Rape: 10ರ ಕಂದಮ್ಮನ ಮೇಲೆ ಅತ್ಯಾಚಾರ; ಕಾಮುಕನಿಗೆ 10 ದಿನದಲ್ಲಿಯೇ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಬಂಧನದ ಏಳು ಗಂಟೆಯೊಳಗೆ ತನಿಖಾ ವರದಿ ಸಿದ್ಧಪಡಿಸಿದ್ದ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ಶೀಘ್ರ ನಡೆಯಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಚನಾ ಮನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೈಪುರ: ರಾಜಸ್ಥಾನ ರಾಜಧಾನಿ ಜೈಪುರನ ಪೋಕ್ಸೋ ಕೋರ್ಟ್-3-ಮೆಟ್ರೋ-1 (POCSO Court) 10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ (Rape Case) ತೀರ್ಪನ್ನು 10 ದಿನದಲ್ಲಿ ಪ್ರಕಟಿಸಿದೆ. ನ್ಯಾಯಾಲಯ ಆಪರಾಧಿಗೆ 20 ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದೆ. ರಾಜಸ್ಥಾನ (Rajasthan)ದ ನ್ಯಾಯಾಲಯದ ಇತಿಹಾಸದಲ್ಲಿ ಪ್ರಕರಣದ ವಿಚಾರಣೆ ನಡೆಸಿ 10 ದಿನದಲ್ಲಿ ತೀರ್ಪು ನೀಡಿದ ಮೊದಲ ಕೇಸ್ ಇದಾಗಿದೆ. ಸೆಪ್ಟೆಂಬರ್ 26ರಂದು ಕೋಟಖ್ವಾದಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಷ್ಟೇ ವೇಗವಾಗಿ ತನಿಖಾ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 5 ದಿನ ವಿಚಾರಣೆ ನಡೆಸಿದ ಬಳಿಕ ತೀರ್ಪು ಪ್ರಕಟಿಸಿದೆ.

  ಪ್ರಕರಣದ ಸಂತ್ರಸ್ತೆ ವಿಡಿಯೋ ಕಾನ್ಪೆರೆನ್ಸ್ ಮೂಲಕವೇ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಳು. ವಾದ ಆಲಿಸಿದ ನ್ಯಾಯಾಧೀಶ ವಿಕಾಸ್ ಖಂಡೇಲ್ವಾಲ್ 10 ದಿನದಲ್ಲಿಯೇ ಮಹತ್ವದ ತೀರ್ಪು ನೀಡಿದ್ದಾರೆ. ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಹೇಳಿಕೆ ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಚಾರ ಸಂತ್ರಸ್ತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಹೇಳಿಕೆ ದಾಖಲಿಸಿದ ಪ್ರಕರಣ ಇದಾಗಿದೆ. ನ್ಯಾಯಾಲಯ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಾಗ ಅಪರಾಧಿ ತಲೆ ತಗ್ಗಿಸಿಯೇ ನಿಂತಿದ್ದನು.

  ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ

  ಸೆಪ್ಟೆಂಬರ್ 26ರಂದು ಬಾಲಕಿ ಮನೆಗೆ ಸಾಮಗ್ರಿ ತರಲು ಅಂಗಡಿಗೆ ಹೋಗಿದ್ದಳು. ಅಂಗಡಿಯಿಂದ ಮನೆಗೆ ಹಿಂದಿರುಗುವಾಗ ಅಪರಾಧಿ ಈ ಕೃತ್ಯ ಎದುರಾಗಿದ್ದಾನೆ. ನಿಮ್ಮ ಚಿಕ್ಕಪ್ಪನಿಗೆ ಹಣ ನೀಡಲು ತೆರಳುತ್ತಿದ್ದೇನೆ. ನನ್ನ ಜೊತೆ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡ ಹೋದ ಕಾಮುಕ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಬಾಲಕಿ ಪ್ರಜ್ಞೆ ತಪ್ಪಿದ ಕೂಡಲೇ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದು ಸ್ಥಳದಿಂದ ಎಸ್ಕೇಪ್ ಆಗಿದ್ದನು.

  ಏಳು ಗಂಟೆಯಲ್ಲಿ ತನಿಖೆ ಮುಗಿಸಿದ ಪೊಲೀಸರು

  ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಬಂಧನದ ಏಳು ಗಂಟೆಯೊಳಗೆ ತನಿಖಾ ವರದಿ ಸಿದ್ಧಪಡಿಸಿದ್ದ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ಶೀಘ್ರ ನಡೆಯಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಚನಾ ಮನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಲಯ ವಿಚಾರಣೆ ಆರಂಭಿಸಿದ 5 ದಿನಗಳಲ್ಲಿಯೇ ತೀರ್ಪು ನೀಡಿದೆ. ಸೋಮವಾರ ಕೊನೆಯ ಬಾರಿ ಪ್ರಕರಣದ ವಿಚಾರಣೆ ನಡೆದಿತ್ತು.

  ಟ್ರಯಲ್ ಟೈಮ್ ಲೈನ್

  ಘಟನೆ ನಡೆದಿದ್ದು - ಸೆಪ್ಟೆಂಬರ್ 26
  ಎಫ್‍ಐಆರ್ ದಾಖಲು - ಸೆಪ್ಟಂಬರ್ 27, ರಾತ್ರಿ 12.23ಕ್ಕೆ
  ಬಂಧನ - ಸೆಪ್ಟೆಂಬರ್ 27, ಮಧ್ಯಾಹ್ನ 12 ಗಂಟೆ
  ತನಿಖಾ ವರದಿ - ಸೆಪ್ಟಂಬರ್ 27, ಸಂಜೆ 7 ಗಂಟೆ
  ಟ್ರಯಲ್ ಆರಂಭ- ಸೆಪ್ಟಂಬರ್ 28
  ಅಂತಿಮ ವಾದ - ಅಕ್ಟೋಬರ್ 4
  ತೀರ್ಪು ಪ್ರಕಟ - ಅಕ್ಟೋಬರ್ 5 ಮಧ್ಯಾಹ್ನ

  ಇದನ್ನು ಓದಿ: Sindagi And Hangal By Election: 2 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್; ಆಪ್ತನಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಮೆಲುಗೈ

  ಸೆಪ್ಟೆಂಬರ್ ನಲ್ಲಿಯೇ ರಾಜಸ್ಥಾನದಲ್ಲಿ ಆರೋಪಿ, ಸಾಕ್ಷಿ ಸೇರಿದಂತೆ ಇತರರ ಹೇಳಿಕೆ ದಾಖಲಿಸುವ ವಿಡಿಯೋ ಕಾನ್ಪರೆನ್ಸ್ ವ್ಯವಸ್ಥೆ ಆರಂಭಿಸಲಾಗಿತ್ತು. ಸಂತ್ರಸ್ತೆಗೆ ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ದಾಖಲಿಸುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಸಂತ್ರಸ್ತೆ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಆದ್ದರಿಂದ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಿತ್ತು ಎಂದು ವಕೀಲೆ ರಚನಾ ಮನ್ ಹೇಳಿದ್ದಾರೆ.

  ವರದಿ: ಮೊಹ್ಮದ್​​ ರಫೀಕ್​ ಕೆ
  Published by:HR Ramesh
  First published: