ದೇವರನಾಡು ಕೇರಳದಲ್ಲಿ ಇಲಿ ಜ್ವರಕ್ಕೆ 28 ಜನರು ಬಲಿ

news18
Updated:September 2, 2018, 11:13 PM IST
ದೇವರನಾಡು ಕೇರಳದಲ್ಲಿ ಇಲಿ ಜ್ವರಕ್ಕೆ 28 ಜನರು ಬಲಿ
news18
Updated: September 2, 2018, 11:13 PM IST
ನ್ಯೂಸ್ 18 ಕನ್ನಡ 

ತಿರುವನಂತಪುರಂ ( ಸೆಪ್ಟೆಂಬರ್ 02) :  ನೆರೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲಿ ಈಗ ಮಹಾರೋಗ ಒಕ್ಕರಿಸಿಕೊಂಡಿದೆ. ಈಗಾಗಲೇ ದೇವರನಾಡಲ್ಲಿ ಲೆಪ್ಟೋಸ್ಪೈರೋಸಿಸ್​​ಗೆ 28 ಮಂದಿ ಬಲಿಯಾಗಿದ್ದು. 300 ಮಂದಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಈಗಷ್ಟೇ ಸಾಕಪ್ಪ ಸಾಕು ಈ ಮಳೆ ಸಹವಾಸ ಅಂತಿದ್ದ ಕೇರಳಕ್ಕೆ, ಮಹಾಮಾರಿ ಲೆಪ್ಟೋಸ್ಪೈರೋಸಿಸ್​​ ಎಂಟ್ರಿ ಕೊಟ್ಟಿದೆ, ಆಗಸ್ಟ್​ 1ರಿಂದ ಇಲ್ಲಿವರೆಗೆ ಒಟ್ಟು 28 ಮಂದಿ ಇಲಿ ಜ್ವರಕ್ಕೆ ಬಲಿಯಾಗಿದ್ದಾರೆ. ಕೋಯಿಕ್ಕೋಡ್‌ ಜಿಲ್ಲೆಯೊಂದರಲ್ಲೇ 14 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. 300 ಜನರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಇಲಿ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ, ಸೂಕ್ತ ಚಿಕಿತ್ಸೆ ಪಡೆದರೆ ರೋಗ ಗುಣಪಡಿಸಬಹುದು. ಸೋಂಕು ಉಲ್ಭಣಿಸಿದ್ರೆ ಪರಿಸ್ಥಿತಿ ಕೈ ಮೀರಲಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೇರಳದಲ್ಲಿ ಇಲಿಜ್ವರದ ಜೊತೆ ನಿಫಾ ಸೋಂಕು ಭೀತಿಯೂ ಹೆಚ್ಚಾಗಿದೆ.. ಕೊಡಗಿನಲ್ಲೂ ಕೇರಳದಂತೆ ಪ್ರವಾಹ ಉಂಟಾಗಿದ್ದು ಸರ್ಕಾರ ಮುನ್ನೆಚ್ಚರಿಕೆ ಕೈಗೊಳ್ಳಬೇಕಾದುದು ಅಗತ್ಯವಾಗಿದೆ

 
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ