ಈ ಆರ್ಥಿಕ ವರ್ಷದಲ್ಲಿ 2000 ಮುಖಬೆಲೆಯ ಒಂದೇ ಒಂದು ನೋಟನ್ನು ಮುದ್ರಿಸಿಲ್ಲ ಎಂದು ಮಾಹಿತಿ ಬಹಿರಂಗಗೊಳಿಸಿದ ಆರ್​ಬಿಐ!

ಪಾಕಿಸ್ತಾನ ಮೂಲದಿಂದ ಉತ್ಕೃಷ್ಟ ಗುಣಮಟ್ಟದ ನಕಲಿ ನೋಟುಗ ಹಾವಳಿ ಮತ್ತೆ ಪುನರ್​​ಜೀವಗೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಹೇಳಿದ ಸಮಯದಲ್ಲಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿರುವ ಬೆಳವಣಿಗೆ ನಡೆದಿದೆ.

HR Ramesh | news18-kannada
Updated:October 15, 2019, 7:20 PM IST
ಈ ಆರ್ಥಿಕ ವರ್ಷದಲ್ಲಿ 2000 ಮುಖಬೆಲೆಯ ಒಂದೇ ಒಂದು ನೋಟನ್ನು ಮುದ್ರಿಸಿಲ್ಲ ಎಂದು ಮಾಹಿತಿ ಬಹಿರಂಗಗೊಳಿಸಿದ ಆರ್​ಬಿಐ!
2 ಸಾವಿರ ಮುಖಬೆಲೆಯ ನೋಟುಗಳು
  • Share this:
ನವದೆಹಲಿ: 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇಂಡಿಯಾ ಬಹಿರಂಗಪಡಿಸಿದೆ. ಆರ್​ಟಿಐ ನಡಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಆರ್​ಬಿಐ, ಈ ಆರ್ಥಿಕ ವರ್ಷದಲ್ಲಿ 2 ಸಾವಿರ ಮುಖಬೆಲೆಯ ಒಂದೇ ಒಂದು ನೋಟನ್ನು ಮುದ್ರಿಸಿಲ್ಲ ಎಂದು ತಿಳಿಸಿದೆ. 

2016ರ ನವೆಂಬರ್​ನಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಬಳಿಕ 2000 ಮತ್ತು 500 ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು.

2016-17ರ ಆರ್ಥಿಕ ವರ್ಷದಲ್ಲಿ 3,54,991 ಮಿಲಿಯನ್​ ನೋಟುಗಳನ್ನು ಮುದ್ರಿಸಲಾಗಿತ್ತು ಆರ್​ಬಿಐ ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದೆ. ಹಾಗೆಯೇ, 2017-18ರ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣವನ್ನು ಕಡಿಮೆಗೊಳಿಸಲಾಗಿದೆ. ಆ ವರ್ಷದಲ್ಲಿ 111.507 ಮಿಲಿಯನ್ ನೋಟುಗಳನ್ನು ಹಾಗೂ 2018-19 ಸಾಲಿನಲ್ಲಿ 46.690 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ ಮತ್ತು ಈ ಆರ್ಥಿಕ ವರ್ಷದಲ್ಲಿ ಒಂದೇ ಒಂದು ನೋಟನ್ನು ಸಹ ಮುದ್ರಿಸಲಾಗಿಲ್ಲ ಎಂದು ಆರ್​ಬಿಐ ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಹೇಳಿದೆ.

2000 ಮುಖಬೆಲೆಯ ನೋಟುಗಳು ಕಳ್ಳಸಾಗಣೆ ಮತ್ತು ಇತರೆ ಕಾನೂನುಬಾಹಿರ ಉದ್ದೇಶಗಳಿಗೆ ಹೆಚ್ಚಾಗಿ ಸುಲಭವಾಗಿ ಉಪಯೋಗಕ್ಕೆ ಬರುತ್ತಿವೆ. ಇದು ಸರ್ಕಾರಕ್ಕೆ ಬಹುದೊಡ್ಡ ಹಿನ್ನಡೆ ಉಂಟಾಗಿದೆ. 2000 ಮುಖಬೆಲೆಯ ಆರು ಕೋಟಿ ಅನಾಮಧೇಯ ಹಣವನ್ನು ಆಂಧ್ರಪ್ರದೇಶ-ತಮಿಳುನಾಡು ಗಡಿಯಲ್ಲಿ ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ.

ಇದನ್ನು ಓದಿ: ದೇಶೀಯ ಶಸ್ತ್ರಗಳಿಂದಲೇ ಮುಂದಿನ ಯುದ್ಧ ಗೆಲ್ಲುತ್ತೇವೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಪಾಕಿಸ್ತಾನ ಮೂಲದಿಂದ ಉತ್ಕೃಷ್ಟ ಗುಣಮಟ್ಟದ ನಕಲಿ ನೋಟುಗ ಹಾವಳಿ ಮತ್ತೆ ಪುನರ್​​ಜೀವಗೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಹೇಳಿದ ಸಮಯದಲ್ಲಿ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿರುವ ಬೆಳವಣಿಗೆ ನಡೆದಿದೆ. ಕಳೆದ ಮೂರು ವರ್ಷಗಳಲ್ಲಿ 50 ಕೋಟಿ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಳೆದ ಜೂನ್​ನಲ್ಲಿ ಸರ್ಕಾರ ಹೇಳಿತ್ತು.

First published: October 15, 2019, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading