ಆರ್​ಬಿಐ ರೆಪೋ ದರದಲ್ಲಿ ಬದಲಾವಣೆ ಇಲ್ಲ; ಅಂದಾಜು ಜಿಡಿಪಿ ಶೇ. 6.1ರಿಂದ 5ಕ್ಕೆ ಇಳಿಕೆ

ಆರ್​ಬಿಐ

ಆರ್​ಬಿಐ

ಈ ಮೊದಲು ಸತತ ಐದು ಬಾರಿ ರೆಪೋ ದರದಲ್ಲಿ ಇಳಿಕೆಯಾಗಿತ್ತು. ಆದರೆ, ಈ ಬಾರಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲದಿರುವುದು ಗಮನಾರ್ಹ.

  • News18
  • 4-MIN READ
  • Last Updated :
  • Share this:
    top videos

      ನವದೆಹಲಿ(ಡಿ. 05): ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಅಂದರೆ, ಆರ್​ಬಿಐನ ರೆಪೋ ದರ ಶೇ. 5.15ರಲ್ಲೇ ಇರಲಿದೆ. ಕುಸಿಯುತ್ತಲೇ ಇರುವ ಆರ್ಥಿಕತೆಯನ್ನು ಸುಧಾರಿಸಲು ಆರ್​ಬಿಐ ಈ ಬಾರಿಯೂ ತನ್ನ ಬಡ್ಡಿ ದರವನ್ನು ಇಳಿಕೆ ಮಾಡುವ ನಿರೀಕ್ಷೆ ಇತ್ತು. ಈ ಮೊದಲು ಸತತ ಐದು ಬಾರಿ ರೆಪೋ ದರದಲ್ಲಿ ಇಳಿಕೆಯಾಗಿತ್ತು. ಆದರೆ, ಈ ಬಾರಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲದಿರುವುದು ಗಮನಾರ್ಹ.

      ಇದೇ ವೇಳೆ, ಜಿಡಿಪಿಯ ಪೂರ್ವಬಾವಿ ಅಂದಾಜು ದರವನ್ನು ಶೇ. 6.1ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಅಂದರೆ, ಜಿಡಿಪಿ ಶೇ. 5ರ ದರದಲ್ಲಿ ಅಭಿವೃದ್ಧಿ ಸಾಧಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಬಾರಿಯ ತ್ರೈಮಾಸಿಕ ಅವಧಿಯಲ್ಲಿ ದೇಶದ ಜಿಡಿಪಿ ಅಭಿವೃದ್ಧಿ ದರವು ಶೇ. 4.5ಕ್ಕೆ ಇಳಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಇದು ಶೇ. 5ರಷ್ಟಿತ್ತು.

      ಇದನ್ನೂ ಓದಿ: ನರಸಿಂಹರಾವ್​ ಐಕೆ ಗುಜ್ರಾಲ್ ಸಲಹೆ ಸ್ವೀಕರಿಸಿದ್ದರೆ ಸಿಖ್ ಹತ್ಯಾಕಾಂಡ ನಿಯಂತ್ರಿಸಬಹುದಿತ್ತು; ಮನಮೋಹನ್ ಸಿಂಗ್

      “ಆರ್​ಬಿಐನ ಹಣಕಾಸು ನೀತಿ ಸಮಿತಿಯ ಎಲ್ಲಾ ಆರು ಸದಸ್ಯರು ರೆಪೋ ದರದ ಯಥಾಸ್ಥಿತಿ ಪಾಲನೆಗೆ ಬೆಂಬಲ ನೀಡಿದ್ಧಾರೆ. ಭವಿಷ್ಯದಲ್ಲಿ ಬದಲಾವಣೆ ತರುವ ಅವಕಾಶವಿದೆ. ಈದರೆ ಈಗಿನ ಪರಿಸ್ಥಿತಿಯಲ್ಲಿ ದರ ಇಳಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ” ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಐದನೇ ದ್ವೈವಾರ್ಷಿಕ ನೀತಿಯಲ್ಲಿ ತಿಳಿಸಿದೆ.

      ಏನಿದು ರೆಪೋ ದರ?

      ಆರ್​ಬಿಐ ತನ್ನ ವ್ಯಾಪ್ತಿಯಲ್ಲಿರುವ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಹಣಕ್ಕೆ ವಿಧಿಸುವ ಬಡ್ಡಿ ದರವಾಗಿದೆ. ಅಂದರೆ, ಈಗ ಆರ್​ಬಿಐ ಶೇ. 5.15 ಬಡ್ಡಿ ದರದಲ್ಲಿ ಕಮರ್ಷಿಲ್ ಬ್ಯಾಂಕುಗಳಿಗೆ ಸಾಲ ನೀಡುತ್ತದೆ. ವಾಣಿಜ್ಯ ಬ್ಯಾಂಕುಗಳು ಈ ಕಡಿಮೆ ಬಡ್ಡಿ ದರವನ್ಜು ತನ್ನ ಗ್ರಾಹಕರಿಗೆ ವರ್ಗಾಯಿಸುವುದು ಅದರ ಇಚ್ಛೆಗೆ ಬಿಟ್ಟಿದ್ದು. ಕೆಲವೊಮ್ಮೆ ಬ್ಯಾಂಕುಗಳು ರೆಪೋ ದರದ ಇಳಿಕೆ ಭಾಗ್ಯವನ್ನು ತನ್ನ ಗ್ರಾಹಕರಿಗೂ ವರ್ಗಾಯಿಸುವುದಿದೆ.

      ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

      First published: