ಪೆಟ್ರೋಲ್ ಬೆಲೆ (Petrol Price) ಹೆಚ್ಚಾಗುತ್ತಲೇ ಇದೆ, ರಷ್ಯಾ ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಲೇ ಇದ್ದು, ಇದು ರಷ್ಯಾದಿಂದ ಆಮದು ಮಾಡಲ್ಪಡುವ ಕಚ್ಚಾ ತೈಲ(Crude Oil)ಗಳ ಮೇಲೆ ಪರಿಣಾಮ ಬೀರಿದೆ. ಅದೇ ರೀತಿಯಾಗಿ ದೇಶಾದ್ಯಂತ ಗಣನೀಯವಾಗಿ ಇಂಧನ ಬೆಲೆ (Fuel Price) ಏರಿಕೆ ಕಂಡುವಂದಿದ್ದು, ಇದೀಗ 108 ರೂ ಗಡಿ ದಾಟಿದೆ. ಈ ಕುರಿತು ಬಾಬಾ ರಾಮ್ದೇವ್ ಅವರಲ್ಲಿ ರಿಪೋರ್ಟರ್ ಒಬ್ಬರು ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ವೈರಲ್ ಆಗಿದೆ. ಈ ಹಿಂದೆ 2014 ರ ಚುನಾವಣೆ ಸಂದರ್ಭ ಬಾಬಾ ರಾಮ್ದೇವ್ ಅವರು ನೀಡಿದ್ದ ಹೇಳಿಕೆಗನುಗಣವಾಗಿ ಪತ್ರಕರ್ತರೊಬ್ಬರು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಸಿಟ್ಟಾದ ಬಾಬಾ ರಾಮ್ದೇವ್ ಪ್ರತಿಕ್ರಿಯಿಸಿದ ರೀತಿ ಈಗ ಎಲ್ಲೆಡೆ ವೈರಲ್ (Viral) ಆಗಿದೆ.
2014ರಲ್ಲಿ ಸರ್ಕಾರ ಬದಲಾದರೆ ಪೆಟ್ರೋಲ್ ಬೆಲೆ 40 ರೂ.ಗೆ ಇಳಿಯುವ ಬಗ್ಗೆ ಈ ಹಿಂದೆ ಮಾಡಿದ್ದ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗ ಗುರು ಬಾಬಾ ರಾಮ್ದೇವ್ ಕ್ಯಾಮೆರಾ ಮುಂದೆಯೇ ತಾಳ್ಮೆ ಕಳೆದುಕೊಂಡು ಪತ್ರಕರ್ತರ ಮೇಲೆ ವಾಗ್ದಾಳಿ ನಡೆಸಿದ್ದಾರೆ.
40 ರೂ.ಗೆ ಪೆಟ್ರೋಲ್ ಮತ್ತು 300 ರೂ.ಗೆ ಸಿಲಿಂಡರ್
ಹರಿಯಾಣದ ಕರ್ನಾಲ್ನಿಂದ ವೈರಲ್ ಆಗಿರುವ ವೀಡಿಯೊದಲ್ಲಿ, ಪತ್ರಕರ್ತರೊಬ್ಬರು ಪತಂಜಲಿ ಬ್ರಾಂಡ್ ಅಂಬಾಸಿಡರ್ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಬಗ್ಗೆ ಕೇಳಿದ್ದು, ಜನರು ಲೀಟರ್ಗೆ 40 ರೂ.ಗೆ ಪೆಟ್ರೋಲ್ ಮತ್ತು 300 ರೂ.ಗೆ ಸಿಲಿಂಡರ್ಗೆ ಅಡುಗೆ ಅನಿಲವನ್ನು ಖಚಿತಪಡಿಸುವ ಸರ್ಕಾರದ ಭರವಸೆಯನ್ನು ಪರಿಗಣಿಸಬೇಕೇ ಎಂದು ಪ್ರಶ್ನಸಿದ್ದಾರೆ.
ಪ್ರಶ್ನೆಯಿಂದ ರಾಮ್ದೇವ್ ಅಸಮಾಧಾನ
2014ರ ಲೋಕಸಭೆ ಚುನಾವಣೆಗೆ ಮುನ್ನ ಸುದ್ದಿ ವಾಹಿನಿಯೊಂದಕ್ಕೆ ರಾಮ್ದೇವ್ ನೀಡಿದ ಸಂದರ್ಶನವನ್ನು ಪತ್ರಕರ್ತರು ಉಲ್ಲೇಖಿಸಿದ್ದಾರೆ. ಈ ಪ್ರಶ್ನೆಯಿಂದ ಪ್ರಭಾವಿತರಾಗದೆ, ಅಸಮಾಧಾನಗೊಂಡ ರಾಮದೇವ್ ಖಡಕ್ ಆಗಿ ಉತ್ತರಿಸಿದ್ದಾರೆ.
ನಾನು ಹೇಳಿದ್ದೀನಿ, ನೀವೇನ್ಮಾಡ್ತೀರಿ?
ಹೌದು, ನಾನು ಹೇಳಿದ್ದೇನೆ, ನೀವು ಏನು ಮಾಡುತ್ತೀರಿ? ಇಂತಹ ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಇರುವ ನಿಮ್ಮ ಗುತ್ತಿಗೆದಾರನೇ ನಾನು ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಅದೇ ಪ್ರಶ್ನೆಯನ್ನು ಕೇಳಿದಾಗ, ಬಾಬಾ ರಾಮ್ದೇವ್ ವರದಿಗಾರನಿಗೆ ಬೆದರಿಕೆ ಹಾಕಿದರು. ಅವರು ಮತ್ತೆ ಅಂತಹ ಪ್ರಶ್ನೆಗಳನ್ನು ಕೇಳಿದರೆ ಚೆನ್ನಾಗಿರಲ್ಲ ಎಂದು ಬೆದರಿಸಿದ್ದಾರೆ. ನಾನು ಕಾಮೆಂಟ್ ಮಾಡಿದ್ದೇನೆ. ಈಗ ನೀವು ಏನು ಮಾಡುತ್ತೀರಿ? ಸುಮ್ಮನೆ ಮುಚ್ಚು. ಮತ್ತೆ ಕೇಳಿದರೆ ಚೆನ್ನಾಗಿರಲ್ಲ ನೋಡು ಎಂದಿದ್ದಾರೆ.
ಇದನ್ನೂ ಓದಿ: Pakistan: ಇಮ್ರಾನ್ ಖಾನ್ ನಂತರ ಇವರಾಗ್ತಾರಾ ಪಾಕ್ ಪ್ರಧಾನಿ? ಯಾರು ಈ ಶಹಬಾಜ್ ಷರೀಫ್?
ಕಳೆದ 10 ದಿನಗಳಿಂದ ಇಂಧನ ಬೆಲೆಯಲ್ಲಿ ಕಡಿದಾದ ಏರಿಕೆಯ ನಡುವೆ ಈ ಘಟನೆ ನಡೆದಿದೆ. ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ ಒಂಬತ್ತು ಪರಿಷ್ಕರಣೆಗಳಲ್ಲಿ ಲೀಟರ್ಗೆ ಸುಮಾರು 6.40 ರೂ. ಹೆಚ್ಚಳ ಕಂಡುಬಂದಿದೆ.
ಕಳೆದ 9 ದಿನಗಳಲ್ಲಿ 8 ಬಾರಿ ಏರಿಕೆ
ಇತ್ತೀಚಿನ ಬೆಲೆ ಪರಿಷ್ಕರಣೆಯೊಂದಿಗೆ, ಈಗ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 101.81 ರೂ., ಡೀಸೆಲ್ ಪ್ರತಿ ಲೀಟರ್ಗೆ 93.07 ರೂ.ಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ 2 ರೂ. 62 ಪೈಸೆಯಷ್ಟು ಏರಿಕೆ ಕಂಡ ಪೆಟ್ರೋಲ್ ದರ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ನೋಡಿ..
ರಷ್ಯಾ - ಉಕ್ರೇನ್ ಯುದ್ಧ ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ವ್ಯತ್ಯಾಸವಾಗುತ್ತಿದೆ. ಕಳೆದ 2 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಕಚ್ಚಾ ತೈಲ ದರ ಮತ್ತೆ ಏರಿಕೆಯ ಹಾದಿಯಲ್ಲಿದೆ. ಇದರಂತೆ, ದೇಶದಲ್ಲೂ ಕಳೆದ 8 - 10 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಹಾದಿಯಲ್ಲಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್, ಡೀಸೆಲ್ (Diesel) ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ