ಬೆಲೀಜ್ ಪಾಸ್​ಪೋರ್ಟ್ ಪಡೆದು ಕೆರೆಬಿಯನ್​ನಲ್ಲಿ ಅಡಗಿ ಕುಳಿತಿದ್ದಾರೆಯೇ ಅತ್ಯಾಚಾರ ಆರೋಪಿ ದೇವಮಾನವ ನಿತ್ಯಾನಂದ

ಈಕ್ವೆಡಾರ್​ ಕರಾವಳಿಯಲ್ಲಿ ಜಗತ್ತಿನ ಮೊದಲ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದಾಗಿ ಮತ್ತು ಆ ಹಿಂದೂ ರಾಷ್ಟ್ರಕ್ಕೆ ಕೈಲಾಸ ಎಂದು ಹೆಸರಿಡುವುದಾಗಿ ನಿತ್ಯಾನಂದ ಎರಡು ತಿಂಗಳ ಹಿಂದೆ ಹೇಳಿಕೊಂಡಿದ್ದ. 

HR Ramesh
Updated:January 22, 2020, 5:38 PM IST
ಬೆಲೀಜ್ ಪಾಸ್​ಪೋರ್ಟ್ ಪಡೆದು ಕೆರೆಬಿಯನ್​ನಲ್ಲಿ ಅಡಗಿ ಕುಳಿತಿದ್ದಾರೆಯೇ ಅತ್ಯಾಚಾರ ಆರೋಪಿ ದೇವಮಾನವ ನಿತ್ಯಾನಂದ
ಸ್ವಯಂಘೋಷಿತ ದೇವಮಾನವ ನಿತ್ಯಾನಂದ.
  • Share this:
ಬೆಂಗಳೂರು: ವಿವಾದಾತ್ಮಕ ಸ್ವಯಂಘೋಷಿತ ದೇವಮಾನ ನಿತ್ಯಾನಂದ ಬೆಲೀಜ್​ ಪಾಸ್​ಪೋರ್ಟ್ ಪಡೆಯುವ ಮೂಲಕ ಕೆರಿಬಿಯನ್​ನಲ್ಲಿ ಅವಿತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ತನ್ನ ಉಳಿವಿಗಾಗಿ ಪಾಸ್​ಪೋರ್ಟ್​ ಇಲ್ಲದೇ ಭಾರತ ತೊರೆದಿದ್ದರು. ದೇಶದಿಂದ ಪಲಾಯನಗೈದಿರುವ ನಿತ್ಯಾನಂದನ ಇರುವಿಕೆಯ ಸ್ಥಳ ಪತ್ತೆಗಾಗಿ ಇಂಟರ್​ಪೊಲ್ ಬ್ಲೂ ಕಾರ್ನರ್​ ನೋಟಿಸ್ ಜಾರಿ ಮಾಡಿದೆ ಎಂದು ಬುಧವಾರ ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಅತ್ಯಾಚಾರ ಮತ್ತು ಅಪಹರಣ ಸಂಬಂಧ ಹಲವು ಪ್ರಕರಣಗಳಲ್ಲಿ ನಿತ್ಯಾನಂದ ಪ್ರಮುಖ ಆರೋಪಿಯಾಗಿದ್ದಾರೆ.

ನಿತ್ಯಾನಂದ ಭಾರತದಿಂದ ನಾಟಕೀಯವಾಗಿ ಪಲಾಯನಗೈದ ಬಳಿಕ ಈಕ್ವೆಡಾರ್​ನಲ್ಲಿ ಆಶ್ರಯ ಪಡೆಯಲು ಯತ್ನಿಸಿ, ವಿಫಲರಾಗಿದ್ದರು. ಬಳಿಕ ಕ್ಯೂಬಾ ಮತ್ತು ಮೆಕ್ಸಿಕೊಗೆ ಹತ್ತಿರವಿರುವ ಪುಟ್ಟ ಕೆರಿಬಿಯನ್​ ದೇಶದ ಪಾಸ್​ಪೋರ್ಟ್​ ಪಡೆಯುವಲ್ಲಿ ನಿತ್ಯಾನಂದ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ವಿವಾದಿತ ಸ್ವಯಂಘೋಷಿತ ದೇವಮಾನವ ಕೆಲವು ತಿಂಗಳುಗಳ ಹಿಂದೆ ಪಾಸ್​ಪೋರ್ಟ್​ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಅದೇ ಪಾಸ್​ಪೋರ್ಟ್​ನಲ್ಲಿ ಎಲ್ಲಿಯೂ ಪ್ರಯಾಣ ಬೆಳೆಸಿಲ್ಲ. ನಿತ್ಯಾನಂದ ಒಂದಕ್ಕಿಂತ ಹೆಚ್ಚು ರಾಷ್ಟ್ರಗಳ ಪಾಸ್​ಪೋರ್ಟ್​ ಹೊಂದಿದ್ದಾರೆಯೇ ಇಲ್ಲವೇ ಎಂಬುದನ್ನು ಪೊಲೀಸರು ಈವರೆಗೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. 

"ಬಿಲೀಜ್​ನಲ್ಲಿ ನಿತ್ಯಾನಂದ ಅಡಗಿಕೊಂಡಿದ್ದಾನೆ ಎಂಬುದಕ್ಕೆ ನಮ್ಮ ಬಳಿ ಯಾವುದೇ ಸಾಕ್ಷ್ಯಗಳಿಲ್ಲ. ಏಕೆಂದರೆ ಆತ ಹೊಸ ಪಾಸ್​ಪೋರ್ಟ್​ ಬಳಸಿಕೊಂಡು ಎಲ್ಲಿಯೂ ಪ್ರಯಾಣಿಸಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಆತ ತಾನು ಇರುವ ಜಾಗದಲ್ಲಿಯೇ ಅಡಗಿಕೊಂಡಿರುವ ಸಾಧ್ಯತೆ ಇದೆ. ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್​ ಜಾರಿಯಾಗಿದ್ದು, ಜಗತ್ತಿನಾದ್ಯಂತ ಆತನ ಪ್ರತಿ ಚಲನವಲನ ಗಮನಿಸಲಾಗುತ್ತದೆ," ಎಂದು ಮೂಲಗಳು ಹೇಳಿವೆ. ಸಿಬಿಐ ಮೂಲಗಳು ಸಹ ಇದನ್ನು ಸ್ಪಷ್ಟಪಡಿಸಿವೆ.

2018ರ ಸೆಪ್ಟೆಂಬರ್​ನಲ್ಲಿ ನಿತ್ಯಾನಂದನ ಭಾರತ ಪಾಸ್​ಪೋರ್ಟ್​ ಅವಧಿ ಮುಗಿದಿತ್ತು. ಅದರ ನವೀಕರಣವನ್ನು ಕರ್ನಾಟಕ ಪೊಲೀಸರು ತಿರಸ್ಕರಿಸಿದ್ದರು. ಸುಮಾರು ಒಂದು ವರ್ಷದ ಹಿಂದೆಯೇ ನಿತ್ಯಾನಂದ ಭಾರತದಿಂದ ಪಲಾಯನಗೈದಿದ್ದಾನೆ ಎನ್ನಲಾಗಿದೆ.

ಈಕ್ವೆಡಾರ್​ ಕರಾವಳಿಯಲ್ಲಿ ಜಗತ್ತಿನ ಮೊದಲ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದಾಗಿ ಮತ್ತು ಆ ಹಿಂದೂ ರಾಷ್ಟ್ರಕ್ಕೆ ಕೈಲಾಸ ಎಂದು ಹೆಸರಿಡುವುದಾಗಿ ನಿತ್ಯಾನಂದ ಎರಡು ತಿಂಗಳ ಹಿಂದೆ ಹೇಳಿಕೊಂಡಿದ್ದ.ಇದನ್ನು ಓದಿ: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದ ಇಂಟರ್​ಪೊಲ್

ಈಕ್ವೆಡಾರ್​ನಲ್ಲಿ ದ್ವೀಪವೊಂದನ್ನು ಖರೀದಿಸಿರುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದರು. ಆದರೆ, ನಿತ್ಯಾನಂದನ ಹೇಳಿಕೆಯನ್ನು ಅಲ್ಲಗೆಳೆದ ಈಕ್ವೆಡಾರ್ ಸರ್ಕಾರ, ಈ ದೇಶದಲ್ಲಿ ನೆಲೆಯೂರಲು ಆತ ಕೇಳಿದ್ದ ಅನುಮತಿಯನ್ನು ತಿರಸ್ಕರಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿತ್ತು. ನೆರೆಯ ಹೈಟಿ ದೇಶಕ್ಕೆ ನಿತ್ಯಾನಂದ ಪಲಾಯನಗೈದಿರಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಿತ್ತು. ಇತ್ತೀಚಿನ ಈ ಎಲ್ಲ ಬೆಳವಣಿಗೆಗಳ ಕುರಿತು ಅತ್ಯಾಚಾರ ಆರೋಪಿ ಸ್ವಯಂಘೋಷಿತ ದೇವಮಾನವ ಏನನ್ನೂ ಪ್ರತಿಕ್ರಿಯಿಸಿಲ್ಲ.

  • ಡಿ.ಪಿ. ಸತೀಶ್


First published: January 22, 2020, 5:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading