ಮೋದಿ ಪರ ಬಾಬಾ ರಾಮದೇವ್​ ಪ್ರಚಾರ ಮಾಡಲ್ವಂತೆ; 35-40 ರೂ.ಗೆ ಬೇಕಿದ್ದರೂ ಪೆಟ್ರೋಲ್​, ಡೀಸೆಲ್​ ಮಾರಬಲ್ಲೆ ಎಂದ ಯೋಗಗುರು!

news18
Updated:September 17, 2018, 8:30 AM IST
ಮೋದಿ ಪರ ಬಾಬಾ ರಾಮದೇವ್​ ಪ್ರಚಾರ ಮಾಡಲ್ವಂತೆ;  35-40 ರೂ.ಗೆ ಬೇಕಿದ್ದರೂ ಪೆಟ್ರೋಲ್​, ಡೀಸೆಲ್​ ಮಾರಬಲ್ಲೆ ಎಂದ ಯೋಗಗುರು!
news18
Updated: September 17, 2018, 8:30 AM IST
ನ್ಯೂಸ್​18 ಕನ್ನಡ

ನವದೆಹಲಿ (ಸೆ. 17): 'ಇಂಧನ ಬೆಲೆಯನ್ನು ಆದಷ್ಟು ಬೇಗ ಕೇಂದ್ರ ಸರ್ಕಾರ ಕಡಿಮೆ ಮಾಡದಿದ್ದರೆ ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಮಾಡುವುದಿಲ್ಲ' ಎಂದು ಪತಂಜಲಿ  ಆಯುರ್ವೇದ ಉತ್ಪನ್ನಗಳ ಸ್ಥಾಪಕ ಮತ್ತು ಯೋಗಗುರು ಬಾಬಾ ರಾಮದೇವ್​ ಹೇಳಿಕೆ ನೀಡಿದ್ದಾರೆ.

ಕಳೆದ ಬಾರಿಯ 2014ರ ಚುನಾವಣೆಯಲ್ಲಿ ಬಿಜೆಪಿ ಪರ ಸಾಕಷ್ಟು ಪ್ರಚಾರ ಮಾಡಿದ್ದೆ. ಆದರೆ, ಈಗ ಮೋದಿ ಅವರು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೇರುತ್ತಿದೆ. ನನಗೇನಾದರೂ ಅವಕಾಶ ಸಿಕ್ಕರೆ, ಸರ್ಕಾರ ತೆರಿಗೆಯಲ್ಲಿ ಕಡಿತ ಮಾಡಿದರೆ ಈಗಿರುವ ಅರ್ಧ ಬೆಲೆಗೆ ಅಂದರೆ, 35-40 ರೂ.ಗೆ ಬೇಕಿದ್ದರೂ ಪೆಟ್ರೋಲ್​, ಡೀಸೆಲ್​ ಮಾರಾಟ ಮಾಡುವುದಾಗಿ ಸವಾಲು ಹಾಕಿದ್ದಾರೆ.

ನಾನು ಬಲಪಂಥೀಯನೂ ಅಲ್ಲ ಎಡಪಂಥೀಯನೂ ಅಲ್ಲ. ನಾನು ಇಬ್ಬರ ವಿಚಾರಧಾರೆಗಳನ್ನೂ ಗೌರವಿಸುತ್ತೇನೆ. ನಾನು ಯಾವ ಪಕ್ಷದ ಪರವಾಗಿಯೂ ಇಲ್ಲ. ನಾನು ಸ್ವತಂತ್ರ. ಆದ್ದರಿಂದಲೇ ಹಲವು ವಿಷಯಗಳಲ್ಲಿ ಮೌನ ಯೋಗವನ್ನು ಅನುಕರಿಸಿದ್ದೇನೆ. ಆದರೆ, ನಾನು ಕಟು ರಾಷ್ಟ್ರೀಯವಾದಿ ಎಂಬುದರಲ್ಲಿ ಅನುಮಾನವಿಲ್ಲ ಎಂದು ಬಾಬಾ ರಾಮದೇವ್​ ಹೇಳಿದ್ದಾರೆ.

ಪ್ರಧಾನಿ ಮೋದಿಯನ್ನು ಟೀಕಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂಬಂತಾಗಿದೆ. ಆದರೆ, ಮೋದಿ ಇದುವರೆಗೂ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅದರ ಬಗ್ಗೆಯೂ ಬೆಳಕು ಚೆಲ್ಲಬೇಕಾಗಿದೆ. ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶವನ್ನು ಶುದ್ಧಗೊಳಿಸುವ ಕೆಲಸಕ್ಕೆ ಕೈಹಾಕಿರುವ ಮೋದಿ ಯಾವುದೇ ಪ್ರಮುಖ ಹಗರಣಗಳಲ್ಲಿ ಗುರುತಿಸಿಕೊಂಡಿಲ್ಲ ಎಂಬುದೇ ಗಮನಿಸಬೇಕಾದ ವಿಷಯ.

ತೆರಿಗೆ ಸಂಗ್ರಹವಾಗದಿದ್ದರೆ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂಬುದು ಸತ್ಯವಾದ ವಿಚಾರ. ಅದಕ್ಕಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಬದಲು ಶ್ರೀಮಂತರಿಂದ ಹೆಚ್ಚೆಚ್ಚು ತೆರಿಗೆ ಸಂಗ್ರಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಆಧುನಿಕತೆಯೆಂದರೆ ನಗ್ನತೆಯಲ್ಲ:
Loading...

ಇತ್ತೀಚೆಗೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಈ ವೇಳೆ ಪ್ರಸ್ತಾಪಿಸಿದ ಬಾಬಾ ರಾಮದೇವ್​, ತುಂಡು ಬಟ್ಟೆಗಳನ್ನು ಧರಿಸಿ ಓಡಾಡುವುದು ಕೂಡ ಅತ್ಯಾಚಾರಕ್ಕೆ ಒಂದು ಕಾರಣ. ನಾನು ಆಧುನಿಕ ಮನುಷ್ಯ. ಆದರೆ, ಆಧುನೀಕತೆಯೆಂದರೆ ನಗ್ನತೆಯಲ್ಲ. ನಾವು ನಾಗರಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದಿದ್ದಾರೆ.

 

 
First published:September 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...