YES Bank: ಕೆಟ್ಟ ಸಾಲದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯೆಸ್​ ಬ್ಯಾಂಕ್ ಆಡಳಿತ ಮಂಡಳಿ ಸುಪರ್ದಿಗೆ ಪಡೆದ ಆರ್​ಬಿಐ

ಪಿಎಂಸಿ ಸಹಕಾರ ಬ್ಯಾಂಕ್​ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಆರು ತಿಂಗಳ ಬಳಿಕ ಅದೇ ಮಾದರಿಯ ಮತ್ತೊಂದು ಬ್ಯಾಂಕ್​ ಹಗರಣ ಪತ್ತೆಯಾಗಿದೆ. ಅತಿ ಕೆಟ್ಟ ಸಾಲದಿಂದಾಗಿ ಯೆಸ್​ ಬ್ಯಾಂಕ್ ತೀರಾ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ.

ಯೆಸ್ ಬ್ಯಾಂಕ್.

ಯೆಸ್ ಬ್ಯಾಂಕ್.

  • Share this:
    ನವದೆಹಲಿ: ಕೆಟ್ಟ ಸಾಲದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಯೆಸ್​ ಬ್ಯಾಂಕ್​ ಆಡಳಿತ ಮಂಡಳಿಯನ್ನು ಆರ್​ಬಿಐ ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಮತ್ತು ಬ್ಯಾಂಕ್ ಗ್ರಾಹಕರು ಪ್ರತಿ ಖಾತೆಯಿಂದ 50 ಸಾವಿರದವರೆಗೆ ಮಾತ್ರ ಹಣ ಹಿಂಪಡೆಯಲು ಗರಿಷ್ಠ ಮಿತಿ ವಿಧಿಸಿದೆ. ಮುಂದಿನ ಆದೇಶ ನೀಡುವವರೆಗೆ ಇದು ಜಾರಿಯಲ್ಲಿ ಇರಲಿದೆ.

    ಗುರುವಾರ 'ನಿಷೇಧದ ಆದೇಶ' ಹೊರಡಿಸಿರುವ ಆರ್‌ಬಿಐ ತೊಂದರೆಗೆ ಒಳಗಾಗಿರುವ ಖಾಸಗಿ ಬ್ಯಾಂಕಿಂಗ್‌ ಸಂಸ್ಥೆ ಯೆಸ್ ಬ್ಯಾಂಕ್‌ನ ಎಲ್ಲಾ ಕಾರ್ಯ ಚಟುವಟಿಕೆಗಳ ಪ್ರಾರಂಭ ಅಥವಾ ಮುಂದುವರಿಕೆ ಮೇಲೆ ತಡೆಯಾಜ್ಞೆ ನೀಡಿದೆ. ಈ ಸಂಬಂಧ ಗುರುವಾರ ಸಂಜೆ ಪ್ರಕಟಣೆ ಬಿಡುಗಡೆ ಮಾಡಿರುವ ಆರ್​ಬಿಐ, ಯೆಸ್​ ಬ್ಯಾಂಕ್​ ಮಂಡಳಿಯನ್ನು ತತ್​ಕ್ಷಣದಿಂದ ಜಾರಿಗೆ ಬರುವಂತೆ ವಶಕ್ಕೆ ಪಡೆಯಲಾಗಿದೆ. ಮತ್ತು ಎಸ್​ಬಿಐನ ಮಾಜಿ ಸಿಇಒ ಪ್ರಶಾಂತ್ ಕುಮಾರ್ ಅವರನ್ನು ಆಡಳಿತಗಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದೆ.

    ಪಿಎಂಸಿ ಸಹಕಾರ ಬ್ಯಾಂಕ್​ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದ ಆರು ತಿಂಗಳ ಬಳಿಕ ಅದೇ ಮಾದರಿಯ ಮತ್ತೊಂದು ಬ್ಯಾಂಕ್​ ಹಗರಣ ಪತ್ತೆಯಾಗಿದೆ. ಅತಿ ಕೆಟ್ಟ ಸಾಲದಿಂದಾಗಿ ಯೆಸ್​ ಬ್ಯಾಂಕ್ ತೀರಾ ಆರ್ಥಿಕ ಸಂಕಷ್ಟಕ್ಕೆ ಈಡಾಗಿದೆ. ಬ್ಯಾಂಕ್​ನಲ್ಲಿ ಹಣ ಹೂಡಿದ ಗ್ರಾಹಕರು ಸಹ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

    ಇದನ್ನು ಓದಿ: ಏನಿದು ಪಿಎಂಸಿ ಬ್ಯಾಂಕ್ ಹಗರಣ? ಬ್ಯಾಂಕಿಂಗ್ ವಲಯದ ಕರ್ಮಕಾಂಡದ ಒಂದು ಕಥೆ
    First published: