‘ಯೋಗ ಗುರು ರಾಮ್​ದೇವ್​’ರ ಮೇಣದ ಪ್ರತಿಮೆ: ತಯಾರಿಸಲು ಮುಂದಾದ ಲಂಡನ್​ ಮ್ಯೂಸಿಯಂ


Updated:June 26, 2018, 8:25 PM IST
‘ಯೋಗ ಗುರು ರಾಮ್​ದೇವ್​’ರ ಮೇಣದ ಪ್ರತಿಮೆ: ತಯಾರಿಸಲು ಮುಂದಾದ ಲಂಡನ್​ ಮ್ಯೂಸಿಯಂ

Updated: June 26, 2018, 8:25 PM IST


ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​.26): ಲಂಡನ್​ ಪ್ರಸಿದ್ದ ವಸ್ತು ಸಂಗ್ರಹಾಲಯವೊಂದರಲ್ಲಿ ಪತಾಂಜಲಿ ಲಿಮಿಟೆಡ್​​ ಕಂಪನಿ ಮಾಲೀಕ, ಯೋಗ ಗುರು ಬಾಬಾ ರಾಮ್​ದೇವ್​ ಅವರ ಮೇಣದ ಪ್ರತಿಮೆ ಸಿದ್ದವಾಗುತ್ತಿದೆ ಎಂದು ತಿಳಿದು ಬಂದಿದೆ. ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದವರು ಈಗಾಗಲೇ ಬಾಬಾ ರಾಮ್​ದೇವ್​ ಅವರ ಮೈಕಟ್ಟಿನ ಅಳತೆಯನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಬಾಬಾ ರಾಮ್​ದೇವರ ಅವರ ಮೇಣದ ಪ್ರತಿಮೆ ವೃಕ್ಷಾಸನದಲ್ಲಿ ಸಿದ್ಧವಾಗಲಿದೆ. ಪ್ರತಿಮೆ ತಯಾರಿಕೆಗಾಗಿ ಯೋಗ ಗುರುಗಳ 200 ಕ್ಕೂ ಹೆಚ್ಚು ಫೋಟೋಗಳನ್ನು ಪಡೆಯಲಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ವಿಶ್ವದ ಅನೇಕ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಯಿದೆ. ವಿಶೇಷ ಅಂದರೆ, ಸ್ವಾಮಿ ವಿವೇಕಾನಂದರ ಬಳಿಕ ಟುಸ್ಸಾಡ್ಸ್ ನಲ್ಲಿ ಸ್ಥಾನ ಪಡೆಯುತ್ತಿರುವ ಎರಡನೇ ಸಂತರು ಬಾಬಾ ರಾಮ್​ದೇವ್​ ಎನ್ನಲಾಗಿದೆ.ಯೋಗ ಗುರುಗಳು ಮೇಣದ ಪ್ರತಿಮೆಗೆ ಒಪ್ಪಿಗೆ ನೀಡಿದ್ದಾರೆ. ಅಲ್ಲದೇ ಈ ಪ್ರತಿಮೆಗಾಗಿ 20 ಜನರ ತಂಡ ಕೆಲಸ ಮಾಡುತ್ತಿದ್ದು, ಯಾವುದೇ ಕೊರೆತೆ ಇಲ್ಲದೆ ಸಿದ್ದವಾಗಲಿದೆ ರಾಮ್​ದೇವ್​ ಅವರ ಪ್ರತಿಮೆ ಎಂದು ತಿಳಿದು ಬಂದಿದೆ. ಈ ಮೂಲಕ ಜಗತ್ತಿನ ಮೂಲೆಯಲ್ಲಿರುವ ಎಲ್ಲರಿಗೂ ಯೋಗ ತಲುಪಲಿ ಎಂಬುದು ಯೋಗ ಗುರುಗಳಾದ ರಾಮ್​ದೇವ್​ ಅವರ ಆಶಯವಾಗಿದೆ.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...