ಆರ್​​ಬಿಐ ಡಿಜಿಟಲ್​​ ಸಮಿತಿ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ!

ನಂದನ್​​ ನಿಲೇಕಣಿ ಉದ್ಯಮಿ. ಪ್ರಾರಂಭದಿಂದಲೂ ನಾರಾಯಣ ಮೂರ್ತಿಗಳ ಒಡನಾಡಿಯಾಗಿದ್ದ ನಂದನ್, ಮೂರ್ತಿಗಳ ನಿವೃತ್ತಿ ಹೊಂದಿದ ಬಳಿಕ ಇನ್ಫ್ಪೋಸಿಸ್ ಸಂಸ್ಥೆಯ ಸಾರಥ್ಯವಹಿಸಿದರು. ಮುಂದೆ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿದರು. ಹೀಗಾಗಿ ತಮ್ಮ ಪ್ರತಿಷ್ಠಿತ ಇನ್ಫೋಸಿಸ್ ಹುದ್ದೆಯಿಂದ ಹೊರಬೇಕಾಯಿತು.

Ganesh Nachikethu | news18
Updated:January 8, 2019, 7:37 PM IST
ಆರ್​​ಬಿಐ ಡಿಜಿಟಲ್​​ ಸಮಿತಿ ಅಧ್ಯಕ್ಷರಾಗಿ ನಂದನ್ ನಿಲೇಕಣಿ ನೇಮಕ!
ನಂದನ್​​ ನಿಲೇಕಣಿ
  • News18
  • Last Updated: January 8, 2019, 7:37 PM IST
  • Share this:
ನವದೆಹಲಿ(ಜ.08): ಇನ್ಫೋಸಿಸ್​​ ಸಹ ಸಂಸ್ಥಾಪಕ ಹಾಗೂ ಆಧಾರ್​​ ಕಾರ್ಡ್​​ ಸೃಷ್ಟಿಕರ್ತ ನಂದನ್​​ ನಿಲೇಕಣಿಯರನ್ನು ರಿಸರ್ವ್​​ ಬ್ಯಾಂಕ್​ ಆಫ್​​ ಇಂಡಿಯಾದ ಡಿಜಿಟಲ್​​ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಡಿಜಿಟಲ್​​ ಪೇಮೆಂಟ್​ಗೆ ಒತ್ತು ನೀಡಲು ಮುಂದಾಗಿರುವ ಆರ್​​ಬಿಐ ಉನ್ನತ ಸಮಿತಿಯೊಂದನ್ನು ರಚಿಸಿದೆ. ಇದೀಗ ಉನ್ನತ ಸಮಿಯ ಅಧ್ಯಕ್ಷರನ್ನಾಗಿ ನಂದನ್​​ ನಿಲೇಕಣಿ ಅವರನ್ನು ನೇಮಿಸಿದ್ದು, ಐವರು ಸದಸ್ಯರನ್ನು ಒಳಗೊಂಡ ಸಮಿತಿ ಇದಾಗಿದೆ. ಅಲ್ಲದೇ ಇದರ ಸಾರಥ್ಯವನ್ನು ಇಂದಿನಿಂದ ನಿಲೇಕಣಿ ವಹಸಿಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.

ಆರ್​ಬಿಐ ರಚಿತ ಉನ್ನತ ಸಮಿತಿಯಲ್ಲಿ ನಂದನ್​​ ಜೊತೆಗೆ​​ ಸದಸ್ಯರನ್ನಾಗಿ ಆರ್​​ಬಿಐ ಮಾಜಿ ಡೆಪ್ಯೂಟಿ ಗವರ್ನರ್​​ ಎಚ್.ಆರ್.ಖಾನ್, ವಿಜಯಾ ಬ್ಯಾಂಕ್​ನ ಮಾಜಿ ಎಂ.ಡಿ ಹಾಗೂ ಸಿಇಒ ಕಿಶೋರ್ ಸನ್ಸಿ, ಐಟಿ ಹಾಗೂ ಉಕ್ಕು ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣ ಶರ್ಮಾ,  ಐಐಎಂ ಅಹಮದಾಬಾದ್ ನ ಸಂಜಯ್ ಜೈನ್ ಅವರನ್ನು ನೇಮಿಸಲಾಗಿದೆ. ದೇಶದಲ್ಲಿನ ಡಿಜಿಟಲ್​​ ಪೇಮೆಂಟ್​​ ಪಾವತಿ ಬಗೆಗಿನ ಪ್ರಸ್ತುತ ಸ್ಥಿತಿಗತಿಯನ್ನು ಪರಿಶೀಲಿಸುವ ಸಲುವಾಗಿಯೇ ಈ ಸಮಿತಿ ರಚಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಮಜನ್ಮಭೂಮಿ ಸ್ಥಳ ವಿವಾದ: ಸಾಂವಿಧಾನಿಕ ಪೀಠ ರಚನೆ; ಜ. 10ರಿಂದ ವಿಚಾರಣೆ

ಡಿಜಿಟಲ್​ ಮೇಟೆಂಗ್​ಗಾಗಿ ಕೇಂದ್ರ ಸರ್ಕಾರ ಒತ್ತು ನೀಡಲು ಮುಂದಾಗಿದೆ. ಪಾವತಿ ವೇಳೆ ಎದುರಾಗುವ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲು ಸೂಚಿಸಲಾಗುತ್ತದೆ. ಬೇರೆ ಯಾವ್ಯಾವ ದೇಶಗಳಲ್ಲಿ ಡಿಜಿಟಲ್​​ ಪೇಮೆಂಟ್​ ವ್ಯವಸ್ಥೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಕ್ರೈಮ್​​ ನಡೆಯದಂತೇ ಯಾವ? ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇತರೆ ದೇಶದಲ್ಲಿ ಚಾಲ್ತಿಯಲ್ಲಿರುವ ವ್ಯವಸ್ಥೆಗಳನ್ನು ಇಲ್ಲಿ ಹೇಗೆ? ಅನುಷ್ಠಾನ ಮಾಡಬೇಕೆಂದು ಪತ್ತೆ ಹೆಚ್ಚುವುದು ಸಮಿತಿ ಉದ್ದೇಶವಾಗಿದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಬಿಜೆಪಿ ಮತ್ತೆ 'ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​' ಮಂತ್ರ; ಕೇಂದ್ರದ ಅಸ್ತ್ರಕ್ಕೆ ಎಐಎಡಿಎಂಕೆ ವ್ಯಂಗ್ಯ

ನಂದನ್​​ ನಿಲೇಕಣಿ ಹಿನ್ನೆಲೆ: ನಂದನ್​​ ನಿಲೇಕಣಿ ಉದ್ಯಮಿ. ಪ್ರಾರಂಭದಿಂದಲೂ ನಾರಾಯಣ ಮೂರ್ತಿಗಳ ಒಡನಾಡಿಯಾಗಿದ್ದ ನಂದನ್, ಮೂರ್ತಿಗಳ ನಿವೃತ್ತಿ ಹೊಂದಿದ ಬಳಿಕ ಇನ್ಫ್ಪೋಸಿಸ್ ಸಂಸ್ಥೆಯ ಸಾರಥ್ಯವಹಿಸಿದರು. ಮುಂದೆ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಆಧಾರ್ ಗುರುತಿನ ಚೀಟಿ ವ್ಯವಸ್ಥೆಯ ಮುಖ್ಯಸ್ಥರಾಗಲು ಒಪ್ಪಿದರು. ಹೀಗಾಗಿ ತಮ್ಮ ಪ್ರತಿಷ್ಠಿತ ಇನ್ಫೋಸಿಸ್ ಹುದ್ದೆಯಿಂದ ಹೊರಬೇಕಾಯಿತು. ಇನ್ನು ನಂದನ್​​ ನಿಲೇಕಣಿ ಕಾಂಗ್ರೆಸ್​​ ಪಕ್ಷದ ಸದಸ್ಯರೂ ಆಗಿದ್ದಾರೆ.

------------------ವಿಚಾರಣೆ ಮುಗಿಸಿ ಹೊರಬಂದ ಶಿವಣ್ಣ
First published:January 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ