳಿಕೆಯಾದಾಕ್ಷಣ ಬ್ಯಾಂಕ್​ಗಳು ನೀಡಿರುವ ಸಾಲದ ಮೇಲಿನ ಬಡ್ಡಿ ದರ ತತ್​​ಕ್ಷಣವೇ ಇಳಿಯುವ ಸಾಧ್ಯತೆ ಕಡಿಮೆಯಾಗಿದೆ. ಬಡ್ಡಿ ದರ ಬದಲಾವಣೆಯನ್ನ ಸರಿಹೊಂದಿಸಲು ಕೆಲ ತಿಂಗಳುಗಳೇ ಇಳಿಯಬಹುದು. ಆರ್ಥಿಕ ಪುನಶ್ಚೇತನಕ್ಕೆ ರೆಪೋ ದರ ಇಳಿಕೆಯ ಕ್ರಮವೊಂದನ್ನೇ ನೆಚ್ಚಿಕೊಳ್ಳಲು ಆಗುವುದಿಲ್ಲ ಎನ್ನುವುದು ತಜ್ಞರ ಅಭಿಮತ.

(ವರದಿ: ಸಿಂಧು ಭಟ್ಟಾಚಾರ್ಯ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...