ಅಪ್ರಾಪ್ತ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ!


Updated:August 31, 2018, 4:12 PM IST
ಅಪ್ರಾಪ್ತ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ!

Updated: August 31, 2018, 4:12 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.31): ನೊಯ್ಡಾದ ಜೇವರ್​ ಠಾಣೆ ಕ್ಷೇತ್ರದ ದಸ್ತಂಪುರ್​ ಹಳ್ಳಿಯ 16 ವರ್ಷದ ದಲಿತ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಗ್ರೇಟರ್​ ನೊಯ್ಡಾದ ಪೊಲೀಸ್​ ಅಧೀಕ್ಷಕ ಪಿಯೂಷ್​ ಕುಮಾರ್​ ಸಿಂಗ್​ ಮಾತನಾಡುತ್ತಾ ಜೇವರ್​ಪುರ್​ ಠಾಣೆಯ ದಸ್ತಂಪುರ್​ ಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಆಗಸ್ಟ್​ 24 ರಂದು ಹೊಲಿಗೆ ತರಬೇತಿಗೆಂದು ಮನೆಯಿಂದ ಹೊರಟಿದ್ದಳು. ಅದೇ ಸಂದರ್ಭದಲ್ಲಿ ಬೈಕ್​​ನಲ್ಲಿ ಬಂದ ಇಬ್ಬರು ಯುವಕರು ಆಕೆಯನ್ನು ಕರೆದೊಯ್ದಿದ್ದಾರೆ.

"ಬೈಕ್​ನಲ್ಲಿ ಬಂದಿದ್ದ ಇಬ್ಬರ ವಿರುದ್ಧವೂ ಪೋಕ್ಸೋ, ಎಸ್​ಸಿ/ಎಸ್​ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ" ಎಂದು ಪಿಯೂಷ್​ ಕುಮಾರ್​ ತಿಳಿಸಿದ್ದಾರೆ. ಇಬ್ಬರೂ ಆ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಅವರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿ ಈ ಕುರಿತಾಗಿ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಸಿದ್ದೇವೆ ಎಂದಿದ್ದಾರೆ.

ಇನ್ನು ಬಾಲಕಿಯ ಮೇಲೆ ಅತ್ಯಾಚಾಋ ಮಾಡುವುದಕ್ಕೂ ಮೊದಲು ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿದ್ದು, ಬಳಿಕ ಆಕೆಯನ್ನು ಆಕೆಯ ಮನೆ ಎದುರು ಎಸೆದು ಪರಾರಿಯಾಗಿದ್ದರು ಎಂಬ ವಿಚಾರವೂ ತಿಳಿದು ಬಂದಿದೆ.

 
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ