HOME » NEWS » National-international » RAPE ACCUSED WHO SHOT DEAD VICTIMS FATHER IN UPS FIROZABAD ARRESTED LG

ಫಿರೋಜಾಬಾದ್​ನಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಕೊಂದಿದ್ದ ಆರೋಪಿಯ ಬಂಧನ

ಮಂಗಳವಾರ ರಾತ್ರಿ ಫಿರೋಜಾಬಾದ್​ನ ತಿಲಕ್​ನಗರದಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕ್ರೂರಿಯೇ ಈ ಕೊಲೆ ಮಾಡಿದ್ದಾನೆ ಎಂದು ತಾಯಿ ಆರೋಪ ಮಾಡಿದ್ದರು.

news18-kannada
Updated:February 13, 2020, 9:27 AM IST
ಫಿರೋಜಾಬಾದ್​ನಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಕೊಂದಿದ್ದ ಆರೋಪಿಯ ಬಂಧನ
ಸಾಂರ್ಭಿಕ ಚಿತ್ರ
  • Share this:
ಫಿರೋಜಾಬಾದ್​(ಫೆ.13): ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಗುಂಡಿಕ್ಕಿ ಕೊಂದಿದ್ದ ಆರೋಪಿಯನ್ನು ಬುಧವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಫಿಯನ್ನು ಅಚಮನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ. "ರೇಪ್​ ಸಂತ್ರಸ್ತೆಯ ತಂದೆಯನ್ನು ಕೊಲೆ ಮಾಡಿದ್ದ ಆರೋಪಿ ಅಚಮನ್ ಉಪಾಧ್ಯಾಯನನ್ನು ಎನ್​ಕೌಂಟರ್​​ ವೇಳೆ ಬಂಧಿಸಲಾಗಿದೆ," ಎಂದು ಎಸ್​ಪಿ ಪ್ರಬಲ್ ಪ್ರತಾಪ್​ ಸಿಂಗ್ ತಿಳಿಸಿದ್ದಾರೆ. ಆರೋಪಿಯನ್ನು ಹಿಡಿದು ಕೊಟ್ಟವರಿಗೆ 50 ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

ದೆಹಲಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; 10 ಜನರ ಬಂಧನ

ಎನ್​ಕೌಂಟರ್​ ವೇಳೆ, ಆರೋಪಿ ಉಪಾಧ್ಯಾಯನ ಜೊತೆ ಆತನ ಇಬ್ಬರು ಗೆಳೆಯರು ಇದ್ದರು. ಅವರಲ್ಲಿ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಒಬ್ಬನನ್ನು ಬಂಧಿಸಲಾಗಿದೆ. ಈ ವೇಳೆ ಓರ್ವ ಪೊಲೀಸ್​ ಕಾನ್ಸ್​ಟೇಬಲ್​ಗೆ ಗುಂಡೇಟು ತಾಕಿದೆ ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಫಿರೋಜಾಬಾದ್​ನ ತಿಲಕ್​ನಗರದಲ್ಲಿ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕ್ರೂರಿಯೇ ಈ ಕೊಲೆ ಮಾಡಿದ್ದಾನೆ ಎಂದು ತಾಯಿ ಆರೋಪ ಮಾಡಿದ್ದರು.

ಈ ಘಟನೆ ಸಂಬಂಧ ಅಜಾಗರೂಕತೆ ತೋರಿದ್ದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿತ್ತು. 6 ತಿಂಗಳ ಹಿಂದೆ ಆರೋಪಿ ಉಪಾಧ್ಯಾಯ ಮೃತ ವ್ಯಕ್ತಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Karnataka Bandh: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್​ಗೆ ಕರೆ; ಯಾವೆಲ್ಲ ಸೇವೆಗಳು ಅಬಾಧಿತ?
First published: February 13, 2020, 9:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories