Ranil Wickremesinghe: ಶ್ರೀಲಂಕಾದ ಹೊಸ ಪ್ರಧಾನಿಯಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆ

ಶ್ರೀಲಂಕಾದ ಹಾಲಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿರುವ ರನಿಲ್ ವಿಕ್ರಮಸಿಂಘೆ ಅವರಿಗೆ ಹೊಸ ಜವಾಬ್ದಾರಿಯೂ ಸಿಕ್ಕಿದೆ.

ರನಿಲ್ ವಿಕ್ರಮ ಸಿಂಘೆ

ರನಿಲ್ ವಿಕ್ರಮ ಸಿಂಘೆ

  • Share this:
    ರನಿಲ್ ವಿಕ್ರಮಸಿಂಘೆ ಶ್ರೀಲಂಕಾದ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಆರ್ಥಿಕ ದುಸ್ಥಿತಿಯಲ್ಲಿರುವ ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿರುವ ರನಿಲ್ ವಿಕ್ರಮಸಿಂಘೆ ಅವರು (Ranil Wickremesinghe) ಇದೀಗ  ಶ್ರೀಲಂಕಾದ ಹೊಸ ಪ್ರಧಾನಿಯಾಗಿಯೂ (Sri Lanka PM) ಆಯ್ಕೆ ಆಗಿದ್ದಾರೆ.   ಶ್ರೀಲಂಕಾದ 9ನೇ ಅಧ್ಯಕ್ಷರಾಗಲು ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಸಂಸದರಾದ ಡಲ್ಲಾಸ್ ಅಲಹಪ್ಪೆರುಮಾ (Dallas Alahapperuma) ಮತ್ತು ಅನುರ ಕುಮಾರ ಡಿಸಾನಾಯಕೆ ನಿನ್ನೆ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಿದ್ದರು. ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ನಾಮಪತ್ರ ಹಿಂಪಡೆದಿದ್ದರು. ಇದೀಗ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬಂದಿದ್ದು ಸಿಂಹಳದ ಸಿಂಹಾಸನ ರನಿಲ್ ವಿಕ್ರಮಸಿಂಘೆ ಅವರಿಗೆ ದಕ್ಕಿದೆ. 

    ರನಿಲ್ ವಿಕ್ರಮಸಿಂಘೆ ವಿರುದ್ಧ ಶ್ರೀಲಂಕಾದ ಜನರಿಗೆ ವಿಪರೀತ ಆಕ್ರೋಶ ವ್ಯಕ್ತವಾಗಿತ್ತು. ಇದಿಗ ಪ್ರಧಾನಿಯಾಗಿಯೂ ಅವರು ಆಯ್ಕೆಯಾಗಿದ್ದು  ಶ್ರೀಲಂಕಾದಲ್ಲಿ ಮುಂದೇನಾಗಲಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.
    Published by:guruganesh bhat
    First published: