Ranil Wickramasinghe: "ಬೆಕ್ಕಿನಂತೆ 9 ಜೀವ" ಹೊಂದಿರುವ ಶ್ರೀಲಂಕಾದ ರನಿಲ್ ವಿಕ್ರಮಸಿಂಘೆ ಮುಂದಿನ ದಾರಿಯೇನು?

ರನಿಲ್ ವಿಕ್ರಮಸಿಂಘೆ ಶ್ರೀಲಂಕಾದಲ್ಲಿ ತಮ್ಮದೆ ಆದ ವರ್ಚಸ್ಸು ಹಾಗೂ ಛಾಪು ಮೂಡಿಸಿದ್ದಾರೆ. ಪ್ರತಿ ಬಾರಿ ಇನ್ನು ವಿಕ್ರಮಸಿಂಘೆ ಆಟ ಮುಗಿಯಿತು ಎನ್ನುವಾಗಲೇ ಅವರು ತಮ್ಮ ಶತ್ರುಗಳಿಗೆ ಶಾಕ್ ಕೊಟ್ಟಿರುವ ಅನೇಕ ಉದಾಹರಣೆಗಳಿವೆ. ಹಾಗಾಗಿಯೇ ಅವರನ್ನು ಶ್ರೀಲಂಕನ್ನರು "ಜಗತ್ತಿನ ಎಂಟನೇ ಅದ್ಭುತ" ಎಂದೇ ಕರೆಯುತ್ತಾರೆ.

ರಾನಿಲ್ ವಿಕ್ರಮಸಿಂಘೆ

ರಾನಿಲ್ ವಿಕ್ರಮಸಿಂಘೆ

  • Share this:
ರನಿಲ್ ವಿಕ್ರಮಸಿಂಘೆ (Ranil Wickramasinghe) ಶ್ರೀಲಂಕಾದಲ್ಲಿ (Sri Lanka) ತಮ್ಮದೆ ಆದ ವರ್ಚಸ್ಸು ಹಾಗೂ ಛಾಪು ಮೂಡಿಸಿದ್ದಾರೆ. ಪ್ರತಿ ಬಾರಿ ಇನ್ನು ವಿಕ್ರಮಸಿಂಘೆ ಆಟ ಮುಗಿಯಿತು ಎನ್ನುವಾಗಲೇ ಅವರು ತಮ್ಮ ಶತ್ರುಗಳಿಗೆ ಶಾಕ್ ಕೊಟ್ಟಿರುವ ಅನೇಕ ಉದಾಹರಣೆಗಳಿವೆ. ಹಾಗಾಗಿಯೇ ಅವರನ್ನು ಶ್ರೀಲಂಕನ್ನರು "ಜಗತ್ತಿನ ಎಂಟನೇ ಅದ್ಭುತ" ಎಂದೇ ಕರೆಯುತ್ತಾರೆ. ನಾಣ್ಣುಡಿಯ ಪ್ರಕಾರ, ವಿಕ್ರಮಸಿಂಘೆ ಒಬ್ಬ, ಬೆಕ್ಕಿನಂತೆ (Cat) ಒಂಭತ್ತು ಜೀವವಿರುವ ಮನುಷ್ಯನೆಂದರೇ ಅತಿಶಯೋಕ್ತಿ ಎನಿಸಲಾರದು. ಸದ್ಯ ಶ್ರೀಲಂಕಾದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ರಾಷ್ಟ್ರಪತಿ (President) ಎನಿಸಿಕೊಂಡವರು ತಮ್ಮ ಸ್ಥಾನದಿಂದ ರಾಜೀನಾಮೆ (Resignation) ನೀಡಿದ್ದಾರೆ.

ಪ್ರಸ್ತುತ, ದೇಶದ ಪ್ರಮುಖ ಸ್ಥಾನಮಾನ ಹಿಡಿಯಲು ಯಾವೊಬ್ಬ ದಿಟ್ಟ ರಾಜಕಾರಣಿಯೂ ಮುಂದೆ ಬರುತ್ತಿಲ್ಲ.  ಆದರೆ, ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಹಿಂದಿನಿಂದಲೂ ರಾಷ್ಟ್ರಪತಿ ಸ್ಥಾನಕ್ಕೆ ಸದಾ ಕಣ್ಣಿಟ್ಟಿದ್ದ ರನಿಲ್ ವಿಕ್ರಮಸಿಂಘೆ ಹಿಂದಿನ ಹಲವು ವೈಫಲ್ಯಗಳ ನಂತರ ಅಂತಿಮವಾಗಿ ತಮ್ಮ ಕನಸಿನ ಆ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು, ರನಿಲ್ ಈಗ ಮುಳುಗುತ್ತಿರುವ ಶ್ರೀಲಂಕಾದ ಕಮಾನು ಹಿಡಿಯಲು ಮುಂದಾಗಿದ್ದು ಪ್ರಸ್ತುತ ದೇಶದ ಆಕ್ಟಿಂಗ್ ಪ್ರಸಿಡೆಂಟ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಹಿಂದೆ ಅವರು ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಿಂದೆಯೂ ರಾಷ್ಟ್ರಪತಿಯಾಗಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದರೆ, ಅದರಲ್ಲಿ ಯಶಸ್ವಿಯಾಗದೆ ಐದು ಬಾರು ಪ್ರಧಾನಿಯಾಗಿಯೇ ಆಯ್ಕೆಯಾಗಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು. ಈ ಮೂಲಕ ದೇಶದ ದೊಡ್ಡ ಹಾಗೂ ಹಳೆಯ ರಾಜಕೀಯ ಪಕ್ಷವಾದ ಯುನೈಟೆಡ್ ನ್ಯಾಷನಲ್ ಪಾರ್ಟಿಯ ಮತ್ತು ದೇಶದ ಅತಿ ಹಿರಿಯ ರಾಜಕಾರಣಿಯಾದ ಮಹಿಂದಾ ರಾಜಪಕ್ಷೆ ನಂತರದ ಎರಡನೇ ಹಿರಿಯ ರಾಜಕಾರಣಿಯಾಗಿ ರನಿಲ್ ಈಗ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

ಯಾರು ಈ ರನಿಲ್ ಹಾಗೂ ಮಹಿಂದಾ
ಈ ಇಬ್ಬರೂ ಘಟಾನುಘಟಿಗಳ ಬಗ್ಗೆ ತಿಳಿಯುವುದಾದರೆ, ರನಿಲ್ ಕೊಲಂಬೋದ ಅರ್ಬನ್ ಶೈಲಿಯ ಹಿನ್ನೆಲೆ ಉಳ್ಳವರಾದರೆ ಮಹಿಂದಾ ದಕ್ಷಿಣದ ಗ್ರಾಮೀಣ ಭಾಗದವರು. ಹಾಗೆ ನೋಡಿದರೆ ಇಬ್ಬರಲ್ಲೂ ಅಜಗಜಾಂತರ ವ್ಯತ್ಯಾಸ ಮೇಲ್ನೋಟಕ್ಕೆ ಕಂಡುಬಂದರೂ ಶ್ರೀಲಂಕಾದ ಜನರ ಪ್ರಕಾರ, ಇಬ್ಬರೂ ರಹಸ್ಯವಾಗಿ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Sri Lanka: ಗೋತಬಯ ರಾಜೀನಾಮೆ ಅಂಗೀಕಾರ, ಮುಂದಿನ ವಾರದೊಳಗೆ ಲಂಕಾಕ್ಕೆ ಹೊಸ ಅಧ್ಯಕ್ಷರ ಆಯ್ಕೆ

ಸ್ಮಂಡ್ ವಿಕ್ರಮಸಿಂಘೆಯ ಮಗನಾಗಿರುವ ರನಿಲ್ ಅವರು ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಅಧ್ಯಕ್ಷ ಎಂದೇ ಬಿಂಬಿತವಾದ ಜುನಿಯಸ್ ಜಯವರ್ದೆನೆ ಅವರ ಸೋದರಳಿಯ ಸಹ ಹೌದು.

ವಿಕ್ರಮಸಿಂಘೆ ಬಗ್ಗೆ ಕೆಲ ವಿಷಯಗಳು
ಶ್ರೀಲಂಕಾದ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಕೊಲಂಬೊದಿಂದ ಬಂದಿರುವ ವಿಕ್ರಮಸಿಂಘೆ ಅವರು ತಮ್ಮ ಮೊದಲ ಪರ್ಲಿಯಾಮೆಂಟರಿ ಚುನಾವಣೆಯನ್ನು 1977 ರಲ್ಲಿ ಗೆದ್ದರು. ತದನಂತರ ಜುನಿಯಸ್ ಜಯವರ್ದೆನೆ ಹಾಗೂ ಅವರ ನಂತರ ಚುಕ್ಕಾಣಿ ಹಿಡಿದ ರಣಸಿಂಘೆ ಪ್ರೇಮದಾಸ ಅವರ ಕ್ಯಾಬಿನೆಟ್ಟಿನಲ್ಲಿ ಬಹುಕಾಲ ಮಂತ್ರಿಯಾಗಿ ಸೇವೆ ಸಲ್ಲಿಸಿದರು. 1993 ರಲ್ಲೆ ಪ್ರೇಮದಾಸ ಅವರ ಹತ್ಯೆಗೈದಾಗ ಅನಿರೀಕ್ಷಿತ ತಿರುವಿನಲ್ಲಿ ರಾನಿಲ್ ದೇಶದ ಪ್ರಧಾನಿಯಾಗಿ ನೇಮಕಗೊಂಡರು. ಆದರೆ, SLFP ನಾಯಕಿಯಾದ ಚಂದ್ರಿಕಾ ಭಂಡಾರನಾಯಕೆ ಕುಮಾರತುಂಗಾ ಅವರ ಎದುರು 1994 ರಲ್ಲಿ ರಾನಿಲ್ ಸೋತರು.

2000ರಲ್ಲಿ ರನಿಲ್ ಅವರ ಯುಎನ್ಪಿ ಪಕ್ಷವು ಸರ್ಕಾರ ರಚಿಸಲು ಸಮರ್ಥವಾಯಿತು ಹಾಗೂ ಈ ಬಾರಿ ರನಿಲ್ ಮತ್ತೆ ಚಂದ್ರಿಕಾ ಅವರಡಿಯಲ್ಲಿ ದೇಶದ ಪ್ರಧಾನಿಯಾದರು. ಆದರೆ, ಇಬ್ಬರ ಮಧ್ಯೆಯೂ ಯಾವುದೂ ಸರಿ ಇರಲಿಲ್ಲ. ಈ ಮಧ್ಯೆ 2003ರಲ್ಲಿ ರಾನಿಲ್ ಅವರು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರೊಂದಿಗೆ ವ್ಹೈಟ್ ಹೌಸಿನಲ್ಲಿ ಮಾತುಕತೆಯಲ್ಲಿ ತೊಡಗಿದ್ದಾಗ ತವರಿನಲ್ಲಿ ಅವರ ಸರ್ಕಾರವನ್ನು ಅಮಾನತ್ತುಗೊಳಿಸಲಾಯಿತು.

2005 ರಲ್ಲಿ ಮಹಿಂದಾ ರಾಜಪಕ್ಷೆ ರಾಷ್ಟ್ರಪತಿಯಾಗಿ ಆಯ್ಕೆ
ತದನಂತರ 2005 ರಲ್ಲಿ ಮಹಿಂದಾ ರಾಜಪಕ್ಷೆ ರಾಷ್ಟ್ರಪತಿಯಾಗಿ ಆಯ್ಕೆಯಾದರು. 2009ರಲ್ಲಿ ಅವರ ಅಂದರೆ ರಾಜಪಕ್ಷೆ ಅವರ ಆಡಳಿತದಲ್ಲಿ ಯಾವಾಗ ಶ್ರೀಲಂಕಾದ ಕಟುವೈರಿ ಎನ್ನಲಾದ ಎಲ್‍ಟಿಟಿಇ ಸಂಸ್ಥೆಯನ್ನು ನಾಶಗೊಳಿಸಲಾಯಿತೋ ಆವಾಗ ರನಿಲ್ ಅವರು ರಾಷ್ಟ್ರಪತಿಯಾಗುವ ಕನಸು ಭಗ್ನ ಎಂದೇ ಬಿಂಬಿತವಾಯಿತು. ಆದರೆ, ಇದು ರಾಜಕೀಯ, ಇಲ್ಲಿ ಯಾವ ದಾಳಗಳು ಯಾರು ಎಲ್ಲಿ, ಹೇಗೆ ಉರುಳಿಸುತ್ತಾರೋ ಗೊತ್ತಿರುವುದಿಲ್ಲ. ಅಂತೆಯೇ 2014 ರಲ್ಲಿ ರನಿಲ್ ರಹಸ್ಯಮಯವಾಗಿ ಚಂದ್ರಿಕಾ ಅವರೊಂದಿಗೆ ಸೇರಿಕೊಂಡು ಮಹಿಂದಾ ಅವರನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ತೊಡಗಿದರು.

ಶ್ರೀಲಂಕಾದ ಪ್ರಧಾನಿಯಾಗಿ  ರಾನಿಲ್ ನೇಮಕ 
ಇಬ್ಬರೂ ಸೇರಿ ತಮ್ಮ ವತಿಯಿಂದ ಮೈತ್ರಿಪಾಲ ಸಿರಿಸೇನ ಎಂಬುವವರನ್ನು ಕಣಕ್ಕಿಳಿಸಿದರು. ಅಚ್ಚರಿ ಎಂಬಂತೆ ಸಿರಿಸೇನಾ ಅವರು ರಾಜಪಕ್ಷೆಯ ಕ್ಯಾಂಪ್ ಚಕಿತಗೊಳ್ಳುವಂತೆ ಮಹಿಂದಾ ಅವರನ್ನೇ ಸೋಲಿಸಿದರು. ರನಿಲ್ ಅವರ ರಾಜಕೀಯ ಜೀವನದ ಅತಿ ಉತ್ತುಂಗದ ಸಮಯ ಇದಾಗಿತ್ತು. ತದನಂತರ ರನಿಲ್ ಅವರು ಮತ್ತೆ ಶ್ರೀಲಂಕಾದ ಪ್ರಧಾನಿಯಾಗಿ ನೇಮಕವಾದರು. ಹೀಗಿರುವಾಗ 2018ರ ಒಂದು ಸಂಜೆ ರನಿಲ್ ಅವರಿಗೆ ದೊಡ್ಡ ಆಘಾತವನ್ನೇ ನೀಡಿತು, ಏಕೆಂದರೆ ಅಂದು ಸಿರಿಸೇನ ಅವರು ರನಿಲ್ ಅವರನ್ನು ಕಿತ್ತೊಗೆದು ಮತ್ತೆ ಮಹಿಂದಾ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದರು.

ಇದನ್ನೂ ಓದಿ:  Kerala Own Internet: ಸ್ವಂತ ಇಂಟರ್​ನೆಟ್ ಹೊಂದಿದ ಕೇರಳ! ದೇಶದ ಮೊದಲ ಮತ್ತು ಏಕೈಕ ರಾಜ್ಯ

ಹೀಗೆ ಎರಡು ತಿಂಗಳು ಗತಿಸುವ ತನಕ, ಹಿನ್ನೆಲೆಯಲ್ಲಿ ನಡೆದ ಮಾತುಕತೆ, ಒಪ್ಪಂದ ಮುಂತಾದವುಗಳಿಂದಾಗಿ ಮಹಿಂದಾ ವಿಶ್ವಾಸ ಮತ ಕಳೆದುಕೊಂಡು ಮತ್ತೆ ರಾನಿಲ್ ಅವರು ಪ್ರಧಾನಿ ಸ್ಥಾನಕ್ಕೆ ಮರಳಿದರು. 2020 ರನಿಲ್ ಅವರಿಗೆ ಅತ್ಯಂತ ಅತೃಪ್ತಿದಾಯಕವಾಯಿತು. ಅವರು ಈ ಹಿಂದೆ ಎಂದೂ ಸೋಲದ ಚುನಾವಣೆಯನ್ನು ಪ್ರಥಮ ಬಾರಿಗೆ ಸೋತರು. ಅವರ ಪಕ್ಷ ಒಂದು ಸ್ಥಾನವನ್ನು ಗಳಿಸಲು ಸಹ ವಿಫಲವಾಯಿತು. ಇದರಿಂದ ಸಾಕಷ್ಟು ಮಾನಸಿಕ ಆಘಾತವನ್ನು ರನಿಲ್ ಅನುಭವಿಸುವಂತಾಯಿತು.

ಆದರೆ, ಈಗ ಕಾಲ ಮತ್ತೆ ಬದಲಾಗಿದ್ದು ರನಿಲ್ ಅವರು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಈಗ ರನಿಲ್ ಅವರು ಮುಳುಗುತ್ತಿರುವ ಶ್ರೀಲಂಕಾದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿ ದಡ ಸೇರಿಸುತ್ತಾರೋ ಅಥವಾ ಅದರೊಡನೆ ಅವರೂ ಸೇರಿ ಹೋಗುತ್ತಾರೋ ಎಂಬುದನ್ನು ಕಾದು ನೋಡ ಬೇಕಷ್ಟೆ.
Published by:Ashwini Prabhu
First published: