ಆರ್ಥಿಕ ಚೇತನಕ್ಕೆ ಆರ್ಬಿಐ ಕಾರ್ಯಸೂಚಿ; ಒಂದೇ ವರ್ಷದಲ್ಲಿ ಸತತ 5ನೇ ಬಾರಿ ಸಾಲದ ಮೇಲಿನ ರೆಪೋ ದರ ಇಳಿಕೆ
ರಾಷ್ಟ್ರದಲ್ಲಿ ತಲೆದೋರಿರುವ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಸಾಲದ ಮೇಲಿನ ರೆಪೋ ಬಡ್ಡಿ ದರವನ್ನು ಕಡಿತಗೊಳಿಸುವ ಹಾಗೂ ವಿತ್ತೀಯ ನೀತಿಯನ್ನು ಸರಾಗಗೊಳಿಸುವ ಕುರಿತು ಆಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಹಿಂದೆಯೇ ಸೂಚನೆ ನೀಡಿದ್ದರು.

ಆರ್ಬಿಐ
- News18 Kannada
- Last Updated: October 4, 2019, 11:13 AM IST
ನವ ದೆಹಲಿ (ಅಕ್ಟೋಬರ್ 04): ರಾಷ್ಟ್ರದಲ್ಲಿ ಹಣದುಬ್ಬರವನ್ನು ನಿಯಂತ್ರಿಸಿ ಆರ್ಥಿಕತೆಯನ್ನು ಮತ್ತೆ ಅಭಿವೃದ್ಧಿಯ ಹಳಿಗೆ ತರುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದಲ್ಲಿ 5ನೇ ಬಾರಿಗೆ ಮತ್ತೆ ರೆಪೋ ದರವನ್ನು ಇಳಿಕೆ ಮಾಡಲು ಮುಂದಾಗಿದೆ. ಈ ಮಹತ್ವದ ನಿರ್ಧಾರಕ್ಕೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯ ಹಣಕಾಸು ನೀತಿ ಸಂಹಿತೆಯ 6 ಸದಸ್ಯರೂ ಒಪ್ಪಿಗೆ ಸೂಚಿಸಿದ್ದಾರೆ.
ಕಳೆದ ಆಗಸ್ಟ್ನಲ್ಲಿ ನಡೆದ ಕೊನೆಯ ಹಣಕಾಸು ಸಮಿತಿ ಸಭೆಯಲ್ಲಿ ರೆಪೋ ಸಾಲದ ದರವನ್ನು 35 ಮೂಲಾಂಕದಷ್ಟು ಇಳಿಕೆ ಮಾಡಲಾಗಿತ್ತು. ಇದರೊಂದಿಗೆ ಆರ್ಬಿಐ ರೆಪೋ ದರ 5.40 ಪ್ರತಿಶತಕ್ಕೆ ಇಳಿಕೆಯಾಗಿತ್ತು. ಇಂದಿನ ಸಭೆಯಲ್ಲಿ ಕೇಂದ್ರೀಯ ಬ್ಯಾಂಕ್ ತನ್ನ ಪ್ರಮುಖ ಸಾಲದ ದರವನ್ನು ಕನಿಷ್ಟ 25 ಮೂಲಾಂಕದಷ್ಟು ಇಳಿಕೆ ಮಾಡಲು ನಿಶ್ಚಯಿಸಿದ್ದು, ರೆಪೋ ದರ 5.15 ಪ್ರತಿಶತಕ್ಕೆ ಇಳಿಕೆಯಾಗಲಿದೆ. ಇದರೊಂದಿಗೆ ಆರ್ಬಿಐ ಈ ವರ್ಷದಲ್ಲಿ ಇಲ್ಲಿಯವರೆಗೆ 135 ಮೂಲಾಂಕಷ್ಟು ರೆಪೋ ದರ ಕಡಿತ ಮಾಡಿದಂತಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ರಾಷ್ಟ್ರದಲ್ಲಿ ತಲೆದೋರಿರುವ ಹಣದುಬ್ಬರವನ್ನು ತಡೆಯುವ ನಿಟ್ಟಿನಲ್ಲಿ ಸಾಲದ ಮೇಲಿನ ರೆಪೋ ಬಡ್ಡಿ ದರವನ್ನು ಕಡಿತಗೊಳಿಸುವ ಹಾಗೂ ವಿತ್ತೀಯ ನೀತಿಯನ್ನು ಸರಾಗಗೊಳಿಸುವ ಕುರಿತು ಆಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಹಿಂದೆಯೇ ಸೂಚನೆ ನೀಡಿದ್ದರು.ಕಳೆದ ತಿಂಗಳು ಕೇಂದ್ರ ಸರ್ಕಾರ ಕಾರ್ಪೋರೇಟ್ ತೆರಿಗೆ ಹಾಗೂ ವಿದೇಶದಲ್ಲಿ ಪೆಟ್ರೋಲಿಯಂ ಮೇಲಿನ ಹೂಡಿಕೆದಾರರ ತೆರಿಗೆ ದರದಲ್ಲಿ ಕಡಿತ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿತ್ತು. ಪರಿಣಾಮ ಭಾರತೀಯ ಮಾರುಕಟ್ಟೆ ಚೇತರಿಕೆ ಕಂಡಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈ ಮಾಸಿಕಕ್ಕೆ ಹೋಲಿಕೆ ಮಾಡಿದರೆ ಮೂರನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ಬೆಳವಣಿಗೆಯ ಹಂತದಲ್ಲಿತ್ತು. ಶೇ. 5ರಷ್ಟು ಹೆಚ್ಚುವರಿ ಲಾಭದಾಯಕವಾಗಿತ್ತು.
ಮುಂಬರುವ ಎಂಪಿಸಿ ಸಭೆಯಲ್ಲಿ ಬ್ಯಾಂಕುಗಳಿಗೆ ತಮ್ಮ ಸಾಲದ ಉತ್ಪನ್ನಗಳನ್ನು ರೆಪೋ ದರದಂತೆ ಬಾಹ್ಯ ಮಾನದಂಡಗಳೊಂದಿಗೆ ವಿಲೀನಗೊಳಿಸಲು ಆರ್ಬಿಐ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1 ರಿಂದಲೇ ಸಾಲದ ಮೇಲಿನ ದರಗಳ ಕಡಿತ ಸಾಲಗಾರರಿಗೆ ವೇಗವಾಗಿ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ರೆಪೋ ದರ ಇಳಿಸಿದ ಆರ್ಬಿಐ; ಕಡಿಮೆಯಾಗಲಿದೆಯಾ ಬಡ್ಡಿ ದರ?

Loading...