Rashtrapatni Remark: ‘ರಾಷ್ಟ್ರಪತ್ನಿ’ ವಿವಾದ: ನನ್ನನ್ನು ಗಲ್ಲಿಗೇರಿಸಿ, ಆದ್ರೆ ಸೋನಿಯಾ ಮೇಡಂ ಹೆಸರನ್ನು ಎಳೆದು ತರಬೇಡಿ

Adhir Ranjan Chowdhury: ಅಧೀರ್ ರಂಜನ್ ಚೌಧರಿ ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿದರು. ಮೇಡಂ ಸೋನಿಯಾ ಗಾಂಧಿ ಅವರನ್ನು ಈ ವಿವಾದಕ್ಕೆ ಎಳೆದು ತರದಂತೆ ಮನವಿ ಮಾಡಿದರು. ನನ್ನ ತಪ್ಪಿದ್ದರೆ ನನ್ನನ್ನು ಗಲ್ಲಿಗೇರಿಸಿ. ಮೇಡಂ ಅವರನ್ನು ವಿವಾದಕ್ಕೆ ಎಳೆಯಬೇಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ದ್ರೌಪದಿ ಮುರ್ಮು, ಅಧೀರ್​ ರಂಜನ್​ ಚೌಧರಿ, ಸೋನಿಯಾ ಗಾಂಧಿ

ದ್ರೌಪದಿ ಮುರ್ಮು, ಅಧೀರ್​ ರಂಜನ್​ ಚೌಧರಿ, ಸೋನಿಯಾ ಗಾಂಧಿ

  • Share this:
ನವದೆಹಲಿ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು (New President Draupadi Murmur) ಅವರನ್ನು ಕಾಂಗ್ರೆಸ್​ ಸಂಸದ ಅಧೀರ್​​ ರಂಜನ್​ ಚೌಧರಿ (Adhir Ranjan Chowdhury) ‘ರಾಷ್ಟ್ರಪತ್ನಿ’ (Rashtrapatni) ಎಂದು ಸಂಬೋಧಿಸಿರುವುದು ದೊಡ್ಡ ವಿವಾದಕ್ಕೆ ಎಡೆ ಮಾಡಿದೆ. ಸದನದಲ್ಲಿ ಕಾಂಗ್ರೆಸ್​​ ವಿರುದ್ಧ ಬಿಜೆಪಿ ಸದಸ್ಯರು ಮುಗಿ ಬಿದ್ದಿದ್ದಾರೆ. ಕೂಡಲೇ ಅಧೀರ್​​ ರಂಜನ್​ ಚೌಧರಿ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚನೆ ಮಾಡಿದ್ದಾರೆ. ಇದರಿಂದ ತೃಪ್ತರಾಗದ ಬಿಜೆಪಿಯವರು ಸೋನಿಯಾ ಗಾಂಧಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಭಾವೋಗ್ವೇದಿಂದ ಪ್ರತಿಕ್ರಿಯಿಸಿರುವ ಅಧೀರ್​ ರಂಜನ್​ ಚೌಧರಿ, ನನ್ನ ಹೇಳಿಕೆಗೆ ನನ್ನನ್ನು ಬೇಕಾದರೆ ನೇಣಿಗೇರಿಸಿ. ಆದರೆ ಸೋನಿಯಾ ಮೇಡಂ ಅವರನ್ನು ಇದಕ್ಕೆ ಎಳೆದು ತರಬೇಡಿ ಎಂದಿದ್ದಾರೆ. ಇಡೀ ಸದನ ‘ರಾಷ್ಟ್ರಪತ್ನಿ’ ವಿವಾದದಿಂದ ಗದ್ದಲಮಯವಾಗಿದೆ.

ತಪ್ಪಿದ್ದರೆ ನನ್ನನ್ನು ಗಲ್ಲಿಗೇರಿಸಿ

ವಿವಾದದ ಗದ್ದಲ ಮುಂದುವರಿದ ನಂತರ, ಅಧೀರ್ ರಂಜನ್ ಚೌಧರಿ ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿದರು. ಮೇಡಂ ಸೋನಿಯಾ ಗಾಂಧಿ ಅವರನ್ನು ಈ ವಿವಾದಕ್ಕೆ ಎಳೆದು ತರದಂತೆ ಮನವಿ ಮಾಡಿದರು. ನನ್ನ ತಪ್ಪಿದ್ದರೆ ನನ್ನನ್ನು ಗಲ್ಲಿಗೇರಿಸಿ. ಮೇಡಂ ಅವರನ್ನು ವಿವಾದಕ್ಕೆ ಎಳೆಯಬೇಡಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.





ಭಾರತದ ರಾಷ್ಟ್ರಪತಿ, ಬ್ರಾಹ್ಮಣ ಆಗಿರಲಿ ಅಥವಾ ಬುಡಕಟ್ಟಿನವರಾಗಿರಲಿ, ಯಾರೇ ಆಗಿರಲಿ, ರಾಷ್ಟ್ರಪತಿಗಳು ರಾಷ್ಟ್ರಪತಿಯೇ. ಅದೊಂದು ದೊಡ್ಡ ಗೌರವದ ಹುದ್ದೆ. ನಿನ್ನೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪತ್ರಕರ್ತರು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನನ್ನನ್ನು ಕೇಳಿದಾಗ ನಾನು ಹೇಳಿದೆ, ನಾವು ರಾಷ್ಟ್ರಪತಿಯವರನ್ನು ಭೇಟಿ ಮಾಡಲು ರಾಷ್ಟ್ರಪತಿಯವರ ಮನೆಗೆ ಹೋಗುತ್ತಿದ್ದೇವೆ. ಆದರೆ ಒಮ್ಮೆಲೇ ರಾಷ್ಟ್ರಪತ್ನಿ ಪದ ನನ್ನಿಂದ ಹೊರಬಿದ್ದಿದೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ನಮ್ಮ ನೂತನ ಅಧ್ಯಕ್ಷರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದು ಒಮ್ಮೆ ಮಾತ್ರ ಹೊರಬಂದಿದೆ. ರಾಷ್ಟ್ರಪತಿಯನ್ನು ಅವಮಾನಿಸುವ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ. ಅದು ತಪ್ಪು. ನಾನು ಅವರನ್ನು ಖುದ್ದಾಗಿ ಭೇಟಿಯಾಗಿ ಕ್ಷಮೆಯಾಚಿಸುತ್ತೇನೆ ಎಂದು ಚೌಧರಿ ಹೇಳಿದರು.

ಇದನ್ನೂ ಓದಿ: Rashtrapatni Row: ರಾಷ್ಟ್ರಪತಿಯನ್ನು ರಾಷ್ಟ್ರಪತ್ನಿ ಎಂದ ಕಾಂಗ್ರೆಸ್ ಸಂಸದ; ಕಾಂಗ್ರೆಸ್ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ನನ್ನೊಂದಿಗೆ ಮಾತನಾಡಬೇಡಿ ಎಂದು ಸ್ಕೃತಿ ಇರಾನಿಗೆ ಸೋನಿಯಾ ತಾಕೀತು

ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರ ರಾಷ್ಟ್ರಪತ್ನಿ ಹೇಳಿಕೆಗೆ ಲೋಕಸಭೆಯೊಳಗೆ ತೀವ್ರ ಘೋಷಣೆಗಳ ನಡುವೆ, ಬಿಜೆಪಿಯ ಸ್ಮೃತಿ ಇರಾನಿ ಮತ್ತು ಸೋನಿಯಾ ಗಾಂಧಿ ಕೂಡ ಮಾತಿನ ಚಕಮಕಿ ನಡೆಸಿದರು. ವರದಿಗಳ ಪ್ರಕಾರ, ಸೋನಿಯಾ ಗಾಂಧಿ ಹೆಸರನ್ನು ಸ್ಕೃತಿ ಇರಾನಿ ಉಲ್ಲೇಖಿಸಿದರು. ಆಗ ನನ್ನ ಹೆಸರನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸೋನಿಯಾ ಪ್ರಶ್ನಿಸಿದರು. ನಾನು ಸಂಸತ್ತಿನಲ್ಲಿ ನಿಮ್ಮ ಹೆಸರನ್ನು ತೆಗೆದುಕೊಂಡಿದ್ದೇನೆ ಎಂದು ಸಚಿವೆ ಸ್ಕೃತಿ ಇರಾನಿ ಪ್ರತಿಕ್ರಿಯಿಸಿದರು. ಆಗ ಕೋಪದಿಂದ ಸೋನಿಯಾ ಗಾಂಧಿ "ನನ್ನೊಂದಿಗೆ ಮಾತನಾಡಬೇಡಿ.." ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಪಟ್ಟು

ಈ ಸಂಭಾಷಣೆಯು ಎರಡೂ ಕಡೆಯಿಂದ ಘೋಷಣೆಗಳನ್ನು ಪ್ರಚೋದಿಸಿತು. ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಗೌರವ್ ಗೊಗೊಯ್ ಅವರು ವಿಷಯವನ್ನು ಶಾಂತಗೊಳಿಸಲು ಮಧ್ಯಪ್ರವೇಶಿಸಬೇಕಾಯಿತು. ಮುರ್ಮು ಅವರನ್ನು "ರಾಷ್ಟ್ರಪತ್ನಿ" ಎಂದು ಕರೆದಿದ್ದಕ್ಕಾಗಿ ಲೋಕಸಭೆಯಲ್ಲಿ ಪಕ್ಷದ ಉನ್ನತ ನಾಯಕ ಚೌಧರಿ ವಿರುದ್ಧ ಬಿಜೆಪಿ ಸದಸ್ಯರು ಗುರುವಾರ ಸಂಸತ್ತಿನ ಉಭಯ ಸದನಗಳನ್ನು ಸ್ಥಗಿತಗೊಳಿಸಿದರು. ಚೌಧರಿ ಅವರ ಹೇಳಿಕೆಗೆ ಅವರು ಕಾಂಗ್ರೆಸ್ ಅಧ್ಯಕ್ಷರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಸೋನಿಯಾ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡಲು ಚೌಧರಿ ಅವರನ್ನು ನಾಯಕರನ್ನಾಗಿ ನೇಮಿಸಿದ್ದಾರೆ. ಅವರು ರಾಷ್ಟ್ರಪತಿ ಮುರ್ಮು ವಿರುದ್ಧ "ಅವಹೇಳನಕಾರಿ" ಟೀಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖ್ಯಸ್ಥರು ರಾಷ್ಟ್ರದ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಹೇಳಿದೆ.
Published by:Kavya V
First published: