ಸ್ವಾತಂತ್ರ್ಯ ದಿನಾಚರಣೆಯ ಜಾಹಿರಾತಿನಲ್ಲಿ ಮಿಂಚಿದ ಉನ್ನಾವೋ ಅತ್ಯಾಚಾರ, ಕೊಲೆ ಆರೋಪಿ ಕುಲ್ದೀಪ್ ಸಿಂಗ್!

ನಾಲ್ಕು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿರುವ ಕುಲ್ದೀಪ್ ಸಿಂಗ್ ಸೆಂಗಾರ್ ಅವರ ವಿರುದ್ದದ ಈ ಅತ್ಯಾಚಾರ, ಕೊಲೆ ಮತ್ತು ಯೋಜಿತ ಅಪಘಾತ ಪ್ರಕರಣದ ಉರುಳು ದಿನದಿಂದ ದಿನಕ್ಕೆ ಬಲ ಪಡೆಯುತ್ತಿದೆ. ಈ ಪ್ರಕರಣದಿಂದ ಈತ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದು ಹೇಳಲಾಗುತ್ತಿದೆ.

news18
Updated:August 16, 2019, 6:14 PM IST
ಸ್ವಾತಂತ್ರ್ಯ ದಿನಾಚರಣೆಯ ಜಾಹಿರಾತಿನಲ್ಲಿ ಮಿಂಚಿದ ಉನ್ನಾವೋ ಅತ್ಯಾಚಾರ, ಕೊಲೆ ಆರೋಪಿ ಕುಲ್ದೀಪ್ ಸಿಂಗ್!
ಸ್ವಾತಂತ್ರ್ಯ ದಿನಾಚರಣೆಯ ಪತ್ರಿಕಾ ಜಾಹಿರಾತಿನಲ್ಲಿ ಅತ್ಯಾಚಾರ, ಕೊಲೆ ಆರೋಪಿ ಕುಲ್ದೀಪ್​ ಸಿಂಗ್​ ಸೆಂಗಾರ್​
  • News18
  • Last Updated: August 16, 2019, 6:14 PM IST
  • Share this:
ಲಕ್ನೋ (ಆಗಸ್ಟ್.16); ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಕ್ಕೆ ಗುರಿಯಾಗಿರುವ ಉತ್ತರಪ್ರದೇಶದ ಬಂಗರ್ ಮೌ ಕ್ಷೇತ್ರದ ಉಚ್ಚಾಟಿತ ಬಿಜೆಪಿ ಶಾಸಕ ಕುಲ್ದೀಪ್​ ಸಿಂಗ್ ಸ್ವಾತಂತ್ರ್ಯ ದಿನಾಚರಣೆಯ ಪತ್ರಿಕಾ ಜಾಹಿರಾತುಗಳಲ್ಲಿ ಬಿಜೆಪಿಯ ಇತರೆ ನಾಯಕರ ಜತೆ ಇಡೀ ಪುಟದಲ್ಲಿ ಸ್ಥಾನ ಹಂಚಿಕೊಂಡು ಮಿಂಚಿದ್ದಾರೆ.

ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಕಳೆದ ಎರಡು ವರ್ಷಗಳ ಹಿಂದೆ ಅದೇ ಕ್ಷೇತ್ರದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದರು. ಈ ಕುರಿತು ಸಂತ್ರಸ್ಥೆ ದೂರು ದಾಖಲಿಸಿದ ಕಾರಣ ಆಕೆಯ ತಂದೆಯನ್ನು ಕೊಲೆ ಮಾಡಲಾಗಿತ್ತು ಎಂಬ ದೂರೂ ದಾಖಲಾಗಿತ್ತು. ಹೀಗಾಗಿ ಕುಲ್ದೀಪ್ ಸಿಂಗ್ ಕೊರಳಿಗೆ ಅತ್ಯಾಚಾರ ಆರೋಪದ ಜೊತೆಗೆ ಕೊಲೆ ಆರೋಪವೂ ಸುತ್ತಿಕೊಂಡಿತ್ತು.

ಈ ನಡುವೆ ಕಳೆದ ತಿಂಗಳು ಅತ್ಯಾಚಾರ ಸಂತ್ರಸ್ತೆ ಆಕೆಯ ತಾಯಿ, ಚಿಕ್ಕಮ್ಮ, ಹಾಗೂ ವಕೀಲನ ಜೊತೆ ಕಾರಿನಲ್ಲಿ ಚಲಿಸುತ್ತಿದ್ದಾಗ ಆ ಕಾರು ಆಪಘಾತಕ್ಕೆ ಈಡಾಗಿತ್ತು. ಪರಿಣಾಮ ಈ ಪ್ರಕರಣ ಪ್ರಮುಖ ಸಾಕ್ಷಿಯಾಗಿದ್ದ ಆಕೆಯ ಚಿಕ್ಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರ ಗಾಯಕ್ಕೆ ಒಳಗಾಗಿರುವ ಸಂತ್ರಸ್ತೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಇದನ್ನೂ ಓದಿ : ಭಾರತ ದೇಶ ಮಹಿಳೆಯರಿಗೆ ಹೆಚ್ಚು ಅಪಾಯಕಾರಿ ; ಸಮೀಕ್ಷೆಯಲ್ಲಿ ಬಹಿರಂಗ

ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಶಾಸಕ ಕುಲ್ದೀಪ್ ಸಿಂಗ್​ಗೆ ಛೀಮಾರಿ ಹಾಕಿತ್ತು. ಅಲ್ಲದೆ, ಈ ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಂತ್ರಸ್ತೆಗೆ 25 ಲಕ್ಷ ಪರಿಹಾರ ನೀಡಬೇಕು ಹಾಗೂ ಈ ಪ್ರಕರಣದ ತನಿಖೆಯನ್ನು ಪ್ರತಿದಿನ ನಡೆಸಬೇಕು ಎಂದು ಹೈಕೋರ್ಟ್​ಗೆ ನಿರ್ದೇಶನ ನೀಡಿತ್ತು. ಪರಿಣಾಮ ಈತನನ್ನು ಬಿಜೆಪಿ ಪಕ್ಷದ ಸದಸ್ಯ ಸ್ಥಾನದಿಂದಲೇ ಉಚ್ಚಾಟಿಸಲಾಗಿತ್ತು. ಆದರೆ, ಇಂತಹ ಹಿನ್ನೆಲೆ ಇರುವ ಆರೋಪಿ ಮತ್ತೆ ಪ್ರಧಾನಿ ಮೋದಿ ಜೊತೆಗೆ ಜಾಹಿರಾತು ಪುಟಗಳಲ್ಲಿ ರಾರಾಜಿಸುತ್ತಿದ್ದಾನೆ.

ಸ್ಥಳೀಯ ಉಗ್ಗು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅನುಜ್ ದೀಕ್ಷಿತ್ ಎಂಬವರು ಈ ಜಾಹಿರಾತು ನೀಡಿದ್ದು ಜನರಿಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನದ ಶುಭಾಶಯಗಳನ್ನು ಕೋರಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ಅವರು, “ಕುಲ್ದೀಪ್ ಸಿಂಗ್ ಸೆಂಗಾರ್ ಇಲ್ಲಿನ ಸ್ಥಳೀಯ ಶಾಸಕ. ಹೀಗಾಗಿ ಅವರ ಪೋಟೋವನ್ನು ಜಾಹಿರಾತಿನಲ್ಲಿ ಹಾಕಲಾಗಿದೆ,” ಎಂದು ತಿಳಿಸಿದ್ದಾರೆ.ಅಲ್ಲದೆ ಈ ಕುರಿತು ನ್ಯೂಸ್ 18 ಜೊತೆಗೆ ಮಾತನಾಡಿರುವ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, “ಅತ್ಯಾಚಾರ ಹಾಗೂ ಕೊಲೆ ಆರೋಪ ಇನ್ನೂ ಸಾಬೀತಾಗಿಲ್ಲ. ಹೀಗಾಗಿ ಬಜೆಪಿ ಹಿರಿಯ ನಾಯಕರ ಜೊತೆಗೆ ಜಾಹಿರಾತಿನಲ್ಲಿ ಸ್ಥಾನ ಪಡೆಯುವುದರಲ್ಲಿ ತಪ್ಪಿಲ್ಲ. ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ವಿರುದ್ಧದ ಹಲವಾರು ಪ್ರಕರಣಗಳು ಸಾಬೀತಾಗಿವೆ. ಆದರೆ, ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಈಗಲೂ ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡುತ್ತಾರೆ. ಆದರೆ, ನೀವ್ಯಾಕೆ ಈ ಕುರಿತು ಪ್ರಶ್ನೆ ಮಾಡಲ್ಲ,” ಎಂದು ಮರುಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ : ಉನ್ನಾವೋ ಪ್ರಕರಣ ಸಿಬಿಐಗೆ ಹಸ್ತಾಂತರ; ಬಿಜೆಪಿ ಶಾಸಕನ ಮೇಲೆ ಎಫ್​ಐಆರ್ ದಾಖಲು

ನಾಲ್ಕು ಬಾರಿ ಬಿಜೆಪಿ ಶಾಸಕನಾಗಿ ಆಯ್ಕೆಯಾಗಿರುವ ಕುಲ್ದೀಪ್ ಸಿಂಗ್ ಸೆಂಗಾರ್ ಅವರ ವಿರುದ್ದದ ಈ ಅತ್ಯಾಚಾರ, ಕೊಲೆ ಮತ್ತು ಯೋಜಿತ ಅಪಘಾತ ಪ್ರಕರಣದ ಉರುಳು ದಿನದಿಂದ ದಿನಕ್ಕೆ ಬಲ ಪಡೆಯುತ್ತಿದೆ. ಈ ಪ್ರಕರಣದಿಂದ ಈತ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ ಎಂದೂ ಹೇಳಲಾಗುತ್ತಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading