ಅ.2ರಂದು ಬಿಡುಗಡೆಯಾದ ಮೂರು ಸಿನಿಮಾಗಳು 120 ಕೋಟಿ ಗಳಿಸಿರುವಾಗ, ಆರ್ಥಿಕತೆ ಕುಸಿತ ಎಲ್ಲಿಂದ ಬಂತು; ರವಿಶಂಕರ್​ ಪ್ರಸಾದ್​​

ಅಕ್ಟೋಬರ್​ 2ರಂದು ರಜಾ ದಿನ ಬಿಡುಗಡೆಯಾದ ಮೂರು ಸಿನಿಮಾಗಳು ಉತ್ತಮ ಗಳಿಗೆ ಮಾಡಿವೆ ಎಂದು ಸಿನಿಮಾ ವಿಮರ್ಶಕ ಕೊಮಲ್​ ನಹ್ತಾ ನನಗೆ ತಿಳಿಸಿದರು. 120ಕೋಟಿ ದೇಶದಲ್ಲಿ ಇದೆ ಎಂದರೆ ಆರ್ಥಿಕತೆ ಉತ್ತಮವಾಗಿದೆ ಎಂದು ಅರ್ಥ

Seema.R | news18-kannada
Updated:October 12, 2019, 5:56 PM IST
ಅ.2ರಂದು ಬಿಡುಗಡೆಯಾದ ಮೂರು ಸಿನಿಮಾಗಳು 120 ಕೋಟಿ ಗಳಿಸಿರುವಾಗ, ಆರ್ಥಿಕತೆ ಕುಸಿತ ಎಲ್ಲಿಂದ ಬಂತು; ರವಿಶಂಕರ್​ ಪ್ರಸಾದ್​​
ಕೇಂದ್ರ ಸಚಿವ ರವಿಶಂಕರ್​​ ಪ್ರಸಾದ್​
  • Share this:
ನವದೆಹಲಿ (ಅ.12): ಅಕ್ಟೋಬರ್​ ಎರಡರಂದು ಬಿಡುಗಡೆಯಾದ ಮೂರು ಸಿನಿಮಾಗಳು ಬ್ಲಾಕ್​ ಬಸ್ಟರ್​ ಆಗಿದ್ದು, ಕೋಟಿ ಗಳಿಕೆ ನಡೆಸಿದೆ. ಹೀಗಿರುವಾಗ ಆರ್ಥಿಕತೆ ಕುಸಿತ ಎಲ್ಲಿಂದ ಬಂತು ಎಂದು ಕೇಂದ್ರ ಸಚಿವ ರವಿ ಶಂಕರ್​ ಪ್ರಸಾದ್​ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಆರ್ಥಿಕತೆ ಕುಸಿತವಾಗಿದೆ ಎಂಬ ಹೇಳಿಕೆಯನ್ನು ನಗುನಗುತ್ತಾ ತಳ್ಳಿ ಹಾಕಿದ ಅವರು, ಸಿನಿಮಾಗಳ ಗಳಿಕೆಯನ್ನು ಉದಾಹರಣೆ ನೀಡಿದರು. ದೇಶದ ಆರ್ಥಿಕತೆ ಚೆನ್ನಾಗಿ ಇರುವುದರಿಂದಲೇ ಸಿನಿಮಾಗಳು ಕೋಟಿ ಗಳಿಸಲು ಸಾಧ್ಯವಾಗಿದೆ ಎಂದರು

ಅಟಲ್​ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ನಾನು ಮಾಹಿತಿ ಮತ್ತು ಪ್ರಸಾರ ಸಚಿವನಾಗಿದ್ದೆ. ಸಿನಿಮಾ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ ಇದೆ, ಸಿನಿಮಾಗಳು ಉತ್ತ ಉದ್ಯಮ ಲಾಭಾ ಮಾಡುತ್ತವೆ. ಅಕ್ಟೋಬರ್​ 2ರಂದು ರಜಾ ದಿನ ಬಿಡುಗಡೆಯಾದ ಮೂರು ಸಿನಿಮಾಗಳು ಉತ್ತಮ ಗಳಿಗೆ ಮಾಡಿವೆ ಎಂದು ಸಿನಿಮಾ ವಿಮರ್ಶಕ ಕೊಮಲ್​ ನಹ್ತಾ ನನಗೆ ತಿಳಿಸಿದರು. 120ಕೋಟಿ ದೇಶದಲ್ಲಿ ಇದೆ ಎಂದರೆ ಆರ್ಥಿಕತೆ ಉತ್ತಮವಾಗಿದೆ ಎಂದು ಅರ್ಥ ಎಂದರು.

ಇದನ್ನು ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಎಪಿ ಮಾಜಿ ಶಾಸಕಿ ಅಲ್ಕಾ ಲಾಂಬಾ

ಭಾರತದ ಆರ್ಥಿಕತೆ ಕುಸಿತ ಕಂಡಿದ್ದು, ಶೇ 5ಕ್ಕೆ ಜಿಡಿಪಿ ಕುಸಿದಿದೆ. ಕಳೆದ ಏಳು ವರ್ಷಗಳಲ್ಲಿ ಅತ್ಯಂತ ಮಂದಗತಿಯ ಬೆಳವಣಿಗೆ ಇದಾಗಿದ್ದು, ಕೃಷಿ ಮತ್ತು ತಯಾರಿಕಾ ವಲಯದ ಕಳಪೆ ನಿರ್ವಹಣೆಯ ಜಿಡಿಪಿ ಕಡಿಮೆ ದಾಖಲಾಗಿದೆ.

ಇನ್ನು ಈ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್​, ಭಾರತದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಹೆಚ್ಚಳವಾಗುತ್ತಿದೆ. ವಿದೇಶಿ ವಿನಿಮಯ ಮೀಸಲು ನಿಧಿ ಅಧಿಕವಿದ್ದು, ಆರ್ಥಿಕತೆ ಚೇತರಿಸಿಕೊಳ್ಳುವ ಸ್ಪಷ್ಟ ಸೂಚನೆ ಸಿಕ್ಕಿದೆ. ಹಣದುಬ್ಬರ ಕೂಡ ನಿಯಂತ್ರಣದಲ್ಲಿದೆ. ಆರ್ಥಿಕತೆಗೆ ಪುಷ್ಟಿ ನೀಡಲು ವಸತಿ ಕ್ಷೇತ್ರದಲ್ಲಿ ಹಲವು ಕ್ರಮಗಳನ್ನು ಅವರು ಘೋಷಿಸಿದ್ದಾರೆ. ಗೃಹ ಸಾಲದ ಮರುಪಾವತಿ ಮಾಡಿದರೆ ಬಡ್ಡಿಯಲ್ಲಿ ಹೆಚ್ಚುವರಿ 1.5 ಲಕ್ಷ ರೂ ಕಡಿತ; ಮನೆ, ವಾಹನಗಳ ಖರೀದಿಗೆ ಹೆಚ್ಚು ಸಾಲ ಸಿಗುವ ವ್ಯವಸ್ಥೆ ಇತ್ಯಾದಿ ಕ್ರಮಗಳನ್ನ ಕೈಗೊಳ್ಳಲಾಗಿದೆ  ಎಂದಿದ್ದರು.

First published: October 12, 2019, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading