ಮಗುವಿನ ಪ್ರಾಣ ಉಳಿಸಲು 16 ಕೋಟಿ ಮೌಲ್ಯದ ಚುಚ್ಚುಮದ್ದನ್ನು ಉಚಿತವಾಗಿ ನೀಡಿದ ಯುಎಸ್ ಕಂಪೆನಿ

ಶಿವರಾಜ್ ಅವರ ಪೋಷಕರು ತಮ್ಮ ಮಗನು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿದ್ದು, ಭಾರತದಿಂದ ಜೋಲ್ಗೇನ್ಸ್ಮಾ ಎನ್ನುವ ಅನುವಂಶಿಕ ಧಾತುವಿನ ಬದಲಿ ಚಿಕಿತ್ಸೆಯನ್ನು ಲಾಟರಿ ಮೂಲಕ ಪಡೆದ ಮೊದಲ ಮಗು ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅನೇಕ ಹೊಸ ಹೊಸ ಕಾಯಿಲೆಗಳಿಂದ ಈಗಿನ ಮಕ್ಕಳು ತುಂಬಾನೇ ಕಷ್ಟ ಪಡುತ್ತಿದ್ದಾರೆ, ಅವರ ಜೊತೆಗೆ ಅವರನ್ನು ಹೆತ್ತವರು ಸಹ ಅವರನ್ನು ಎತ್ತಿಕೊಂಡು ಆಸ್ಪತ್ರೆಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಬಂದೊದಗಿದೆ.


  ಮಹಾರಾಷ್ಟ್ರ ರಾಜ್ಯದ ನಾಸಿಕ್ ನಗರದಲ್ಲಿ ವಾಸವಾಗಿರುವ ಶಿವರಾಜ್ ದವಾರೆ ಎಂಬ ಹೆಸರಿನ ಮಗುವು ಅಪರೂಪದ ಅನುವಂಶಿಕ ಜೀನ್​ ಡಿಸ್​ಆರ್ಡರ್​ ಅಸ್ವಸ್ಥತೆಯಿಂದ ಬಳಲುತ್ತಿತ್ತು. ಇತಿಹಾಸದಲ್ಲಿಯೇ ಅತ್ಯಂತ ದುಬಾರಿಯಾದ16 ಕೋಟಿ ರೂಪಾಯಿ ಮೊತ್ತದ ಜೀವ ಉಳಿಸುವ ಚುಚ್ಚುಮದ್ದನ್ನು ಅಮೆರಿಕದ ಕಂಪನಿಯೊಂದರಿಂದ ಈ ಮಗುವಿಗೆ ಉಚಿತವಾಗಿ ದೊರಕಿದ್ದು, ಪೋಷಕರು ಮಗುವಿನ ಜೀವ ಉಳಿದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.


  ಶಿವರಾಜ್ ಅವರ ಪೋಷಕರು ತಮ್ಮ ಮಗನು ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿದ್ದು, ಜೋಲ್ಗೇನ್ಸ್ಮಾ ಕಂಪೆನಿಯಿಂದ ಅನುವಂಶಿಕ ಧಾತುವಿನ ಬದಲಿ ಚಿಕಿತ್ಸೆಯನ್ನು ಲಾಟರಿ ಮೂಲಕ ಪಡೆದ ಭಾರತದ ಮೊದಲ ಮಗುವಾಗಿದ್ದಾರೆ ಎಂದು ಹೇಳಿದ್ದಾರೆ.


  ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವಂತಹ ರೋಗಿಗಳಿಗೆ ಜೋಲ್ಗೇನ್ಸ್ಮಾ ಅತ್ಯಂತ ಪರಿಣಾಮಕಾರಿ ಔಷಧಿ ಎಂದು ಹೇಳಿದರು ಎಂದು ಶಿವರಾಜ್ ನ ಪೋಷಕರು ಹೇಳಿದ್ದಾರೆ. ಮಗುವಿನ ಎರಡನೇ ಹುಟ್ಟುಹಬ್ಬದ ಮುಂಚಿತವಾಗಿ ಈ ರೋಗವು ಇರುವುದು ಪತ್ತೆಯಾಗಿತ್ತು, ನಂತರ ಮಗುವನ್ನು ಮುಂಬೈನ ಹಿಂದುಜಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದರು.


  ಹಿಂದುಜಾ ಆಸ್ಪತ್ರೆಯ ನರರೋಗ ವೈದ್ಯ ಡಾ. ಬ್ರಜೇಶ್ ಉದಾನಿ ಅವರು ಶಿವರಾಜ್​ಗೆ ಇರುವ ಅಪರೂಪದ ಖಾಯಿಲೆಯನ್ನು ಪತ್ತೆ ಮಾಡಿ, ಈ ಕಾಯಿಲೆಗೆ ಕೇವಲ ಜೋಲ್ಗೇನ್ಸ್ಮಾ ಔಷಧಿ ಮಾತ್ರ ಜೀವವನ್ನು ಉಳಿಸಬಹುದೆಂದು ಸೂಚಿಸಿದರು ಎಂದು ಮಗುವಿನ ತಂದೆ ವಿಶಾಲ್ ದವಾರೆ ತಿಳಿಸಿದರು. ಮಗುವಿನ ತಂದೆ ನಾಸಿಕ್‌ ನಲ್ಲಿ ಒಂದು ಚಿಕ್ಕ ಜೆರಾಕ್ಸ್​ ಅಂಗಡಿ ನಡೆಸುತ್ತಿದ್ದು ಇಷ್ಟೊಂದು ದುಬಾರಿಯಾದ ಚಿಕಿತ್ಸೆಯನ್ನು ಒದಗಿಸುವುದು ನಿಜಕ್ಕೂ ಅವರಿಗೆ ಅಸಾಧ್ಯವಾಗಿತ್ತು.


  ಈ ವೇಳೆಯಲ್ಲಿ ವಿಶಾಲ್ ದವಾರೆ ಅವರಿಗೆ ವೈದ್ಯರು ಯುಎಸ್ ಮೂಲದ ಕಂಪೆನಿಯೊಂದಕ್ಕೆ ಈ ದುಬಾರಿಯಾದ ಚಿಕಿತ್ಸೆ ಪಡೆಯಲು ಕ್ಲಿನಿಕಲ್ ಟ್ರಯಲ್ ನಲ್ಲಿ ಲಾಟರಿಯ ಮೂಲಕ ಪಡೆಯುವುದಕ್ಕೆ ಅವಕಾಶವಿದ್ದು ನೀವು ಅದಕ್ಕೆ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿದ್ದಾರೆ. ಅದೃಷ್ಟವಶಾತ್ ನಿಮ್ಮ ಮಗುವಿಗೆ ಏನಾದರೂ ಆ ಔಷಧಿ ಸಿಕ್ಕರೆ ಒಳ್ಳೆಯದು ಎಂದು ವೈದ್ಯರು ಹೇಳಿದ್ದರಂತೆ ಎಂದು ವಿಶಾಲ್ ತಿಳಿಸಿದರು. 


  ಡಿಸೆಂಬರ್ 25, 2020 ರಂದು ನಡೆದ ಲಕ್ಕಿ ಡ್ರಾ ದಲ್ಲಿ ಶಿವರಾಜ್ ಹೆಸರು ಕಂಪನಿಯಿಂದ ಆಯ್ಕೆಯಾಗಿದೆ ಮತ್ತು ಜನವರಿ 19, 2021 ರಂದು ಹಿಂದೂಜಾ ಆಸ್ಪತ್ರೆಯಲ್ಲಿ ಚುಚ್ಚುಮದ್ದನ್ನು ಅವರಿಗೆ ನೀಡಲಾಯಿತು.


  ಬೆನ್ನುಮೂಳೆಯ ಸ್ನಾಯು ಕ್ಷೀಣತೆಯು ಒಂದು ಅನುವಂಶಿಕ ಖಾಯಿಲೆಯಾಗಿದ್ದು 10,000 ಮಕ್ಕಳಲ್ಲಿ ಒಬ್ಬರು ಈ ಅಸ್ವಸ್ಥತೆಯಿಂದ ಬಳಲುತ್ತಾರೆ. ಇದು ಮಗುವಿನ ಚಲನೆಯನ್ನು ನಿಧಾನಗೊಳಿಸುತ್ತದೆ ಮತ್ತು ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನಂತರ, ಇದು ಮಗುವಿನ ಸಾವಿಗೆ ಕಾರಣವಾಗುತ್ತದೆ," ಎಂದು ಶಿವರಾಜ್‌ಗೆ ಚಿಕಿತ್ಸೆ ನೀಡಿದ ಡಾ. ರಮಂತ್ ಪಾಟೀಲ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದರು.
  ಜುಲೈನಲ್ಲಿ, ಕೇಂದ್ರ ಸರ್ಕಾರವುತಮಿಳುನಾಡಿನ ಎರಡು ವರ್ಷದ ಬಾಲಕಿಗೆ ಇದೇ ರೀತಿಯ ಜೀವರಕ್ಷಕ ಔಷಧವನ್ನು ಆಮದು ಮಾಡಿಕೊಳ್ಳಲು ಕಸ್ಟಮ್ಸ್ ಸುಂಕ ಮತ್ತು ಜಿಎಸ್‌ಟಿಯಿಂದ ವಿಶೇಷ ವಿನಾಯಿತಿಯನ್ನು ನೀಡಿತ್ತು ಮತ್ತು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ 55 ಮಿಲಿ ಲೀಟರ್ ಔಷಧಿಯ ಮೇಲೆ ಆಮದು ತೆರಿಗೆಯನ್ನು ಈ ಸಂದರ್ಭಕ್ಕೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ವಿನಾಯಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ್ದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.


  Published by:HR Ramesh
  First published: