Sri Lanka: ಶ್ರೀಲಂಕಾದ 9ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಈ ಹಿಂದೆ ಆರು ಬಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ರನಿಲ್ ವಿಕ್ರಮ ಸಿಂಘೆ ಆಯ್ಕೆಯಾಗಿದ್ದಾರೆ. ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾನಿಲ್ ವಿಕ್ರಮಸಿಂಘೆ

ರಾನಿಲ್ ವಿಕ್ರಮಸಿಂಘೆ

  • Share this:
ದ್ವೀಪರಾಷ್ಟ್ರ(Island)  ಶ್ರೀಲಂಕಾದಲ್ಲಿ (Sri Lanka) ಆರ್ಥಿಕ ಬಿಕ್ಕಟ್ಟು (Crisis) ದಿನೇ ದಿನೇ ಹೆಚ್ಚುತ್ತಲೇ ಇದೆ. ಜನರ ತೀವ್ರ ಪ್ರತಿಭಟನೆಯನ್ನು ಎದುರಿಸಲಾಗದೆ ದೇಶದ ಆರ್ಥಿಕ (Economic) ಪ್ರರಿಸ್ಥಿತಿಯನ್ನು ಸರಿದೂಗಿಸಲು ಸಾಧ್ಯವಾಗದೆ ಅಧ್ಯಕ್ಷ (President) ಗೋಟಬಯ ರಾಜಪಕ್ಷ (Gotabaya Rajapaksa) ಅಧಿಕಾರಕ್ಕೆ ರಾಜಿನಾಮೆ (Resign) ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಶ್ರೀಲಂಕಾದ ಜನತೆ ಪ್ರತಿನಿತ್ಯವು ದೇಶದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇದೀಗ ಇಲ್ಲಿನ ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ಪ್ರತಿಭಟನೆಗಳ ನಡುವೆಯೂ ನೂತನ ಅಧ್ಯಕ್ಷರ ಆಯ್ಕೆಯಾಗಿದೆ. ಜುಲೈ 21, ಗುರುವಾರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ (New President) ರನಿಲ್ ವಿಕ್ರಮಸಿಂಘೆ (Ranil Wickremesinghe) ಪ್ರಮಾಣ ವಚನ (Oath Taking) ಸ್ವೀಕರಿಸಿದರು.

134 ಮತಗಳನ್ನು ಗಳಿಸಿದ ರಾನಿಲ್

ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಗಾಗಿ ಜುಲೈ 20 ಬುಧವಾರದಂದು ಚುನಾವಣೆ ನಡೆದಿದೆ. ಶ್ರೀಲಂಕಾದ ಪ್ರಧಾನಿಯಾಗಿ ಆರು ಬಾರಿ ಸೇವೆ ಸಲ್ಲಿಸಿರುವ ವಿಕ್ರಮಸಿಂಘೆ ಅವರು 225 ಸದಸ್ಯರ ಸಂಸತ್ತಿನಲ್ಲಿ ಬುಧವಾರ 134 ಮತಗಳನ್ನು ಗಳಿಸಿ ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಇದನ್ನೂ ಓದಿ: Sri Lanka: ಕಿಂಗ್ ಮೇಕರ್ ಆಗ್ತಾರಾ ಸಜಿತ್? ರನಿಲ್, ರಾಜಪಕ್ಸೆಗೆ ಆಗುತ್ತಾ ಮುಖಭಂಗ?

ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸುವುದಾಗಿ ಭರವಸೆ

73 ವರ್ಷದ ವಿಕ್ರಮಸಿಂಘೆ ಸಂಸತ್ತಿನ ಸಂಕೀರ್ಣದಲ್ಲಿ ಗುರುವಾರ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ರಾನಿಲ್ ವಿಕ್ರಮ ಸಿಂಘೆ ಶ್ರೀಲಂಕಾವನ್ನು ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ಎಲ್ಲಾ ಪಕ್ಷಗಳೊಂದಿಗೆ ಕೆಲಸ ಮಾಡುವುದಾಗಿ  ಪ್ರತಿಪಕ್ಷಗಳಿಗೆ ಭರವಸೆ ನೀಡಿದರು.





ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದ ಶ್ರೀಲಂಕಾ ಜನತೆ
ಈ ಹಿಂದೆ, ರಾನಿಲ್ ಅವರ ಖಾಸಗಿ ನಿವಾಸಕ್ಕೆ ಶ್ರೀಲಂಕಾದ ಜನತೆ ಬೆಂಕಿ ಹಚ್ಚಿದ್ದರು ಮತ್ತು ಅವರು ಪ್ರಧಾನಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು ಅಲ್ಲದೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದರು. ಈ ತೀವ್ರ ವಿರೋಧದ ನಡುವೆಯೂ ಸಿಂಘೇ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜನರನ್ನು ಇನ್ನಷ್ಟು ಕೆರಳಿಸಿದೆ.

ಸಂಸತ್ತಿನ ಸದಸ್ಯರಿಂದ ಆಯ್ಕೆಯಾದ ರಾನಿಲ್

ಶ್ರೀಲಂಕಾದಲ್ಲಿ ಅಧ್ಯಕ್ಷರನ್ನು ಜನರು ಮತದಾನ ಮಾಡಿ ಆಯ್ಕೆ ಮಾಡುತ್ತಾರೆ. ಆದರೆ ಈ ಬಾರಿ ಗೋಟಾಬಯ ರಾಜಪಕ್ಷ ರಾಜಿನಾಮೆ ನೀಡಿ ಪಲಾಯನ ಮಾಡಿದ ನಂತರ  ರಾನಿಲ್ ಅವರನ್ನು ದೇಶದ ನೂತನ ಅಧ್ಯಕ್ಷರನ್ನಾಗಿ ಸಂಸತ್ತಿನ ಉನ್ನತ ಸದಸ್ಯರು ಆಯ್ಕೆ ಮಾಡಿದ್ದಾರೆ. ಈ ಕಾರಣದಿಂದಾಗಿ ಶ್ರೀಲಂಕಾದವರು ಹೊಸದಾಗಿ ಆಯ್ಕೆಯಾದ ಅಧ್ಯಕ್ಷರ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ವರದಿಯ ಪ್ರಕಾರ ಅಧ್ಯಕ್ಷ ವಿಕ್ರಮಸಿಂಘೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲು 20-25 ಸದಸ್ಯರ ಸಚಿವ ಸಂಪುಟವನ್ನು ಮುಂದಿನ ಕೆಲವೇ ದಿನಗಳಲ್ಲಿ ನೇಮಿಸಲಾಗುತ್ತದೆ.

ಪೋಲಿಸರಿಗೆ ಕೃತಜ್ಞತೆ ಹೇಳಿದ ಸಿಂಘೆ

ಕಳೆದ ಕೆಲವು ದಿನಗಳಲ್ಲಿ ಸಂಸತ್ತಿನ ಭದ್ರತಾ ವ್ಯವಹಾರಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಮೂರು ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಕೃತಜ್ಞತೆ ಸಲ್ಲಿಸಿದರು.

ಇದನ್ನೂ ಓದಿ: Sri Lanka: ಶ್ರೀಲಂಕಾದ ಬಲಿಷ್ಠ ರಾಜಪಕ್ಸೆ ಕುಟುಂಬದ ಅಧಿಕಾರ ಪತನದ ಹಿಂದಿದ್ದಾರೆ ನಾಲ್ವರು! ಯಾರವರು ಅಂತ ನೋಡಿ

ಭಾರತೀಯ ಹೈಕಮಿಷನ್ ಹೇಳಿಕೆ

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ಆಯ್ಕೆಯಾದ ಕೆಲವೇ ಗಂಟೆಗಳ ನಂತರ ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿಕೆ ನೀಡಿದೆ.

ಈ ಹೇಳಿಕೆಯಲ್ಲಿ ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗಾಗಿ ಶ್ರೀಲಂಕಾದ ಜನರ ಅನ್ವೇಷಣೆಗೆ ಭಾರತವು ಬೆಂಬಲವನ್ನು ಮುಂದುವರಿಸುತ್ತದೆ ಎಂದಿದೆ.
Published by:Nalini Suvarna
First published: