ಎರಡು ಕೊಲೆ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ರಾಮ್​ಪಾಲ್ ದೋಷಿ; ಹರಿಯಾಣ ಕೋರ್ಟ್​

news18
Updated:October 11, 2018, 3:53 PM IST
ಎರಡು ಕೊಲೆ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ರಾಮ್​ಪಾಲ್ ದೋಷಿ; ಹರಿಯಾಣ ಕೋರ್ಟ್​
news18
Updated: October 11, 2018, 3:53 PM IST
ನ್ಯೂಸ್ 18 ಕನ್ನಡ

ನವದೆಹಲಿ (ಅ.11): ಎರಡು ಕೊಲೆ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ರಾಮ್​ಪಾಲ್ ಸೇರಿ 28 ಮಂದಿ ದೋಷಿಗಳೆಂದು ಹರಿಯಾಣದ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಇದೇ ತಿಂಗಳು 16 ಮತ್ತು 17ರಂದು ಪ್ರಕಟಿಸಲಿದೆ.

2014ರ ಕೊಲೆ ಪ್ರಕರಣಗಳ ಸಂಬಂಧ ನ್ಯಾಯಮೂರ್ತಿ ಡಿ.ಆರ್. ಚಾಲಿಯಾ ಅವರು ರಾಮ್​ಪಾಲ್​ ದೋಷಿ ಎಂದು ತೀರ್ಪು ನೀಡಿದರು. ರಾಮ್​ಪಾಲ್ ಮತ್ತು ಅವರ ಅನುಯಾಯಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಹಿಸ್ಸಾರ್​ನ ಬಾರ್ವಾಲಾ ಪಟ್ಟಣದಲ್ಲಿರುವ ಸ್ಟಲೋಕ್ ಆಶ್ರಮದಲ್ಲಿ ನಾಲ್ವರು ಮಹಿಳೆಯರು ಮತ್ತು 18 ತಿಂಗಳ ಮಗುವಿನ ಮೃತದೇಹವನ್ನು ಅಕ್ರಮವಾಗಿ ಇಟ್ಟಿದ್ದು 2014ರ ನವೆಂಬರ್​ 19ರಂಂದು ಪತ್ತೆಯಾಗಿತ್ತು. ಈ ಪ್ರಕರಣಗಳ ಸಂಬಂಧ ಸ್ವಯಂಘೋಷಿತ ದೇವಮಾನವವನ್ನು ಬಂಧಿಸಲಾಗಿತ್ತು.

ರಾಮಪಾಲ್ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಾಗಿತ್ತು. ಆಶ್ರಮದಲ್ಲಿ ನವೆಂಬರ್ 18ರಂದು ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಈ ಸಂಬಂಧ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸೇರಿದಂತೆ 80 ಸಾಕ್ಷಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು.  ಈ ತೀರ್ಪನ್ನು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡುವುದಾಗಿ ರಾಮಪಾಲ್ ವಕೀಲರು ತಿಳಿಸಿದ್ದಾರೆ.

ತೀರ್ಪಿನ ಹಿನ್ನೆಲೆಯಲ್ಲಿ ಹಿಸ್ಸಾರ್​ ಜಿಲ್ಲೆಯಲ್ಲಿ 4 ಸಾವಿರ ಸಿಬ್ಬಂದಿ, ಐದು ಆರ್​ಎಎಫ್​ ತುಕಡಿ ಮತ್ತು ಪ್ಯಾರಾಮಿಲಿಟರಿ ಸೈನಿಕರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಆದಾಗ್ಯೂ ಸ್ವಯಂಘೋಷಿತ ದೇವಮಾನವನ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರದ ಕಾರಣ ಯಾವುದೇ ಅನಾಹುತ ನಡೆದಿಲ್ಲ.

ಕಳೆದ ವಾರ, ಪೊಲೀಸ್ ಅಧಿಕಾರಿಗಳು, ಇತರೆ ರಾಜ್ಯಗಳಿಂದ ಬಂದು ನಗರದಲ್ಲಿ ಬೀಡುಬಿಟ್ಟಿದ್ದ ರಾಮ್​ಪಾಲ್ ಅನುಯಾಯಿಗಳನ್ನು ಎಲ್ಲರನ್ನು ಹೊರ ಓಡಿಸಿದ್ದರು. ಅಲ್ಲದೇ, ಆಶ್ರಮದ ಸುತ್ತಲೂ ಬಿಗಿಪಹರೆ ಮಾಡಲಾಗಿತ್ತು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಪರಿಹಾರ ಯಾವುದೇ ಅನಾಹುತ ಸಂಭವಿಸಿಲ್ಲ.

 
Loading...

First published:October 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ