ಉಗ್ರ ಸಂಘಟನೆ ಜೊತೆ ಆರ್​ಎಸ್​ಎಸ್​ ಹೋಲಿಕೆ; ಟ್ವೀಟರ್​ನಲ್ಲಿ ಮತ್ತೊಮ್ಮೆ ರಮ್ಯಾ ಸದ್ದು

news18
Updated:August 30, 2018, 1:51 PM IST
ಉಗ್ರ ಸಂಘಟನೆ ಜೊತೆ ಆರ್​ಎಸ್​ಎಸ್​ ಹೋಲಿಕೆ; ಟ್ವೀಟರ್​ನಲ್ಲಿ ಮತ್ತೊಮ್ಮೆ ರಮ್ಯಾ ಸದ್ದು
news18
Updated: August 30, 2018, 1:51 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಆ.30):  ಬಿಜೆಪಿ ವಿರುದ್ಧ ಸದಾ ಟ್ವೀಟ್​ ಮೂಲಕ  ಆಕ್ರೋಶ ವ್ಯಕ್ತಪಡಿಸುವ ಮಾಜಿ ಸಂಸದೆ ರಮ್ಯಾ ಈ ಬಾರಿ ಆರ್​ಎಸ್​ಎಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಈಜಿಪ್ಟ್​ನ ಉಗ್ರ ಸಂಘಟನೆಯಾದ  ಮುಸ್ಲಿಂ ಬ್ರದರ್​ಹುಡ್ ನೊಂದಿಗೆ ಆರ್​ಎಸ್​ಎಸ್​ ಹೋಲಿಕೆ ಮಾಡಿ, ವಿವಾದಾತ್ಮಕ ಟ್ವೀಟ್​ ಮಾಡುವ ಮೂಲಕ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ಮುಸ್ಲಿಂಬ್ರದರ್​ಹುಡ್​, ಆರೆಸ್ಸೆಸ್​ಎರಡೂ ಸ್ಥಾಪನೆಯಾದ್ದು 1920ರಲ್ಲಿ. ಎರಡೂ ಸಂಘಟನೆಗೂ ಜಾತ್ಯತೀತ ದೇಶ ನಿರ್ಮೂಲನೆ ಗುರಿ ಹೊಂದಿದೆ, ಎರಡೂ ಸಂಘಟನೆಗಳಿಂದಲೂ ಸರ್ಕಾರದ ಮೇಲೆ ನಿಯಂತ್ರಣ ಯತ್ನ ನಡೆಯುತ್ತಿದೆ.  ಅನ್ವರ್​ ಸಾದತ್​ ಹತ್ಯೆ ಬಳಿಕ ಮುಸ್ಲಿಂ ಬ್ರದರ್​​ಹುಡ್ ನಿಷೇಧಿಸಲಾಗಿತ್ತು. ‘ಮಹಾತ್ಮಾ ಗಾಂಧಿ ಹತ್ಯೆ ಬಳಿಕ ಆರೆಸ್ಸೆಸ್​ಗೂ ನಿಷೇಧಿಸಲಾಗಿದೆ’ ಎಂದು ಟ್ವೀಟ್​ ಮಾಡಿದ್ದಾರೆ.ಆರ್​ಎಸ್​ಎಸ್​ ನಾಯಕರು ಹೇಳಿದಂತೆ ಬಿಜೆಪಿ ನಾಯಕರು ಆಡಳಿತ ನಡೆಸುತ್ತಾರೆ. ಬಿಜೆಪಿಯ ಭ್ರಾತೃತ್ವ ಸಂಸ್ಥೆ ಇದಾಗಿದೆ. ದೇಶಾದ್ಯಂತ ಬಿಜೆಪಿ, ಆರ್​ಎಸ್​ಎಸ್​ ದ್ವೇಷ ಭಾವನೆಯನ್ನು ಹರಡುತ್ತಿದೆ ಎಂದು  ರಾಹುಲ್​ ಗಾಂಧಿ ಇತ್ತೀಚೆಗೆ ಬರ್ಲಿನ್​ಗೆ ಭೇಟಿ ನೀಡಿದ್ದ ವೇಳೆ ಟೀಕಿಸಿದ್ದರು.

ರಾಹುಲ್​ ಟೀಕೆ ಬೆನ್ನಲ್ಲೆ ಈಗ ಕಾಂಗ್ರೆಸ್​ ಐಟಿ ಸೆಲ್​ ಸಂಚಾಲಕಿಯಾಗಿರುವ ಮಾಜಿ ಸಂಸದೆ ರಮ್ಯಾ ಆರ್​ಎಸ್​ಎಸ್​ ವಿರುದ್ಧ ಹರಿಹಾಯ್ದಿದ್ದಾರೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626