ತನ್ನೂರಿನ ನೇಕಾರರ ಕಷ್ಟಕ್ಕೆ ಹೆಗಲುಕೊಟ್ಟ ಸಿವಿಲ್ ಎಂಜಿನಿಯರ್ ಉದ್ಯಾನ್ ಸಿಂಗ್ ಕಟ್ಟಿದ ಬೃಹತ್ ರೇಷ್ಮೆ ಉದ್ಯಮದ ಕಥೆ!

2018ರಲ್ಲಿ NGO, ಇಂಡಿಯಾ ರನ್‌ವೇ ವೀಕ್‌ನ ಸಂಘಟಕರಾದ ಅವಿನಾಶ್ ಪಠಾನಿಯಾ ಮತ್ತು ಕಿರಣ್ ಖೇವಾರೊಂದಿಗೆ ಸಂಸ್ಥೆ ಒಗ್ಗೂಡಿತು. ಇದರಿಂದಾಗಿ ಸುಮಾರು 40,000 ನೇಕಾರರು ತಮ್ಮ ಉತ್ಪನ್ನಗಳನ್ನು ನೇರವಾಗಿ ವಿನ್ಯಾಸಕಾರರಿಗೆ ಮಾರಿದರು.

ಸಿವಿಲ್ ಎಂಜಿನಿಯರ್ ಉದ್ಯಾನ್ ಸಿಂಗ್ .

ಸಿವಿಲ್ ಎಂಜಿನಿಯರ್ ಉದ್ಯಾನ್ ಸಿಂಗ್ .

 • Share this:
  ಬಿಹಾರ್‌ನ (Bihar) ಅಪರೂಪದ ಬಂಕಾ ರೇಷ್ಮೆಯನ್ನು (Banka Silk) ದೊಡ್ಡ ಬ್ರ್ಯಾಂಡ್‌ಗಳಾದ ಬೀಬಾ ಹಾಗೂ ಫ್ಯಾಬ್ ಇಂಡಿಯಾಗಳು ಖರೀದಿಸುತ್ತಿವೆ ಎಂದಾದಲ್ಲಿ ಇದರ ಹಿಂದೆ ಇರುವವರು ಸಿವಿಲ್ ಎಂಜಿನಿಯರ್ ಉದ್ಯಾನ್ ಸಿಂಗ್. ತನ್ನದೇ ಊರಿನ ಅಪರೂಪದ ಬಂಕಾ ರೇಷ್ಮೆಗೆ ಜಾಗತಿಕ ನೆಲೆಯಲ್ಲಿ ಸ್ಥಾನಮಾನ ದೊರಕಿಸಿಕೊಡಲು ಹಾಗೂ ನೇಕಾರರ ನೆರವಿಗೆ ನಿಂತ ಬಂಕಾದವರೇ ಆದ ಉದ್ಯಾನ್ ಸಿಂಗ್ ಮಾಡಿದ ಕೆಲಸ ಸಣ್ಣದೇನಲ್ಲ. ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂಬಂತೆ ತಮ್ಮೂರಿನ ಸಾಂಸ್ಕೃತಿಕ ಮಹತ್ತತೆಯನ್ನು ಜಾಗತಿಕ ನೆಲೆಯಲ್ಲಿ ಖ್ಯಾತಿಗೊಳಿಸಿದರು. ಇವರ ಸಾಹಸದ ಕುರಿತ ವಿವರವಾದ ಮಾಹಿತಿ ಇಲ್ಲಿದೆ..

  ಬಂಕಾ ರೇಷ್ಮೆ ಜಾಗತಿಕ ನೆಲೆ ಕಂಡುಕೊಂಡಿದ್ದು ಹೇಗೆ?

  ಬಿಹಾರದ ಬಂಕಾ ಊರಿನಲ್ಲಿ ಹುಟ್ಟಿಬೆಳೆದ ಉದ್ಯಾನ್ ಸಿಂಗ್ 2006ರಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಶಿಕ್ಷಣ ಪೂರೈಸಿ ಉದ್ಯೋಗದ ಬೇಟೆಗಾಗಿ ದೆಹಲಿಯನ್ನು ಸೇರಿದರು. ಭಾರತೀಯ ರೈಲ್ವೆಯಲ್ಲಿ ಉತ್ತಮ ಉದ್ಯೋಗ ದೊರಕಿದರೂ ಚಿತ್ರ ನಿರ್ಮಾಣದಲ್ಲಿ ಒಂದು ಕೈ ನೋಡಬೇಕೆಂಬ ಬಯಕೆಯಿಂದ ಈ ಉದ್ಯೋಗ ತೊರೆದರು.

  ಮುಂಬೈಗೆ ತೆರಳಿ ಹಲವಾರು ಜಾಹೀರಾತುಗಳು ಹಾಗೂ ಟಿವಿ ಸೀರಿಯಲ್‌ಗಳಲ್ಲಿ ಕೆಲಸ ಮಾಡಿದರು. ತನ್ನ ಊರಿನಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ನಿರ್ಧರಿಸಿದ್ದ 38ರ ಹರೆಯದ ಉದ್ಯಾನ್ ಸಿಂಗ್ ಆರು ವರ್ಷಗಳ ಕಾಲ ಹುಟ್ಟೂರಿನಿಂದ ದೂರವೇ ಉಳಿದಿದ್ದರು. ಬಂಕಾ ಊರಿನಲ್ಲಿ ಅಪರೂಪದ ಬಂಕಾ ರೇಷ್ಮೆ ನೇಯುತ್ತಿದ್ದರು. ಬಂಕಾ ಪ್ರದೇಶದ ಹೆಮ್ಮೆ ಎನ್ನಿಸಿಕೊಂಡಿದ್ದ ಕಲಾಕೃತಿಯು ಮಂಕಾಗಿ ಹೋಗಿತ್ತು. ಹೀಗಾಗಿ ಸಾವಿರಾರು ನೇಕಾರರು ಹಣ ಸಂಪಾದನೆಯಿಲ್ಲದೆ ದಿನಗಳೆಯುತ್ತಿದ್ದರು.

  ಸ್ಥಳೀಯರಾಗಿದ್ದ ಉದ್ಯಾನ್ ಸಿಂಗ್ ನೇಕಾರರ ಸಂಕಷ್ಟದ ಬಗ್ಗೆ ತಿಳಿದಿದ್ದರು. ಇದರಿಂದ ಇಲ್ಲಿನ ಪಾರಂಪರಿಕ ಕಲಾಕೃತಿಯನ್ನು ಪಟ್ಟಣದವರೆಗೆ ವಿಸ್ತರಿಸುವ ಗುರಿಯತ್ತ ಚಿತ್ತ ನೆಟ್ಟರು. ತಮ್ಮದೇ ಹಣ ಹೂಡಿಕೆ ಮಾಡಿ 25 ಲಕ್ಷದಷ್ಟು ಹಣ ವಿನಿಯೋಗಿಸಿ ತಮ್ಮ ಸ್ನೇಹಿತರ ಹಾಗೂ ಕುಟುಂಬದವರ ನೆರವಿನಿಂದ ನೇಕಾರರ ಕಷ್ಟಕ್ಕೆ ಹೆಗಲುಕೊಟ್ಟ ಉದ್ಯಾನ್ ರೇಷ್ಮೆ ನೇಕಾರರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಸುವ ಸಾಮಾಜಿಕ ಉದ್ಯಮವಾದ ‘ಬಂಕಾ ಸಿಲ್ಕ್’ ಆರಂಭಿಸಿದರು.

  ಕಳೆದ ಆರು ವರ್ಷಗಳಲ್ಲಿ ಸ್ಥಿರವಾದ ಆದಾಯ ಪಡೆದುಕೊಳ್ಳುವ ಮೂಲಕ ನೇಕಾರರ ಜೀವನದ ಮೇಲೆ ಈ ಉದ್ಯಮ ಇದೀಗ ಪ್ರಭಾವ ಬೀರಿದೆ. ನೇಕಾರರಿಗೆ ತರಬೇತಿ ನೀಡುವುದಕ್ಕಾಗಿ ವಿನ್ಯಾಸಕಾರರ ಹಾಗೂ ತಜ್ಞರ ಸಲಹೆ ಪಡೆಯುವುದು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಉದ್ಯಾನ್ ಸಿಂಗ್ ನೇಕಾರರ ಸ್ಥಿತಿಗತಿಯನ್ನು ಮಾರ್ಪಡಿಸಿದ್ದಾರೆ.

  ಕುಶಲಕರ್ಮಿಗಳಿಗೆ ವಿನ್ಯಾಸದ ಅಧಿಕಾರ ನೀಡುವುದು:

  ಉದ್ಯಾನ್ ಸಂಸ್ಕೃತಿ, ಭಾಷೆ ಹಾಗೂ ಪ್ರಾದೇಶಿಕ ಸಮಸ್ಯೆಗಳ ಜ್ಞಾನ ಹೊಂದಿದ್ದರೂ ತಾವು ಮಾಡಿದ ಯೋಜನೆಯಲ್ಲಿ ಪ್ರಗತಿ ಕಂಡುಕೊಳ್ಳಲು ಹಲವಾರು ತಿಂಗಳುಗಳೇ ಹಿಡಿಯಿತು. ಕಚ್ಚಾವಸ್ತುಗಳನ್ನು ಖರೀದಿಸಲು ಕುಶಲಕರ್ಮಿಗಳು ತೆಗೆದುಕೊಂಡ ಸಾಲ ತೀರಿಸುವುದು ಸವಾಲಿನ ಕೆಲಸವಾಗಿತ್ತು. ಕುಶಲಕರ್ಮಿಗಳಿಗೆ ಸರಕಾರದ ಮೈಕ್ರೋ ಫೈನಾನ್ಸ್ ನೆರವು ದೊರೆಯುವಂತೆ ಮಾಡಿದರು. ಕೈಮಗ್ಗ ಕ್ಲಸ್ಟರ್ ರಚಿಸಿದರು ಹಾಗೂ ವಿವಿಧ ಪ್ರಯೋಜನಗಳಿಗಾಗಿ ಸಂಸ್ಥೆಯ ಮೂಲಕ ಅರ್ಜಿ ಸಲ್ಲಿಸಿದರು.

  ಸಮಕಾಲೀನ ಬೇಡಿಕೆ ಪೂರೈಸಲು ನೇಕಾರರಿಗೆ ಡೈ, ಥ್ರೆಡ್‌ವರ್ಕ್ ತಯಾರಿಸಲು ಮತ್ತು ಹೊಸ ನವೀನ ಸ್ವರೂಪಗಳನ್ನು ಅನುಷ್ಠಾನಗೊಳಿಸಲು ತರಬೇತಿ ನೀಡುವ ಸಲುವಾಗಿ ಫ್ಯಾಶನ್ ಡಿಸೈನರ್‌ಗಳ ಸಹಕಾರವನ್ನು ಕೂಡ ಬಳಸಿಕೊಂಡರು. ಬಂಕಾ ರೇಷ್ಮೆಯನ್ನು ರೇಷ್ಮೆಗೂಡುಗಳ ರೇಷ್ಮೆ ತಂತುಗಳಿಂದ ಹೊರತೆಗೆಯಲಾಗುತ್ತದೆ. ಬಟ್ಟೆಗಳನ್ನು ರಚಿಸಲು ಕೈಮಗ್ಗಗಳ ಮೇಲೆ ನೂಲುಗಳನ್ನು ಒಟ್ಟಿಗೆ ನೇಯಲಾಗುತ್ತದೆ. ಹಾಗೂ ಬಣ್ಣಗಳಿಗೆ ತರಕಾರಿಗಳನ್ನು ಬಳಸಿಕೊಳ್ಳಲಾಗುತ್ತದೆ.

  ಹೊಸ ಉತ್ಪನ್ನಗಳು ಸಿದ್ಧವಾದೊಡನೆ ಆನ್‌ಲೈನ್ ಹಾಗೂ ಆಫ್‌ಲೈನ್ ಮಾರುಕಟ್ಟೆ ಚಾನಲ್‌ಗಳನ್ನು ರಚಿಸುವತ್ತ ದೃಷ್ಟಿ ನೆಟ್ಟರು. ಕೈಮಗ್ಗ ಬಟ್ಟೆಗಳಿಗಾಗಿ ಆನ್‌ಲೈನ್ ಪೋರ್ಟಲ್ ರೂಪಿಸಿದ ಉದ್ಯಾನ್, ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರಿಕೆ ಮಾಡಿದರು.

  ಯಶಸ್ಸು ತಂದ ಆಫ್‌ಲೈನ್ ಈವೆಂಟ್:

  ಮೊದಲ ಆಫ್‌ಲೈನ್ ಈವೆಂಟ್‌ನಲ್ಲಿ 100 ನೇಕಾರರೊಂದಿಗೆ ಸೇರಿ ಕೆಲಸ ಮಾಡಿ 2015ರಲ್ಲಿ ಪಾಟ್ನಾದಲ್ಲಿ ಪ್ರದರ್ಶನ ಆಯೋಜಿಸಿದರು. ಕುಶಲಕರ್ಮಿಗಳು 7 ಲಕ್ಷ ಬೆಲೆಯ ಸ್ಕಾರ್ಫ್, ಸೀರೆ ಹಾಗೂ ಬಟ್ಟೆಗಳನ್ನು ಮಾರಾಟ ಮಾಡಿದರು. ಇದು ಮುಂಬೈ ಮತ್ತು ದೆಹಲಿಯಂತಹ ವಿವಿಧ ನಗರಗಳಲ್ಲಿ ಒಂದೆರಡು ಪ್ರದರ್ಶನಗಳನ್ನು ಮಾಡಲು ಉದ್ಯಾನ್‌ರನ್ನು ಪ್ರೇರೇಪಿಸಿತು. ಹೀಗೆ ಸಾಕಷ್ಟು ಅನುಭವಗಳನ್ನು ಪಡೆದ ಉದ್ಯಾನ್ ಬೇರೆ ಬೇರೆ ಲೈಫ್‌ಸ್ಟೈಲ್ ಬ್ರ್ಯಾಂಡ್‌ಗಳಾದ ಬಿಬಾ, ಫ್ಯಾಬ್‌ಇಂಡಿಯಾ ಹಾಗೂ ಅರವಿಂದ್‌ ಅನ್ನು ಮಾರುಕಟ್ಟೆಗಾಗಿ ಸಂಧಿಸಿದರು.

  ರೇಷ್ಮೆಯನ್ನು ಮಾರಾಟ ಮಾಡಲು ಎರಡು ಮಾರ್ಗಗಳಿವೆ. ಖರೀದಿದಾರರು ನೇರವಾಗಿ ನೇಕಾರರಿಂದ ಖರೀದಿಸಬಹುದು ಅಥವಾ ನೇಕಾರರು ಅದನ್ನು ನನಗೆ ಮಾರಾಟ ಮಾಡಬಹುದು. ನಾನು ಉತ್ಪನ್ನಗಳನ್ನು ಖರೀದಿಸಿದ ನಂತರ, ಈ ಉತ್ಪನ್ನಗಳ ಮೇಲೆ ಕೆಲಸ ಮಾಡಲು ವಿನ್ಯಾಸಕರನ್ನು ಕರೆತರುತ್ತೇನೆ ಹಾಗೂ ನಂತರ ಮಾರಾಟ ಮಾಡುತ್ತೇನೆ ಎಂದು ಉದ್ಯಾನ್ ಹೇಳುತ್ತಾರೆ.

  2018ರಲ್ಲಿ NGO, ಇಂಡಿಯಾ ರನ್‌ವೇ ವೀಕ್‌ನ ಸಂಘಟಕರಾದ ಅವಿನಾಶ್ ಪಠಾನಿಯಾ ಮತ್ತು ಕಿರಣ್ ಖೇವಾರೊಂದಿಗೆ ಸಂಸ್ಥೆ ಒಗ್ಗೂಡಿತು. ಇದರಿಂದಾಗಿ ಸುಮಾರು 40,000 ನೇಕಾರರು ತಮ್ಮ ಉತ್ಪನ್ನಗಳನ್ನು ನೇರವಾಗಿ ವಿನ್ಯಾಸಕಾರರಿಗೆ ಮಾರಿದರು. 40 ರೂ. ನಿಂದ 5,000 ರೂ. ವರೆಗಿನ ಬೆಲೆಯೊಂದಿಗೆ, ಸಂಸ್ಥೆಯು ಶಿರೋವಸ್ತ್ರಗಳು, ಸ್ಟೋಲ್‌, ಸೀರೆ, ಮಾಸ್ಕ್‌ಗಳನ್ನು ಮತ್ತು ಹೆಚ್ಚಿನದನ್ನು ಮಾರಾಟ ಮಾಡುತ್ತದೆ.

  ನೇಕಾರರ ಮೆಚ್ಚುಗೆಯ ಮಾತುಗಳು:

  "ಬಿಂಕಾದ ನೇಕಾರರ ಮೂಲಕ ಬಂಕಾ ರೇಷ್ಮೆಯಿಂದ ಸ್ವಾಧೀನಪಡಿಸಿಕೊಂಡ ಅಧಿಕೃತ ಕೈಮಗ್ಗ ಬಟ್ಟೆಯನ್ನು ನೇಕಾರರು ನಿಗದಿಪಡಿಸುವ ಬೆಲೆಗೆ ಖರೀದಿಸಲಾಗುತ್ತದೆ" ಎಂದು ಅವಿನಾಶ್ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ನೇಕಾರರು ಫ್ಯಾಬ್ ಇಂಡಿಯಾದಂತಹ ದೊಡ್ಡ ಸಂಸ್ಥೆಗಳೊಂದಿಗೆ ನೇರವಾಗಿ ವ್ಯಾಪಾರ ನಡೆಸುತ್ತಿದ್ದು ತಮ್ಮ ಪೂರ್ವಜರಿಂದಲೂ ಅತ್ಯುತ್ತಮ ಲಾಭ ಪಡೆದುಕೊಳ್ಳುತ್ತಿದ್ದೇವೆ ಎಂದು ತಿಳಿಸುತ್ತಾರೆ. ನೇಯ್ಗೆ ಕೆಲಸವನ್ನು ಸುಲಭಗೊಳಿಸಲು ಅತ್ಯಾಧುನಿಕ ಯಂತ್ರಗಳನ್ನು ನಾವು ಪಡೆದುಕೊಂಡಿದ್ದೇವೆ ಎಂದು ನೇಕಾರರು ತಿಳಿಸುತ್ತಾರೆ.

  ನೇಕಾರರು ಪ್ರತಿ ದಿನ 300 ರೂ. ರಂತೆ ಆದಾಯ ಗಳಿಸುತ್ತಿದ್ದು ಇದರಿಂದ ಸರಿ ಸುಮಾರು 5000 ನೇಕಾರರ ಜೀವನ ಮಟ್ಟ ಸುಧಾರಿಸಿದೆ ಹಾಗೂ ಪ್ರಗತಿಯಲ್ಲಿ ಗಮನಾರ್ಹ ಏರಿಕೆಯಾಗಿದೆ.

  ಇದನ್ನೂ ಓದಿ:School Re-Open| ಕರ್ನಾಟಕದಲ್ಲಿ 1ನೇ ತರಗತಿಯಿಂದ ಶಾಲೆಗಳ ಪುನಾರಾರಂಭಕ್ಕೆ ಪೋಷಕರು ಆಸಕ್ತಿ; ವರದಿ

  ಉದ್ಯಾನ್ ತಮ್ಮ ಯೋಜನೆಯನ್ನು ಅಮೆರಿಕ ಹಾಗೂ ಯೂರೋಪ್‌ಗೆ ರಫ್ತು ಮಾಡುವ ಕಾರ್ಯಾಚರಣೆಗಳನ್ನು ವಿಸ್ತರಿಸುವ ಯೋಜನೆಗಳಲ್ಲಿ ಪ್ರಸ್ತುತ ನಿರತರಾಗಿದ್ದು ದೆಹಲಿಯಲ್ಲಿ ಬಂಕಾ ರೇಷ್ಮೆ ಅಂಗಡಿ ತೆರೆದಿದ್ದಾರೆ. ಅಳಿವಿನಂಚಿನಲ್ಲಿರುವ ಘಟಕಗಳನ್ನು ಸುಧಾರಿಸಲು ಹಾಗೂ ನೇಕಾರರ ಪ್ರಗತಿ ಸಾಧಿಸುವ ಸಲುವಾಗಿ ಸರಕಾರ ಹಾಗೂ ನಬಾರ್ಡ್ ಸಹಕಾರ ಉದ್ಯಾನ್ ಸಂಪರ್ಕಿಸಿದ್ದಾರೆ.
  First published: