Priyanka Gandhi: ಬಲವಂತವಾಗಿ ವರ್ಣಚಿತ್ರ ಮಾರಿದ್ರು, 2 ಕೋಟಿ ಪಡೆದ್ರು! ಪ್ರಿಯಾಂಕಾ ಗಾಂಧಿ ವಿರುದ್ಧ ಗಂಭೀರ ಆರೋಪ

"ಬಲವಂತವಾಗಿ ಪೇಂಟಿಂಗ್‌ಗೆ 2 ಕೋಟಿ ರೂಪಾಯಿಯ ಚೆಕ್‌ ಪಾವತಿಸಿದ್ದೇನೆ" ಎಂದು ರಾಣಾ ಕಪೂರ್‌ ಹೇಳಿದ್ದಾರೆ. "ಆ ಮಾರಾಟದ ಹಣವನ್ನು ಗಾಂಧಿ ಕುಟುಂಬವು ಸೋನಿಯಾ ಗಾಂಧಿಯವರ ನ್ಯೂಯಾರ್ಕ್‌ನ ಮೆಡಿಕಲ್‌ ಚಿಕಿತ್ಸೆಗಾಗಿ ಬಳಸಿದೆ" ಅಂತ ಅವರು ಆರೋಪಿಸಿದ್ದಾರೆ.

ಕಲಾಕೃತಿ ಜೊತೆಗೆ ಪ್ರಿಯಾಂಕಾ ಗಾಂಧಿ ಹಾಗೂ ರಾಣಾ ಕಪೂರ್

ಕಲಾಕೃತಿ ಜೊತೆಗೆ ಪ್ರಿಯಾಂಕಾ ಗಾಂಧಿ ಹಾಗೂ ರಾಣಾ ಕಪೂರ್

 • Share this:
  ಚುನಾವಣೆಗಳಲ್ಲಿ (Election) ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್‌ಗೆ (Congress) ಈಗ ಮತ್ತೊಂದು ಮುಜಿಗರ ಉಂಟಾಗಿದೆ. ಕಾಂಗ್ರೆಸ್ ನಾಯಕಿ (Congress Leader) ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರಿಂದ ಎಂ.ಎಫ್. ಹುಸೇನ್ (M.F. Hussein) ವರ್ಣಚಿತ್ರವನ್ನು (Paintings) ಖರೀದಿಸಲು ಒತ್ತಾಯಿಸಲಾಯಿತು ಮತ್ತು ಮಾರಾಟದ ಹಣವನ್ನು ಕಾಂಗ್ರೆಸ್ ಅಧ್ಯಕ್ಷೆ (Congress President) ಸೋನಿಯಾ ಗಾಂಧಿ (Sonia Gandhi) ಅವರ ವೈದ್ಯಕೀಯ ಚಿಕಿತ್ಸೆಗಾಗಿ (medical treatment) ಗಾಂಧಿ ಕುಟುಂಬ ಬಳಸಿಕೊಂಡಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ)ಬಲವಕ್ಕೆ ಯೆಸ್ ಬ್ಯಾಂಕ್ (Yes Bank) ಸಹ ಸಂಸ್ಥಾಪಕ ರಾಣಾ ಕಪೂರ್ (Rana Kapoor) ಅವರು ತಿಳಿಸಿದ್ದಾರೆಂದು ಹೇಳಲಾಗಿದೆ. ಈ ಸಂಬಂಧ ಫೆಡರಲ್ ಆ್ಯಂಟಿ ಮನಿ ಲಾಂಡರಿಂಗ್ ಏಜೆನ್ಸಿ ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದೆ.

  ಪೇಂಟಿಂಗ್‌ಗೆ 2 ಕೋಟಿ ಕೊಟ್ಟರೆ ರಾಣಾ?

  ಎಂ.ಎಫ್‌. ಹುಸೇನ್‌ ಅವರ ಪೇಂಟಿಂಗ್ ಅನ್ನು ಖರೀದಿಸಲು ನಿರಾಕರಿಸಿದರೆ ಗಾಂಧಿ ಕುಟುಂಬದೊಂದಿಗೆ ಬಾಂಧವ್ಯವನ್ನು ಬೆಳೆಸುವುದು ಮಾತ್ರವಲ್ಲದೆ ಪದ್ಮಭೂಷಣ ಪ್ರಶಸ್ತಿಯನ್ನು ಪಡೆಯುವುದು ಸಹ ಸಾಧ್ಯವಾಗುವುದಿಲ್ಲ ಎಂದು ಅಂದಿನ ಪೆಟ್ರೋಲಿಯಂ ಸಚಿವ ಮುರಳಿ ದೇವೋರಾ ಅವರು ಹೇಳಿದ್ದರು ಎಂದು ರಾಣಾ ಕಪೂರ್‌ ಇಡಿಗೆ ತಿಳಿಸಿದ್ದಾರೆ ಎಂದೂ ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ.

  ಚಾರ್ಜ್‌ ಶೀಟ್‌ನಲ್ಲಿ ಈ ಬಗ್ಗೆ ಉಲ್ಲೇಖ

  ರಾಣಾ ಕಪೂರ್ ಅವರ ಈ ಹೇಳಿಕೆಗಳು ಯೆಸ್ ಬ್ಯಾಂಕ್ ಸಹ-ಸಂಸ್ಥಾಪಕ, ಅವರ ಕುಟುಂಬ, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (DHFL) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಮತ್ತು ಇತರರ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣ ಸಂಬಂಧ ಇತ್ತೀಚೆಗೆ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾದ ಎರಡನೇ ಪೂರಕ ಆರೋಪಪಟ್ಟಿ (ಒಟ್ಟಾರೆ ಮೂರನೇ) ಯ ಭಾಗವಾಗಿದೆ.

  ಇದನ್ನೂ ಓದಿ: Prashant Kishor ಕಾಂಗ್ರೆಸ್‌ಗೆ ಸೇರುವುದಿಲ್ಲ ಎಂದು ಮೊದಲ ದಿನವೇ ಭವಿಷ್ಯ ನುಡಿದಿದ್ದ ರಾಹುಲ್‌ ಗಾಂಧಿ..!

  ಸೋನಿಯಾ ಗಾಂಧಿ ಚಿಕಿತ್ಸೆಗೆ ಪೇಂಟಿಂಗ್ ಹಣ..!

  ಅಲ್ಲದೆ, ತಾನು ಪೇಂಟಿಂಗ್‌ಗೆ 2 ಕೋಟಿ ರೂ. ಯ ಚೆಕ್‌ ಪಾವತಿಸಿದ್ದೇನೆ ಎಂದು ರಾಣಾ ಕಪೂರ್‌ ಹೇಳಿದ್ದಾರೆ. ಹಾಗೂ, ಆ ಮಾರಾಟದ ಹಣವನ್ನು ಗಾಂಧಿ ಕುಟುಂಬವು ಸೋನಿಯಾ ಗಾಂಧಿಯವರ ನ್ಯೂಯಾರ್ಕ್‌ನ ಮೆಡಿಕಲ್‌ ಚಿಕಿತ್ಸೆಗಾಗಿ ಬಳಸಲಾಗಿದೆ ಎಂದು ಮಿಲಿಂದ್‌ ದಿಯೋರಾ ತಿಳಿಸಿದ್ದರು ಎಂದೂ ಅವರು ಹೇಳಿದ್ದಾರೆ.

  ಸೋನಿಯಾ ಗಾಂಧಿ ಚಿಕಿತ್ಸೆಗಾಗಿ ಹಣ

  ಸೋನಿಯಾ ಗಾಂಧಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಸೂಕ್ತ ಸಮಯದಲ್ಲಿ ಗಾಂಧಿ ಕುಟುಂಬವನ್ನು ಬೆಂಬಲಿಸುವ ಮೂಲಕ, ನಾನು ಕುಟುಂಬಕ್ಕೆ ಒಳ್ಳೆಯ ಕಾರ್ಯವನ್ನು ಮಾಡಿದ್ದೇನೆ ಎಂದು ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದ ಅಹ್ಮದ್ ಪಟೇಲ್ ಅವರು ಹೇಳಿದ್ದರು ಎಂದು ಸಹ ರಾಣಾ ಕಪೂರ್ ಇಡಿಗೆ ತಿಳಿಸಿದ್ದಾರೆ. ಹಾಗೂ, 'ಪದ್ಮಭೂಷಣ' ಪ್ರಶಸ್ತಿಗೆ ಸರಿಯಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾಗಿಯೂ ಯೆಸ್‌ ಬ್ಯಾಂಕ್‌ನ ಸಹ ಸಂಸ್ಥಾಪಕ ಹೇಳಿದ್ದಾರೆ.

  ಮುರಳಿ ದಿಯೋರಾ ಬೆದರಿಕೆ?

  ಚಿತ್ರಕಲೆಯನ್ನು ಖರೀದಿಸಲು ನಿರಾಕರಿಸುವುದರಿಂದ ತಮಗೆ ಗಾಂಧಿ ಕುಟುಂಬದೊಂದಿಗೆ ಸಂಬಂಧವನ್ನು ಬೆಳೆಸಲು ಎಂದಿಗೂ ಅನುಮತಿಸುವುದಿಲ್ಲ ಎಂದು ಮುರಳಿ ದಿಯೋರಾ ಹೇಳಿದ್ದರು. ಹಾಗೂ, ಅದರಿಂದ ಪದ್ಮಭೂಷಣ ಪ್ರಶಸ್ತಿ ನೀಡುವುದನ್ನು ತಡೆಯುತ್ತದೆ ಎಂದು ದಿಯೋರಾ ಹೇಳಿದ್ದಾಗಿಯೂ ರಾಣಾ ಕಪೂರ್‌ ತಿಳಿಸಿದ್ದಾರೆಂದು ಆರೋಪಪಟ್ಟಿ ಹೇಳುತ್ತದೆ.

  ಪ್ರತಿಕೂಲ ಪರಿಣಾಮದ ಎಚ್ಚರಿಕೆ

  ಇದಿಷ್ಟೇ ಅಲ್ಲದೆ, ಚಿತ್ರಕಲೆಯನ್ನು ಖರೀದಿಸಲು ವಿಫಲವಾದರೆ ತನ್ನ ಮೇಲೆ ಮತ್ತು ಯೆಸ್ ಬ್ಯಾಂಕ್ ಮೇಲೆ "ಪ್ರತಿಕೂಲ ಪರಿಣಾಮಗಳನ್ನು" ಉಂಟುಮಾಡಬಹುದು ಎಂದು ದಿವಂಗತ ದಿಯೋರಾ ಡಿನ್ನರ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು ಎಂದು ರಾಣಾ ಕಪೂರ್ ಇಡಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 2020 ರಲ್ಲಿ ಬಂಧಿಸಲ್ಪಟ್ಟ ನಂತರ ಬ್ಯಾಂಕರ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

  ಪ್ರಿಯಾಂಕಾ ವಾದ್ರಾ ಕಚೇರಿಯಲ್ಲಿ ಡೀಲ್‌ ಫೈನಲ್

  ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕಚೇರಿಯಲ್ಲಿ ಒಪ್ಪಂದವನ್ನು ಅಂತಿಮ ಗೊಳಿಸಲಾಯಿತು ಎಂದು ರಾಣಾ ಕಪೂರ್ ಇಡಿಗೆ ತಿಳಿಸಿದರು. "ಮಿಲಿಂದ್ ದಿಯೋರಾ ಅವರು ಈ ಅಂತಿಮ ಸಮಾರೋಪ ಸಭೆಯನ್ನು ಸಕ್ರಿಯವಾಗಿ ಸಂಯೋಜಿಸಿದ್ದರು. ಈ ಒಪ್ಪಂದಕ್ಕಾಗಿ, ನಾನು ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿನ ನನ್ನ ವೈಯಕ್ತಿಕ ಖಾತೆಯ ಚೆಕ್ ಮೂಲಕ 2 ಕೋಟಿ ರೂ. ಪಾವತಿ ಮಾಡಿದ್ದೇನೆ ಎಂದು ಹೇಳಲು ಬಯಸುತ್ತೇನೆ" ಎಂದು ರಾಣಾ ಕಪೂರ್‌ ಹೇಳಿದ್ದಾರೆ.

  ಇದನ್ನೂ ಓದಿ: Rahul Gandhi: ತೆರಿಗೆ ಕೇಂದ್ರ ಸರ್ಕಾರಕ್ಕೆ, ಜವಾಬ್ದಾರಿ ರಾಜ್ಯಗಳಿಗೆ! ಇದು 'ಮೋದಿ ಒಕ್ಕೂಟ ವ್ಯವಸ್ಥೆ' ಎಂದ ರಾಹುಲ್ ಗಾಂಧಿ!

  5,050 ಕೋಟಿ ರೂ. ವಂಚನೆ

  ರಾಣಾ ಕಪೂರ್ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (DHFL) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರು ಸಂಶಯಾಸ್ಪದ ವಹಿವಾಟಿನ ಮೂಲಕ 5,050 ಕೋಟಿ ರೂ. ಮೌಲ್ಯದ ಹಣವನ್ನು ವಂಚಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದೆ.
  Published by:Annappa Achari
  First published: