Tirupati Rain: ರಣ ಮಳೆ ಆರ್ಭಟದಿಂದ ತಿಮ್ಮಪ್ಪನಿಗೂ ತಪ್ಪದ ಸಂಕಷ್ಟ: ಸದ್ಯಕ್ಕೆ ತಿರುಪತಿಗೆ ಹೋಗುವ ಆಸೆ ಬೇಡ!

Tirupati Rain: ಇದೀಗ ತಿರುಪತಿಗೆ (Tirupati) ಮತ್ತೊಂದು ಸಂಕಷ್ಟ ಎದುರಾಗಿದೆ. ತಿರುಪತಿ ಸಮೀಪವಿರುವ ರಾಮಚಂದ್ರಪುರಂನಲ್ಲಿರುವ ರಾಯಲ ಚೇವೂರು(Rayalacheruvu) ಅಣೆಕಟ್ಟೆಯಲ್ಲಿ (Dam) ಬಿರುಕುಗಳು ಕಾಣಿಸಿಕೊಂಡಿದೆ. ಇಲ್ಲಿಪ್ರವಾಹ (Flood) ಭೀತಿ ಎದುರಾಗಿದೆ.

ತಿರುಪತಿಯಲ್ಲಿ ರಣ ಮಳೆ ಅಬ್ಬರ

ತಿರುಪತಿಯಲ್ಲಿ ರಣ ಮಳೆ ಅಬ್ಬರ

  • Share this:
ಎಲ್ಲಿ ನೋಡಿದರಲ್ಲಿ ನೀರು..ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ವಾಹನಗಳು(Vehicles).. ಅಷ್ಟೇ  ಯಾಕೆ ಜನರು ಕೂಡ ನೀರಿನಲ್ಲಿ ಕೊಚ್ಚಿ ಹೋಗುವ ಭಯಾನಕ ದೃಶ್ಯಗಳು ಕಂಡುಬಂದಿದೆ. ಇದೆಲ್ಲ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆದಿರುವ ಘನಘೋರ ದೃಶ್ಯಗಳು. ಕಳೆದ 4 ದಿನದಿಂದ ಆಂಧ್ರಪ್ರದೇಶ(Andhra Pradesh)ದಲ್ಲಿ ರಣ ಮಳೆ ಆರ್ಭಟ ಹೆಚ್ಚಾಗಿದೆ. ತಿರುಪತಿಯಲ್ಲೂ ಮಳೆಯ ಅಬ್ಬರದಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇದೀಗ ತಿರುಪತಿಗೆ (Tirupati) ಮತ್ತೊಂದು ಸಂಕಷ್ಟ ಎದುರಾಗಿದೆ. ತಿರುಪತಿ ಸಮೀಪವಿರುವ ರಾಮಚಂದ್ರಪುರಂನಲ್ಲಿರುವ ರಾಯಲ ಚೇವೂರು(Rayalacheruvu) ಅಣೆಕಟ್ಟೆಯಲ್ಲಿ (Dam) ಬಿರುಕುಗಳು ಕಾಣಿಸಿಕೊಂಡಿದೆ. ಇಲ್ಲಿಪ್ರವಾಹ (Flood) ಭೀತಿ ಎದುರಾಗಿದೆ. ಸತತ ಮಳೆಯಿಂದಾಗಿ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ. ಈಗ ಮಳೆ ನಿಂತಿದ್ದರೂ ಬಿರುಕುಗಳಿಂದ ನೀರು ಸೋರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಗ್ರಾಮಸ್ಥರು ಕೂಡಲೇ ಅಲ್ಲಿಂದ ಜಾಗ ಖಾಲಿಮಾಡುವಂತೆ ಸೂಚನೆ ನೀಡಲಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಡ್ಯಾಂ ಒಡೆದು ಗ್ರಾಮಕ್ಕೆ ನೀರು ನುಗ್ಗಬಹುದು ಎಂದು ಹೇಳಲಾಗ್ತಿದೆ. ಅಲ್ಲಿನ ಗ್ರಾಮಸ್ಥರು ಏನು ಮಾಡಬೇಕೆಂದು ತಿಳಿಯದೇ ಕಂಗಲಾಗಿದ್ದಾರೆ. 

ಕೂಡಲೇ ಜಾಗ ಖಾಲಿ ಮಾಡಿ ಎಂದು ಎಚ್ಚರಿಕೆ ಸಂದೇಶ

ರಾಮಚಂದ್ರಪುರಂನಲ್ಲಿರುವ ರಾಯಲ ಚೇವೂರು ಅಣೆಕಟ್ಟೆ ತಿರುಪತಿ, ತಿಮ್ಮಪ್ಪನ ಬೆಟ್ಟದ ಕೆಳಗೆ ಇದೆ. ಹೀಗಾಗಿ ಇಲ್ಲಿ ಡ್ಯಾಂ ಒಡೆದು ಪ್ರವಾಹ ಉಂಟಾದರೆ, ಆ ತಿಮ್ಮಪನ ದರ್ಶನ ಪಡೆಯುವುದು ಕಷ್ಟವಾಗಲಿದೆ. ಈಗಾಗಲೇ ದೇಗುಲಕ್ಕೆ ಹೋಗುವ ಮಾರ್ಗಗಳೆಲ್ಲ ಕುಸಿದಿದೆ. ಈ ರಾಯಲ ಚೇವೂರು ಅಣೆಕಟ್ಟೆ ಮೂಡಿವೆ, ಯಾವ ಸಮಯದಲ್ಲಾದರೂ ಪ್ರವಾಹ ಉಂಟಾಗಬಹುದು. ಹಾಗಾಗಿ ಎಲ್ಲ ಅಮೂಲ್ಯ ಕಾಗದ ಪತ್ರಗಳು ಹಾಗೂ ಅಗತ್ಯ ವಸ್ತುಗಳೊಂದಿಗೆ ಎತ್ತರದ ಪ್ರದೇಶಗಳಿಗೆ ತೆರಳಬೇಕು’ ಎಂದು ಸುತ್ತಮುತ್ತಲ ಗ್ರಾಮದ ಜನರಿಗೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಡ್ಯಾಂ ಬಿರುಕು ಬಿಟ್ಟಿರುವ ವಿಡಿಯೋಗಳು ಸಹ ಸಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದನ್ನು ಓದಿ : ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ಕೊಚ್ಚಿ ಹೋಯ್ತು ವಾಹನಗಳು, ನದಿಯಂತಾದ ರಸ್ತೆ !



ತಿರುಪತಿ ತಿಮ್ಮಪ್ಪನಿಗೂ ಜಲದಿಗ್ಬಂಧನ!

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ  ಕುಸಿತವು ವಿಶ್ವದ ಅತ್ಯಂತ ಸಿರಿವಂತ ದೇವರಾದ ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ. ರಾತ್ರಿಯಿಂದೀಚೆಗೆ ತಿರುಮಲ, ತಿರುಪತಿ ಸೇರಿದಂತೆ ಚಿತ್ತೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ದೇಗುಲ ನಗರದಲ್ಲಿ ಇಂಥ ಮಳೆ (Rain) ಅನಾಹುತ ಘಟಿಸಿದ್ದು 1996 ಭೀಕರ ಪ್ರವಾಹದ  ಬಳಿಕ ಇದೇ ಮೊದಲು ಎಂದು ಹೇಳಲಾಗುತ್ತಿದೆ. ತಿರುಪತಿ ಬೆಟ್ಟಕ್ಕೆ ಹೋಗುವ ರಸ್ತೆಗಳೆಲ್ಲ ಕುಸಿದು ಹೋಗಿವೆ. ಇನ್ನೂ ಕಾಲು ಮಾರ್ಗದ ಪರಿಸ್ಥಿತಿ ಕೇಳ ಬೇಡಿ. ಈ ಹಾಳಾಗಿರುವ ಮಾರ್ಗವನ್ನು ಸರಿ ಪಡಿಸಲು ಕನಿಷ್ಠ 1 ತಿಂಗಳು ಸಮಯ ಬೇಕಾಗಬಹುದು.



ಸದ್ಯಕ್ಕೆ ತಿರುಪತಿ ಹೋಗುವ  ಪ್ಲ್ಯಾನ್​ ಬೇಡ..

ನಮ್ಮ ರಾಜ್ಯದಲ್ಲೂ ಮಳೆಯ ಆರ್ಭಟ ಜೋರಿದೆ. ಆದರೆ, ನೆರೆಯ ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಮಳೆಗಿಂತ ಕೊಂಚ ಕಡಿಮೆ ಇದೆ. ತಿರಪುತಿ ತಿಮ್ಮಪ್ಪನ ಭಕ್ತರು ಸದ್ಯಕ್ಕೆ ಅಲ್ಲಿಗೆ ಪ್ರಯಾಣ ನೀಡುವ ಯೋಚನೆ ಇದ್ದರೆ. ದಯವಿಟ್ಟು ಮುಂದೂಡಿ. ತಿರುಪತಿಯಲ್ಲಿ ಕಂಡು ಕೇಳರಿಯದ ರೀತಿ ಮಳೆಯಾಗಿದ್ದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ.



ಇದನ್ನು ಓದಿ : ಕಂಡು ಕೇಳರಿಯದ ಮಳೆಗೆ ಆಂಧ್ರ ತತ್ತರ: 25 ಜನರ ಸಾವು, 17 ಮಂದಿ ನಾಪತ್ತೆ!

ನೀರಿನ ರಭಸಕ್ಕೆ ದೊಡ್ಡ ದೊಡ್ಡ ವಾಹನಗಳೇ ಕೊಚ್ಚಿಹೋಗುತ್ತಿವೆ. ಇಲ್ಲಿನ ಸ್ಥಳೀಯರೇ ಪರದಾಟ ನಡೆಸುತ್ತಿದ್ದಾರೆ. ಇನ್ನೂ ಮಳೆ ಸಂಪೂರ್ಣವಾಗಿ ನಿಂತರೂ, ಆಗಿರುವ ಅನಾಹುತಗಳನ್ನು ಸರಿಪಡಿಸಲು ಸಾಕಷ್ಟು ಸಮಯ ಬೇಕಾಗುತ್ತೆ. ಹೀಗಾಗಿ ದಯವಿಟ್ಟು ನಿಮ್ಮ ತಿರುಪತಿ ಪ್ರಯಾಣವನ್ನು ಮುಂದೂಡುವುದು ಸೂಕ್ತ.
Published by:Vasudeva M
First published: