ಇಂದು ಉಕ್ಕಿನ ಮನುಷ್ಯ ಸರ್ದಾರ್​ ವಲ್ಲಭಾಯಿ ಪಟೇಲ್​ ಜನ್ಮದಿನ; ಏಕತಾ ಪ್ರತಿಮೆಗೆ ಮೋದಿ ಭೇಟಿ

ಸಿದ್ದರಾಮಯ್ಯ ಸೇರಿ ಅನೇಕರು ಟ್ವಿಟ್ಟರ್​ನಲ್ಲಿ ಸರ್ದಾರ್​ ವಲ್ಲಭಾಯಿ ಪಟೇಲ್​ಗೆ ಗೌರವ ಸಲ್ಲಿಸಿದರು. ಇನ್ನು, ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಓಟಕ್ಕೆ ಚಾಲನೆ ನೀಡಿದರು.

Rajesh Duggumane | news18-kannada
Updated:October 31, 2019, 8:00 AM IST
ಇಂದು ಉಕ್ಕಿನ ಮನುಷ್ಯ ಸರ್ದಾರ್​ ವಲ್ಲಭಾಯಿ ಪಟೇಲ್​ ಜನ್ಮದಿನ; ಏಕತಾ ಪ್ರತಿಮೆಗೆ ಮೋದಿ ಭೇಟಿ
ಉಕ್ಕಿನ ಮುನುಷ್ಯನ ಪ್ರತಿಮೆ
  • Share this:
ಗಾಂಧಿನಗರ (ಅ.31): ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 144ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ವಲ್ಲಭಾಯ್​ ಪಟೇಲ್​ಗೆ ಗೌರವ ಸೂಚಿಸಿದ್ದಾರೆ.

ಸರ್ದಾರ್ ವಲ್ಲಭಾಯ್​ ಪಟೇಲ್​ ಅವರಿಗೆ ಗೌರವ ಸೂಚಿಸಿ ನಿರ್ಮಾಣ ಮಾಡಿರುವ ಏಕತಾ ಪ್ರತಿಮೆಗೆ ಮೋದಿ ಇಂದು ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ‘ಐಕ್ಯತಾ ಓಟ’ಕ್ಕೆಚಾಲನೆ ನೀಡಲಿದ್ದಾರೆ. ಬುಧವಾರ ರಾತ್ರಿ ಮೋದಿ ಅಹ್ಮದಾಬಾದ್​ಗೆ ಬಂದಿಳಿದರು. ಈ ವೇಳೆ ತಾಯಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಸಿದ್ದರಾಮಯ್ಯ ಸೇರಿ ಅನೇಕರು ಟ್ವಿಟ್ಟರ್​ನಲ್ಲಿ ಸರ್ದಾರ್​ ವಲ್ಲಭಾಯಿ ಪಟೇಲ್​ಗೆ ಗೌರವ ಸಲ್ಲಿಸಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಓಟಕ್ಕೆ ಚಾಲನೆ ನೀಡಿದರು.
ಉಕ್ಕಿನ ಪ್ರತಿಮೆಯ ವಿಶೇಷತೆ

  • ಈ ಪ್ರತಿಮೆ ನಿರ್ಮಾಣ ಮಾಡಲು ತಗುಲಿದ ವೆಚ್ಛ ಬರೋಬ್ಬರಿ 2989 ಕೋಟಿ ರೂಪಾಯಿ! 1,40,000 ಕ್ಯೂಬಿಕ್​ ಮೀಟರ್​ ಸಿಮೆಂಟ್​, 18,500 ಟನ್​ ಉಕ್ಕಿನ ಸರಳು, 2,000 ಟನ್​ ಕಂಚಿನ ಹಾಳೆ ಇಲ್ಲಿ ಬಳಕೆಯಾಗಿದೆ. ಅಚ್ಚರಿ ಎಂದರೆ ಕೇವಲ 2.7 ವರ್ಷ ಅವಧಿಯಲ್ಲಿ ಈ ಪ್ರತಿಮೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, 3,000 ಕಾರ್ಮಿಕರು ಶ್ರಮಿಸಿದ್ದಾರೆ. ಈ ಪ್ರತಿಮೆ 180 ಕಿ.ಮೀ ವೇಗದ ಗಾಳಿ ಹಾಗೂ 6.5 ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

  • 2010ರಲ್ಲಿ ಗುಜರಾತ್​ನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಈ ಯೋಜನೆಯ ಘೋಷಣೆ ಮಾಡಿದ್ದರು. ನಂತರ 2013ರಲ್ಲಿ ಅಡಿಗಲ್ಲು ಕಾರ್ಯಕ್ರಮ ನೆರವೇರಿತು. ಈಗ ಮೋದಿ ಪ್ರಧಾನಿಯಾಗಿ ಈ ಪ್ರತಿಮೆ ಅನಾವರಣ ಮಾಡುತ್ತಿರುವುದು ವಿಶೇಷ.

  • ನೋಯ್ಡಾ ಮೂಲದ ಪದ್ಮ ಭೂಷಣ ವಿಜೇತ ರಾಮ್​ ವಿ. ಸುತಾರ್​ ‘ಸ್ಟ್ಯಾಚು ಆಫ್ ಯುನಿಟಿ’ಯ ನಿರ್ಮಾತೃರು. 40 ವರ್ಷಗಳ ಅವರ ವೃತ್ತಿ ಬದುಕಿನಲ್ಲಿ ಒಟ್ಟು 50 ಸ್ಮಾರಕಗಳನ್ನು ವಿನ್ಯಾಸ ಮಾಡಿದ್ದಾರೆ. ಪಟೇಲ್​ ಅವರ ಪ್ರತಿಮೆ ನಿರ್ಮಾಣ ಮಾಡಲು ಇವರು ವಿಶೇಷ ಕಾಳಜಿ ವಹಿಸಿದ್ದಾರಂತೆ. ಈ ಪ್ರತಿಮೆ ಡಿಸೈನ್​ ಮಾಡುವುದಕ್ಕೂ ಮೊದಲು ​ ವಲ್ಲಭಾಯಿ ಪಟೇಲ್​ ಅವರ 2,000 ಭಾವಚಿತ್ರಗಳನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಕೆಲ ಇತಿಹಾಸ ತಜ್ಞರನ್ನು ಭೇಟಿ ಮಾಡಿ ಅವರ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

  • 30 ಮೀಟರ್​ಗಿಂತ ಅಧಿಕವಾಗಿರುವ 139 ಪ್ರತಿಮೆಗಳು ವಿಶ್ವದಲ್ಲಿವೆ. ಆ ಪೈಕಿ, 30 ಚೀನಾದಲ್ಲಿ, 25 ಭಾರತದಲ್ಲಿವೆ. ಅಂದರೆ, ಇಷ್ಟು ಎತ್ತರದ ಪ್ರತಿಮೆಗಳಲ್ಲಿ ಶೇ.42 ಭಾರತ ಹಾಗೂ ಚೀನಾದಲ್ಲೇ ನಿರ್ಮಾಣಗೊಂಡಿರುವುದು ವಿಶೇಷ.

  • ಅಮೆರಿಕದಲ್ಲಿರುವ ‘ಸ್ಟ್ಯಾಚ್ಯು ಆಫ್​ ಲಿಬರ್ಟಿ’9 ಎತ್ತರವಿದೆ. ಈ ಪ್ರತಿಮೆಯನ್ನು ಫ್ರಾನ್ಸ್​​ನವರು ಅಮೆರಿಕಕ್ಕೆ ಉಡುಗೊರೆಯಾಗಿ ನೀಡಿದ್ದರು. ‘ಸ್ಟ್ಯಾಚು ಆಫ್​ ಲಿಬರ್ಟಿಗಿಂತ’ ವಲ್ಲಭಾಯಿ ಪ್ರತಿಮೆ (182 ಮೀ.) ಹೆಚ್ಚು ಎತ್ತರವಾಗಿದೆ. ಚೀನಾದ ಸ್ಪ್ರಿಂಗ್​ ದೇವಸ್ಥಾನದಲ್ಲಿರುವ ಬುದ್ಧನ ಸ್ಟ್ಯಾಚ್ಯು (128 ಮೀ.) ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿತ್ತು. ಅಚ್ಚರಿ ಎಂದರೆ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಛತ್ರಪತಿ ಶಿವಾಜಿ ಅವರ ಪ್ರತಿಮೆ ‘ಸ್ಟ್ಯಾಚು ಆಫ್​ ಯುನಿಟಿ’ಗಿಂತ 30 ಮೀ. ಎತ್ತರ ಇರಲಿದೆಯಂತೆ.

  • ‘ಸ್ಟ್ಯಾಚ್ಯು ಆಫ್​ ಯುನಿಟಿ’ಗೆ ಭೇಟಿ ನೀಡುವ ಪ್ರವಾಸಿಗರಿಗೆ ಭಾರತೀಯ ರೈಲ್ವೆ ವಿಶೇಷ ಟ್ರೇನ್​ ವ್ಯವಸ್ಥೆ ಮಾಡಿದೆ. ‘ಯುನಿಟಿ ಎಕ್ಸ್​ಪ್ರೆಸ್​’ ಹೆಸರಿನ ವಿಶೇಷ ರೈಲು ರಾಜ್​ಕೋಟ್​ನಿಂದ ಸಂಚಾರ ಆರಂಭಿಸಿದೆ.

  • ಇಂದು ವಿಶ್ವದ ನಾನಾ ಕಡೆಗಳಿಂದ ನೃತ್ಯ ತಂಡಗಳು ಆಗಮಿಸಿ ‘ಸ್ಟ್ಯಾಚು ಆಫ್​ ಯುನಿಟಿ’ ಎದುರು ಪ್ರದರ್ಶನ ನೀಡಲಿವೆ. ಅಷ್ಟೇ ಅಲ್ಲ, ಹೆಲಿಕಾಪ್ಟರ್​ ಮೂಲಕ ಪ್ರತಿಮೆಗೆ ಪುಷ್ಪ ಮಳೆ ಸುರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.


First published:October 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading