Bank Locker: ಬ್ಯಾಂಕ್ ಲಾಕರ್​​​ಗಳ ನಿಯಮಗಳಲ್ಲಿ ಬದಲಾವಣೆ ತಂದ RBI

ಒಂದು ವೇಳೆ ಯಾವುದೇ ಅಗ್ನಿ ಅನಾಹುತವಾದಲ್ಲಿ, ಕಳ್ಳತನವಾದಲ್ಲಿ, ಕಟ್ಟಡ ಕುಸಿತ, ಅಥವಾ ಬ್ಯಾಂಕ್ ಸಿಬ್ಬಂದಿಯಿಂದ ವಂಚನೆ ನಡೆದಲ್ಲಿ ಬ್ಯಾಂಕ್‌ ಲಾಕರ್‌ನ ವಾರ್ಷಿಕ ಮೊತ್ತದ 100 ಪಟ್ಟು ಹಣವನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಭಾರತೀಯ ರಿಸರ್ವ್ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್

 • Share this:
  ನಿಮ್ಮ ಚಿನ್ನವನ್ನು ಮನೆಯಲ್ಲಿರಿಸಿಕೊಳ್ಳಲಾಗದೇ ಬ್ಯಾಂಕ್ ಲಾಕರ್‌ನಲ್ಲಿ ಇಡುವ ಯೋಜನೆಯನ್ನು ನೀವು ಹೊಂದಿದ್ದರೆ ಆರ್‌ಬಿಐ ವಿಧಿಸಿರುವ ಕೆಲವೊಂದು ಮಾನದಂಡಗಳನ್ನು ನೀವು ಇನ್ಮುಂದೆ ಅನುಸರಿಸಬೇಕಾಗುತ್ತದೆ. ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣಗಳನ್ನು ಇರಿಸುವ ಸಮಯದಲ್ಲಿ ಬ್ಯಾಂಕ್ ನಿಮಗಾಗಿ ಹೊಸ ಲಾಕರ್ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಲಾಕರ್ ಸೌಲಭ್ಯಕ್ಕಾಗಿ ಈ ಮೊದಲು ನಿಗದಿಪಡಿಸಿದ್ದ ಕೆಲವೊಂದು ನಿಯಮಾವಳಿಗಳಲ್ಲಿ ಆರ್‌ಬಿಐ ಬದಲಾವಣೆಗಳನ್ನು ತಂದಿದ್ದು, ಈ ಬದಲಾವಣೆಗಳು ಇನ್ಮುಂದೆ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯವಾಗಲಿದೆ.

  ಬ್ಯಾಂಕ್‌ನ ಹೊಸ ಲಾಕರ್‌ ಸೌಲಭ್ಯವನ್ನು ನೀವು ಪಡೆಯಬೇಕಾದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಹೊಸದಾಗಿ ಮಾರ್ಪಡಿಸಿರುವ ಪರಿಷ್ಕಾರಗಳನ್ನು ಅನುಸರಿಸಬೇಕಾಗುತ್ತದೆ, ಈ ಪರಿಷ್ಕೃತ ಮಾನದಂಡಗಳು ಜನವರಿ 1, 2022 ರಿಂದ ಜಾರಿಗೆ ಬರಲಿವೆ ಎಂಬುದಾಗಿ ಬ್ಯಾಂಕ್ ಮೂಲಗಳು ತಿಳಿಸಿವೆ. ಈ ಪರಿಷ್ಕ್ರತ ಮಾನದಂಡಗಳು ಹೊಸದಾಗಿ ಮತ್ತು ಅಸ್ತಿತ್ವದಲ್ಲಿರುವ ಸುರಕ್ಷಿತ ಠೇವಣಿ ಲಾಕರ್‌ಗಳಿಗೂ ಅನ್ವಯವಾಗಲಿದ್ದು ಬ್ಯಾಂಕಿಂಗ್ ಮತ್ತು ತಂತ್ರಜ್ಞಾನದಲ್ಲಾದ ಬದಲಾವಣೆಗಳನ್ನು ಪರಿಗಣನೆಗೆ ತೆಗೆದುಕೊಂಡು ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸಲು ಈ ಮಾನದಂಡಗಳನ್ನು ಆರ್‌ಬಿಐ ಪರಿಷ್ಕರಿಸಿದೆ.

  ಈ ಸಮಯದಲ್ಲಿ ಬ್ಯಾಂಕುಗಳು ಮತ್ತು ಭಾರತೀಯ ಬ್ಯಾಂಕುಗಳ ಸಂಘವು ಒದಗಿಸಿರುವ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಬ್ಯಾಂಕ್‌ಗಳು ಗ್ರಾಹಕರಿಗೆ ಒದಗಿಸುವ ಠೇವಣಿ ಲಾಕರ್ ಸೌಲಭ್ಯ ಪಡೆಯುವ ಮಾನದಂಡಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಪರಿಷ್ಕರಿಸಿದೆ.

  ಹೊಸದಾಗಿ ಪರಿಷ್ಕ್ರತಗೊಂಡ ಮಾನದಂಡಗಳು  

  ಒಂದು ವೇಳೆ ಯಾವುದೇ ಅಗ್ನಿ ಅನಾಹುತವಾದಲ್ಲಿ, ಕಳ್ಳತನವಾದಲ್ಲಿ, ಕಟ್ಟಡ ಕುಸಿತ, ಅಥವಾ ಬ್ಯಾಂಕ್ ಸಿಬ್ಬಂದಿಯಿಂದ ವಂಚನೆ ನಡೆದಲ್ಲಿ ಬ್ಯಾಂಕ್‌ ಲಾಕರ್‌ನ ವಾರ್ಷಿಕ ಮೊತ್ತದ 100 ಪಟ್ಟು ಹಣವನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಯಾವುದೇ ರೀತಿಯ ಅಪಾಯಕಾರಿ ವಸ್ತುಗಳನ್ನು ಮತ್ತು ಅಕ್ರಮವಾದ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸುವಂತಿಲ್ಲ. ಈ ಕುರಿತಾಗಿ ಬ್ಯಾಂಕುಗಳು ಲಾಕರ್ ಸೌಲಭ್ಯ ಪಡೆಯುವ ಗ್ರಾಹಕರಿಂದ ಮೊದಲೇ ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ.

  ಇದನ್ನೂ ಓದಿ: ನಿತ್ಯ ಕೇವಲ 50 ರೂ. ಹೂಡಿಕೆ ಮೂಲಕ ನೀವು 34 ಲಕ್ಷ ರೂ.ಗಳನ್ನು ಪಡೆಯಬಹುದು.. ಹೇಗೆ ಗೊತ್ತಾ?

  ಬ್ಯಾಂಕುಗಳು ತಮ್ಮ ಶಾಖೆಯಲ್ಲಿ ಖಾಲಿ ಮಾಡಿದಂತಹ ಲಾಕರ್ ಗಳ ಮತ್ತು ಇನ್ನೂ ಲಾಕರ್ ಸೌಲಭ್ಯವನ್ನು ಪಡೆಯಲು ತಮ್ಮ ಹೆಸರು ನೋಂದಾಯಿಸಿದ ಗ್ರಾಹಕರ ವಿವರಗಳ ಪಟ್ಟಿಯೊಂದನ್ನು ತಯಾರಿಸಿ ಇರಿಸಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ.
  ಒಂದು ವೇಳೆ ಗ್ರಾಹಕರ ಸಂಖ್ಯೆ ಹೆಚ್ಚಿದ್ದು, ಹಂಚಿಕೆ ಮಾಡಲು ಲಾಕರ್‌ಗಳು ಲಭ್ಯವಿಲ್ಲದಿದ್ದರೆ, ಲಾಕರ್ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿದವರಿಗೆ, ಅರ್ಜಿ ಸ್ವೀಕೃತಿ ಪತ್ರ ನೀಡಬೇಕು ಮತ್ತು ಅವರಿಗೆ ಕಾಯುವಿಕೆ ಸಂಖ್ಯೆಯನ್ನು ಸಹ ನೀಡಬೇಕು ಎಂದು ಪರಿಷ್ಕೃತ ನಿಯಮದಲ್ಲಿ ಆರ್‌ಬಿಐ ತಿಳಿಸಿದೆ.

  ಯಾವುದೇ ನೈಸರ್ಗಿಕ ವಿಕೋಪಗಳಾದ ಭೂಕಂಪ, ಜಲ ಪ್ರಳಯ ಮತ್ತು ಇನ್ನಿತರೆ ಗಳಿಂದ ಲಾಕರ್ ನಲ್ಲಿಟ್ಟ ಬೆಲೆಬಾಳುವಂತಹ ವಸ್ತುಗಳಿಗೆ ಯಾವುದೇ ಹಾನಿಯಾದಲ್ಲಿ ಬ್ಯಾಂಕುಗಳು ಹೊಣೆಗಾರರಲ್ಲ. ಆದರೆ ಲಾಕರ್ ಇರುವ ಸ್ಥಳದ ಸುರಕ್ಷತೆಯ ಮೇಲೆ ನಿಗಾ ಇರಿಸಬೇಕಾಗಿರುವುದು ಆಯಾ ಬ್ಯಾಂಕ್‌ನ ಹೊಣೆಯಾಗಿರುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕುಗಳು ಗ್ರಾಹಕರಿಗೆ ಲಾಕರ್ ಸೌಲಭ್ಯವನ್ನು ನೀಡುವ ಸಂದರ್ಭದಲ್ಲಿ ಮೂರು ವರ್ಷಕ್ಕೆ ಆಗುವ ಬಾಡಿಗೆ ಹಣವನ್ನು ಸೇರಿಸಿ ಕಂತುಗಳಲ್ಲಿ ಪಡೆಯಬೇಕು. ಈಗಾಗಲೇ ಲಾಕರ್ ಹೊಂದಿರುವವರು ಯಾವುದೇ ರೀತಿಯ ಹಣವನ್ನು ಕಂತುಗಳಲ್ಲಿ ಕಟ್ಟಬೇಕಾಗಿಲ್ಲ ಎಂದು ಹೇಳಿದ್ದಾರೆ.

  ಗ್ರಾಹಕರು ಮೂರು ವರ್ಷದವರೆಗೆ ಲಾಕರ್ ಸೌಲಭ್ಯದ ಹಣ ಪಾವತಿಸದೆ ಇದ್ದರೆ ಅಂತಹವರ ಲಾಕರ್‌ಗಳನ್ನು ಒಡೆದು ತೆಗೆಯಬಹುದಾದ ಹಕ್ಕನ್ನು ಬ್ಯಾಂಕ್ ಹೊಂದಿರುತ್ತದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Kavya V
  First published: