Shocking News: ಉಕ್ರೇನ್‌ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ರಾ ರಷ್ಯಾ ಸೈನಿಕರು?

"ದುರಾದೃಷ್ಟವಶಾತ್, ರಷ್ಯಾದ ಸೈನಿಕರು ಉಕ್ರೇನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಹಲವಾರು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ" ಅಂತ ಉಕ್ರೇನ್ ಸಚಿವರೇ ಹೇಳಿದ್ದಾರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ರಷ್ಯಾ (Russia) ರಾಷ್ಟ್ರವು ಕಳೆದ ವಾರ ಉಕ್ರೇನ್ (Ukraine)  ಮೇಲೆ ಸರ್ವರೀತಿಯ ದಾಳಿಯನ್ನು (Attack) ಪ್ರಾರಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದ್ದು, ಇದರಿಂದ ಎಷ್ಟೋ ಅಮಾಯಕ ಜನರು ಹತ್ಯೆಗಿಡಾದರು (Murder) ಮತ್ತು ಉಕ್ರೇನ್ ನಲ್ಲಿ ವ್ಯಾಸಂಗಕ್ಕೆ (Study) ಮತ್ತು ಕೆಲಸಕ್ಕೆ (Work) ಎಂದು ಹೋದ ಬೇರೆ ಬೇರೆ ದೇಶದ ವಿದ್ಯಾರ್ಥಿಗಳು (Students) ಮತ್ತು ಜನರು ಉಕ್ರೇನ್ ಬಿಟ್ಟು ತಮ್ಮ ತಮ್ಮ ದೇಶಗಳಿಗೆ ವಲಸೆ ಹೋಗುವಂತೆ ಆಯಿತು. ಈ ರಷ್ಯಾ ಮಾಡಿದ ದಾಳಿಯಲ್ಲಿ ಎಷ್ಟೋ ಅಮಾಯಕರು ಬಲಿಯಾದರು ಮತ್ತು ಎಷ್ಟೋ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ತಮ್ಮ ಪ್ರಾಣ ಉಳಿಸಿಕೊಳ್ಳಲು ತಮ್ಮ ಹೆಂಡತಿ ಮಕ್ಕಳೊಡನೆ ರಾತ್ರೋ ರಾತ್ರಿಯಲ್ಲಿಯೇ ದೇಶ ಬಿಟ್ಟು ವಲಸೆ ಹೋಗುವಂತೆ ಆಗಿರುವ ದೃಶ್ಯಗಳನ್ನು ನಾವು ವಾರಗಳಿಂದ ಎಲ್ಲಾ ಸುದ್ದಿ ಮಾಧ್ಯಮದಲ್ಲಿ ನೋಡುತ್ತಲೇ ಇದ್ದೇವೆ.

  ಉಕ್ರೇನ್‌ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರವಾಗಿದೆಯಾ?

  ಇಷ್ಟೆಲ್ಲದರ ನಡುವೆ ಉಕ್ರೇನ್ ನಲ್ಲಿ ಇರುವಂತಹ ಮಹಿಳೆಯರ ಮೇಲೆ ರಷ್ಯಾದ ಸೇನಾ ಸಿಬ್ಬಂದಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ಶುಕ್ರವಾರ ಆರೋಪಿಸಿದ್ದಾರೆ. ಈ ಅಪರಾಧಗಳು ಶಿಕ್ಷೆಯನ್ನು ಅನುಭವಿಸದೆ ಇರದು ಎಂದು ಸಹ ಇವರು ಹೇಳಿದರು.

  ಉಕ್ರೇನ್ ನಲ್ಲಿ ಮಾಸ್ಕೋದ ಆಕ್ರಮಣದ ಬಗ್ಗೆ ನ್ಯಾಯ ತೀರ್ಮಾನ ಮಾಡಲು ವಿಶೇಷ ನ್ಯಾಯಾಧಿಕರಣವನ್ನು ರಚಿಸಬೇಕೆಂದು ಉಕ್ರೇನ್ ನ ವಿದೇಶಾಂಗ ಸಚಿವರಾದ ಕುಲೆಬಾ ಅವರು ಕರೆ ನೀಡಿದರು.

  ಹಲವೆಡೆ ರೇಪ್ ಆಗಿದೆ ಎಂದ ಸಚಿವ

  ಲಂಡನ್ನಿನಲ್ಲಿ ನಡೆದ ಸಂಕ್ಷಿಪ್ತ ವಿವರಣೆಯ ಸಂದರ್ಭದಲ್ಲಿ ಅವರು "ದುರದೃಷ್ಟವಶಾತ್, ರಷ್ಯಾದ ಸೈನಿಕರು ಉಕ್ರೇನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಹಲವಾರು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ" ಎಂದು ಆರೋಪಿಸಿದರು.

  ಇದನ್ನೂ ಓದಿ: Ukraine ಅಧ್ಯಕ್ಷನಿಗಾಗಿ ಕಾದು ಕುಳಿತಿದೆ ಸಾವು.. ಒಂದೇ ವಾರದಲ್ಲಿ 3 ಸಲ ಹತ್ಯೆಗೆ Russia ಸ್ಕೆಚ್!

  “ಎಲ್ಲರನ್ನೂ ಕಟಕಟೆಯಲ್ಲಿ ನಿಲ್ಲಿಸ್ತೀವಿ”

  ಉಕ್ರೇನ್ ನಲ್ಲಿ ಸಾವು ನೋವುಗಳ ಆತಂಕಕಾರಿ ಹೆಚ್ಚಳದ ನಡುವೆ, ಅಂತರರಾಷ್ಟ್ರೀಯ ಕಾನೂನು ಕೀವ್ ಗೆ ಲಭ್ಯವಿರುವ ಏಕೈಕ "ನಾಗರಿಕತೆಯ ಸಾಧನ" ಎಂದು ಕುಲೆಬಾ ಹೇಳಿದರು, ಕೊನೆಯಲ್ಲಿ, ಅಂತಿಮವಾಗಿ, ಈ ಯುದ್ಧವನ್ನು ಮಾಡಿದ ಮತ್ತು ಅದಕ್ಕೆ ಸಹಾಯ ಮಾಡಿದ ಎಲ್ಲರನ್ನೂ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲಾಗುವುದು ಎಂದು ಹೇಳಿದರು.

  "ನಮಗಿಂತ ಹೆಚ್ಚು ಬಲಶಾಲಿಯಾಗಿರುವ ಶತ್ರುಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಆದರೆ ಅಂತರರಾಷ್ಟ್ರೀಯ ಕಾನೂನು ನಮ್ಮ ಪರವಾಗಿದೆ ಮತ್ತು ಆಶಾದಾಯಕವಾಗಿ ಇದು ನಮಗೆ ಈ ಒಂದು ಸಂದರ್ಭದಲ್ಲಿ ಮೇಲುಗೈ ಸಾಧಿಸಲು ಸಹಾಯ ಮಾಡಲು ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ" ಎಂದು ಅವರು ಹೇಳಿದರು.

  ಈ ವಾರದ ಆರಂಭದಲ್ಲಿ, ಮಾಜಿ ಬ್ರಿಟಿಷ್ ಪ್ರಧಾನಿ ಗೋರ್ಡಾನ್ ಬ್ರೌನ್, ಮಾಜಿ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಸೇರಿದಂತೆ ಗಣ್ಯರು ವಿಶೇಷ ನ್ಯಾಯಮಂಡಳಿಯನ್ನು ರಚಿಸಲು ಕರೆ ನೀಡಿದರು.

  ರಷ್ಯಾ ವಿರುದ್ಧ ಕಾನೂನು ಕ್ರಮ

  ಇದಲ್ಲದೆ, ಉಕ್ರೇನ್ ನಲ್ಲಿ ನಡೆದ ಯುದ್ಧ ಅಪರಾಧಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ಯೋಚಿಸುತ್ತಿದೆ ಎಂಬ ವರದಿಗಳ ನಡುವೆ ಉಕ್ರೇನ್ ವಿದೇಶಾಂಗ ಸಚಿವರು ಈ ಕರೆಯನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  ಯುದ್ಧ ನಿಲ್ಲಿಸಲು ಸರ್ವ ಪ್ರಯತ್ನ

  ಉಕ್ರೇನ್ ಮೇಲೆ ದಾಳಿ ನಡೆಸುವ ರಷ್ಯಾದ ನಿರ್ಧಾರವು 1945 ರ ನಂತರದ ಅಂತರರಾಷ್ಟ್ರೀಯ ವ್ಯವಸ್ಥೆಗೆ ಗಂಭೀರ ಸವಾಲನ್ನು ಒಡ್ಡುತ್ತದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

  "ನಾವು ಈಗ ನೋಡುತ್ತಿರುವ ಭಯಾನಕ ಘಟನೆಗಳನ್ನು ಕೊನೆಗಾಣಿಸಲು ನಾವು ಯಾವುದೇ ಪ್ರಯತ್ನವನ್ನು ಹಾಗೆಯೇ ವ್ಯರ್ಥವಾಗಿ ಹೋಗಲು ಬಿಡುವುದಿಲ್ಲ. ಆ ಮೂಲಕ ಅಂತಹ ಭೀಕರತೆಯನ್ನು ಬಿಚ್ಚಿಟ್ಟವರು ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ವೈಯಕ್ತಿಕ ಉತ್ತರದಾಯಿತ್ವಕ್ಕೆ ಒಳಗಾಗುತ್ತಾರೆ, ಇದರಿಂದ ನ್ಯಾಯವನ್ನು ಸಾಧಿಸಬಹುದು" ಎಂದು ಅದು ಹೇಳಿದೆ.

  ಇದನ್ನೂ ಓದಿ: Operation Ganga: ತನ್ನ ಮಗಳಿಗೆ 'ಆಪರೇಷನ್ ಗಂಗಾ' ಅಂತ ನಾಮಕರಣ ಮಾಡಲಿರುವ ತಂದೆ! ಈ ಹೆಸರಿನ ಹಿಂದಿದೆ ಆ ಒಂದು ಕಾರಣ

  ಭಾರತೀಯ ಸರ್ಕಾರವು ಸಹ ಆಪರೇಷನ್ ಗಂಗಾ ಅಂತ ಹೆಸರಿಟ್ಟು ಅಲ್ಲಿ ಸಿಲುಕಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ದೇಶಕ್ಕೆ ಸುರಕ್ಷಿತವಾಗಿ ಕರೆತರಲು ಪ್ರಯತ್ನಿಸಿದ್ದು ಮತ್ತು ಬಹುತೇಕರು ತಮ್ಮ ದೇಶಕ್ಕೆ ಸುರಕ್ಷಿತವಾಗಿ ಬಂದಿದ್ದನ್ನು ಸಹ ನಾವು ನೋಡಬಹುದು.
  Published by:Annappa Achari
  First published: