• Home
  • »
  • News
  • »
  • national-international
  • »
  • Nipah Virus: ವೈರಸ್ ಭಯಕ್ಕೆ ಕೇರಳದಲ್ಲಿ ರಂಬುಟಾನ್ ಹಣ್ಣುಗಳ ವ್ಯಾಪಾರ ಇಳಿಮುಖ- ಸಂಕಷ್ಟದಲ್ಲಿ ಹಣ್ಣಿನ ವ್ಯಾಪಾರಿಗಳು

Nipah Virus: ವೈರಸ್ ಭಯಕ್ಕೆ ಕೇರಳದಲ್ಲಿ ರಂಬುಟಾನ್ ಹಣ್ಣುಗಳ ವ್ಯಾಪಾರ ಇಳಿಮುಖ- ಸಂಕಷ್ಟದಲ್ಲಿ ಹಣ್ಣಿನ ವ್ಯಾಪಾರಿಗಳು

ರಂಬುಟಾನ್ ಹಣ್ಣು

ರಂಬುಟಾನ್ ಹಣ್ಣು

Rambutan Fruit: ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ನೋಡಿ ರಂಬುಟಾನ್ ಅನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ ಹಣ್ಣು ಮಾರಾಟಗಾರರಿಗೆ ಕಷ್ಟಕರವಾಗಿದೆ.  ಜನರಲ್ಲಿ ಇದ್ದಕ್ಕಿದ್ದಂತೆ ಹಣ್ಣಿನ  ಬಗ್ಗೆ ಹೆದರಿಕೆ ಮತ್ತು ತಾತ್ಸಾರ ಮಾರಾಟಗಾರರನ್ನು  ನಷ್ಟಕ್ಕೆ ದೂಡಿದೆ. ತ್ರಿ

  • Share this:

 ರಂಬುಟಾನ್(Rambutan) ಹಣ್ಣು ಕೇರಳದ ವಿಶಿಷ್ಟವಾದ ಹಣ್ಣು. ಈ ಸಮಯದಲ್ಲಿ ಬಹು ಬೇಡಿಕೆಯಲ್ಲಿರುತ್ತದೆ. ಹೆಚ್ಚು ಉಷ್ಟವಲಯದಲ್ಲಿ ಬೆಳೆಯುವ ಈ ಹಣ್ಣು. ನೋಡಲು ಬಹಳ ವಿಭಿನ್ನಾಗಿರುತ್ತದೆ. ಹೊರ ಭಾಗದಲ್ಕಿ ಕೆಂಪು ಬಣ್ಣದ ಪದರವಿದ್ದರೆ, ಒಳಭಾಗದಲ್ಲಿ ರುಚಿಯಾದ ಹಣ್ಣಿರುತ್ತದೆ. ಬಹಳ ಜನಪ್ರಿಯವಾದ ಈ ಹಣ್ಣಿನ ವ್ಯಾಪಾರ ಇದೀಗ ಕುಸಿದು ಬೀಳುತ್ತಿದೆ.  ಇದಕ್ಕೆ ಕಾರಣ ನಿಫಾ (Nipah Virus)ವೈರಸ್.    ಕೇರಳದ ಕೋಝಿಕೋಡ್​ ಜಿಲ್ಲೆಯಲ್ಲಿ  ಇತ್ತೀಚೆಗಷ್ಟೇ ನಿಫಾ ವೈರಸ್​ಗೆ ಬಲಿಯಾದ 12 ವರ್ಷದ ಬಾಲಕನಿಗೆ ಬಾವಲಿ ಕಚ್ಚಿದ ರಂಬುಟಾನ್ ಹಣ್ಣಿನಿಂದ ವೈರಸ್ ತಗುಲಿರಬಹುದು ಎಂಬ ಸುದ್ದಿ ಹರಡಿದ ಕಾರಣ ರಾಜ್ಯದಾದ್ಯಂತ ಹಣ್ಣುಗಳ ಮಾರಾಟದ ಮೇಲೆ ಹೊಡೆತ ಬಿದ್ದಿದೆ.  ಆದರೆ ಬಾಲಕನಿಗೆ ವೈರಸ್ ರಂಬುಟಾನ್ ಹಣ್ಣಿನಿಂದ ತಗುಲಿರುವುದು ದೃಢವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಕೂಡ ಭಯಬೀತರಾಗಿರುವ ಜನರು ಹಣ್ಣುಗಳನ್ನು ಖರೀದಿ ಮಾಡಲು ಹಿಂಜರಿಯುತ್ತಿದ್ದು, ಕೇರಳದ ವಿವಿಧ ಜಿಲ್ಲೆಗಳಲ್ಲಿ ರಂಬುಟಾನ್ ಮಾರಾಟ ಇಳಿಮುಖವಾಗಿದೆ.  


ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ನೋಡಿ ರಂಬುಟಾನ್ ಅನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿದ ಹಣ್ಣು ಮಾರಾಟಗಾರರಿಗೆ ಕಷ್ಟಕರವಾಗಿದೆ.  ಜನರಲ್ಲಿ ಇದ್ದಕ್ಕಿದ್ದಂತೆ ಹಣ್ಣಿನ  ಬಗ್ಗೆ ಹೆದರಿಕೆ ಮತ್ತು ತಾತ್ಸಾರ ಮಾರಾಟಗಾರರನ್ನು  ನಷ್ಟಕ್ಕೆ ದೂಡಿದೆ. ತ್ರಿಶೂರ್ ಜಿಲ್ಲೆಯ ಸಣ್ಣ ಪ್ರಮಾಣದ ಹಣ್ಣಿನ ಅಂಗಡಿ ಮಾಲೀಕರೊಬ್ಬರು  ಇತ್ತೀಚೆಗೆ 6 ಸಾವಿರ ರೂಪಾಯಿಗಳಿಗೆ  ಮೂರು ದೊಡ್ಡ ಬಾಕ್ಸ್ ತುಂಬ ರಂಬುಟಾನ್  ಹಣ್ಣು ಖರೀದಿಸಿದ್ದಾರೆ,  ಆದರೆ ಒಂದು ಬಾಕ್ಸ್ ಕೂಡ ಇನ್ನೂ ಮಾರಾಟವಾಗಿಲ್ಲ. ಯಾರೂ ಹಣ್ಣನ್ನು ಖರೀದಿಸುತ್ತಿಲ್ಲ. ನಾವು ಹಣ್ಣಿಗೆ ಸೀಸನ್ ಆಗಿದ್ದರಿಂದ ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚು ಖರೀದಿಸಿದ್ದೆವು. ಹಣ್ಣುಗಳು ಎಷ್ಟೇ ಚನ್ನಾಗಿದ್ದರೂ, ಯಾವುದೇ ಗುರುತುಗಳಿದ್ದರೂ ಸಹ ಜನರು ಹಣ್ಣನ್ನು ಖರೀದಿಸಲು ತಯಾರಿಲ್ಲ. ಮೂರು ಪೆಟ್ಟಿಗೆ ಹಣ್ಣುಗಳನ್ನು ಏನು ಮಾಡಬೇಕೆಂದು ನಮಗೆ ತಿಳಿದಿಲ್ಲ, ಅದು ಬೇಗನೆ ಹಾಳಾಗುತ್ತದೆ ಎಂದು ಮಾರಾಟಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.


ಈ ಸುದ್ದಿಯ ಕೇಂದ್ರಬಿಂದುವಾಗಿರುವ ಕೋಝಿಕೋಡ್  ಜಿಲ್ಲೆಯ ಹಣ್ಣು ಮಾರಾಟಗಾರರು ಹೇಳುವಂತೆ ಹಣ್ಣಿನ ಪೂರೈಕೆ ಕೂಡ ತೀವ್ರವಾಗಿ ಕಡಿಮೆಯಾಗಿದೆ ನಿಫಾ ವರದಿಯಾದ ನಂತರ ಮತ್ತು ಮಗು ರಂಬುಟಾನ್  ಹಣ್ಣನ್ನು ತಿಂದ ಸುದ್ದಿ ಬಂದ ನಂತರ ಮಾರುಕಟ್ಟೆಯಲ್ಲಿ ಹಣ್ಣುಗಳು ಕಡಿಮೆಯಾಗಿದೆ. ಇನ್ನು ಸಣ್ಣ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ರಂಬುಟಾನ್ ಅನ್ನು ಪ್ರತಿ ಕೆಜಿಗೆ 200 ರೂ ಮತ್ತು ಸಾಮಾನ್ಯ  ಗುಣಮಟ್ಟದ ರೂಪಾಂತರಗಳನ್ನು 180-130 ರೂಗಳಂತೆ ಮಾರಾಟವಾಗುತಿತ್ತು, ಆದರೆ ವಿತರಕರೂ ಕೂಡ ಹಣ್ಣುಗಳನ್ನು ಕಳುಹಿಸುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.


ಇದನ್ನೂ ಓದಿ: ಕೇರಳದಲ್ಲಿ ನಿಪಾ ವೈರಸ್; 11 ಮಂದಿ ಸಂಪರ್ಕಿರತಲ್ಲಿ ರೋಗ ಲಕ್ಷಣ ಪತ್ತೆ!


ಇದರ ಮಧ್ಯೆ ಕೋಝಿಕೋಡ್​ನ ಇನ್ನೊಬ್ಬ  ಹಣ್ಣು ಮಾರಾಟಗಾರರ ಪ್ರಕಾರ  ರಂಬುಟಾನ್ ಮಾರಾಟದಿಂದ ಕೆಲವು ದಿನಗಳವರೆಗೆ ದೂರವಿರಲು ಮಾರುಕಟ್ಟೆಯಲ್ಲಿನ ಅಂಗಡಿಗಳಿಗೆ ಆರೋಗ್ಯ ಇಲಾಖೆ ಅನೌಪಚಾರಿಕ ಆದೇಶ ನೀಡಿದೆ. ಅದಕ್ಕಾಗಿಯೇ ನಾವು ಸೋಮವಾರ ಇಡುಕ್ಕಿಯಿಂದ ಬಂದ ಎರಡು ಲೋಡ್ ರಂಬುಟಾನ್ ಅನ್ನು ವಾಪಸ್ ಕಳುಹಿಸಿದ್ದೇವೆ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.


ತಿರುವನಂತಪುರಂ ಜಿಲ್ಲೆಯ ಹಣ್ಣು ಮಾರಾಟಗಾರರು ಕೂಡ ಅದೇ ಸಮಸ್ಯೆಯನ್ನಹು ಹೇಳಿಕೊಂಡಿದ್ದಾರೆ.  ರಂಬುಟಾನ್ ಮಾತ್ರವಲ್ಲ, ಕಳೆದ ಎರಡು ದಿನಗಳಿಂದ ಜನರು ಹಣ್ಣುಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಕಿತ್ತಳೆ ಮತ್ತು ಮೊಸಂಬಿಯಂತಹ ಸಿಟ್ರಿಕ್ ಹಣ್ಣುಗಳನ್ನು ಮಾತ್ರ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ ಎಂದು ತಿರುವನಂತಪುರಂನ ಹಣ್ಣು ಮಾರಾಟಗಾರ ಶ್ರೀಧರ್ ಬೇಸರ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಕೇರಳದಲ್ಲಿ ಕೋವಿಡ್ - 19 ಗಾಯದ ಮೇಲೆ ನಿಫಾ ಬರೆ..! ಎರಡೂ ಸೋಂಕುಗಳನ್ನು ಒಟ್ಟೊಟ್ಟಿಗೆ ನಿಭಾಯಿಸೋದು ಹೇಗೆ?


ಇನ್ನು ಕೋಝಿಕೋಡ್  ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಬಾಲಕನಿಗೆ ಬಾವಲಿ ಕಚ್ಚಿದ ರಂಬುಟಾನ್ ಮೂಲಕ ಸೋಂಕು ತಗುಲಿರುವುದು ದೃಢವಾಗಿಲ್ಲ, ಪರೀಕ್ಷೆ ನಡೆಯುತ್ತಿದೆ ಎಂದಿದ್ದಾರೆ. ಮಗುವಿನ ತಂದೆ ರಂಬುಟಾನ್ ಹಣ್ಣುಗಳನ್ನು ಕಿತ್ತುಕೊಂಡುತ್ತಿದ್ದರು ಅವುಗಳನ್ನು ಬಾಲಕ ಸೇವನೆ ಮಾಡುತ್ತಿದ್ದ. ಬಾಲಕನಿಗೆ ವೈರಸ್ ಕಾಣಿಸಿಕೊಂಡ ಕಾರಣ ಮರಗಳ ತಪಾಸಣೆಯ ಸಮಯದಲ್ಲಿ, ಕೆಲವು ಮಾಗಿದ ಮತ್ತು ಹಸಿ ರಂಬುಟಾನ್ ಹಣ್ಣುಗಳನ್ನು ಬಾವಲಿಗಳು ಕಚ್ಚಿರುವುದು ಕಂಡು ಬಂದಿದೆ. ಆದರೆ ಅವುಗಳನ್ನು ಇನ್ನೂ ಪರೀಕ್ಷೆಗೆ ಕಳುಹಿಸಿಲ್ಲ. ಈ ರೋಗವು ರಂಬುಟಾನ್ ಮೂಲಕ ಹರಡಿರುವುದನ್ನು ಆರೋಗ್ಯ ಇಲಾಖೆ ಹೇಳಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಕೋಝಿಕೋಡ್​ನ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಕೆಕೆ ಬೇಬಿ ಹೇಳಿದ್ದಾರೆ.

Published by:Sandhya M
First published: