• Home
 • »
 • News
 • »
 • national-international
 • »
 • Nipah Virus- ಈ ಹಣ್ಣು ತಿಂದು ಕೇರಳದ ಬಾಲಕನಿಗೆ ಅಂಟಿತ್ತು ನಿಪಾ ಸೋಂಕು: ತಜ್ಞರು

Nipah Virus- ಈ ಹಣ್ಣು ತಿಂದು ಕೇರಳದ ಬಾಲಕನಿಗೆ ಅಂಟಿತ್ತು ನಿಪಾ ಸೋಂಕು: ತಜ್ಞರು

ರಂಬುಟನ್ ಹಣ್ಣು

ರಂಬುಟನ್ ಹಣ್ಣು

Rambutan Fruit- ನಿಪಾ ವೈರಸ್ನಿಂದ ಮೃತಪಟ್ಟ ಬಾಲಕನ ಮನೆಯಿಂದ 4 ಕಿಮೀ ಸುತ್ತಲಿನ ಪ್ರದೇಶದಲ್ಲಿ ಬಿಗಿ ನಿರ್ಬಂಧಗಳನ್ನ ಹೇರಲಾಗಿದೆ. ರಂಗುಟನ್ ಎಂಬ ಹಣ್ಣನ್ನು ತಿಂದ ಬಳಿಕ ಬಾಲಕಿನಿಗೆ ಸೋಂಕು ತಗುಲಿದ್ದಿರಬಹುದು ಎಂದು ಕೇಂದ್ರ ಆರೋಗ್ಯ ಅಧಿಕಾರಿಗಳು ಶಂಕಿಸಿದ್ದಾರೆ.

 • News18
 • Last Updated :
 • Share this:

  ತಿರುವನಂತಪುರಂ, ಸೆ. 06: ಕೋವಿಡ್ ಸೋಂಕಿನಿಂದ ಕಂಗೆಟ್ಟಿರುವ ಕೇರಳ ರಾಜ್ಯಕ್ಕೆ ಈಗ ನಿಪಾ ವೈರಸ್ (Nipah Virus Attack) ದಾಂಗುಡಿ ಇಟ್ಟಿದೆ. ನಿನ್ನೆ ಕೋಳಿಕೋಡ್ ಜಿಲ್ಲೆಯಲ್ಲಿ (Kozhikode) 12 ವರ್ಷದ ಬಾಲಕ ನಿಪಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾನೆ. ಈತನಿಗೆ ನಿಪಾ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಪ್ರಾಥಮಿಕ ಅವಲೋಕನದ ಪ್ರಕಾರ ಈತನಿಗೆ ರಂಬುಟನ್ (Rambutan Fruit) ಎಂಬ ಹಣ್ಣಿನಿಂದ ಸೋಂಕು ಅಂಟಿರಬಹುದು ಎನ್ನಲಾಗಿದೆ. ಬಾಲಕನಿಗೆ ನಿಪಾ ವೈರಸ್ ಸೋಂಕು ರಂಬುಟನ್ ಹಣ್ಣನಿಂದ ಆಗಿದ್ದಿರಬಹುದು ಕೇಂದ್ರ ಆರೋಗ್ಯ ಇಲಾಖೆ ತಜ್ಞರು ಶಂಕಿಸಿದ್ದಾರೆ ಎಂದು ಕೇರಳದ ಸಚಿವ ಎ ಕೆ ಶಶೀಂದ್ರನ್ ಅವರು ಹೇಳಿದ್ದಾರೆ. ಮೃತ ಬಾಲಕನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಹಾಗೂ ನಿಪಾ ರೋಗಲಕ್ಷಣ ಇರುವ ಎಂಟು ವ್ಯಕ್ತಿಗಳನ್ನ ಗುರುತಿಸಿ ಅವರ ಸ್ಯಾಂಪಲ್​ಗಳನ್ನ ಪುಣೆಯ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್​ಗೆ ಕಳುಹಿಸಿಕೊಡಲಾಗಿದೆ. ಜೊತೆಗೆ, ಬಾಲಕ ವಾಸಿಸುತ್ತಿದ್ದ ಪ್ರದೇಶದ ಬಳಿ ಇರುವ ರಂಬುಟನ್ ಹಣ್ಣುಗಳನ್ನ ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಿಕೊಡಲಾಗಿದೆ.


  ಕೇಂದ್ರದ ಆರೋಗ್ಯ ಅಧಿಕಾರಿಗಳು ನಿನ್ನೆ ಭಾನುವಾರ ಬೆಳಗ್ಗೆ ಮೃತ ಬಾಲಕ ಹಶೀಮ್​ನ ಪೋಷಕರನ್ನ ಸಂಪರ್ಕಿಸಿ ಎಲ್ಲಾ ಮಾಹಿತಿ ಸಂಗ್ರಹಿಸಿದ್ದಾರೆ. ಬಾಲಕ ಇತ್ತೀಚೆಗೆ ರಂಬುಟನ್ ಹಣ್ಣನ್ನು ಸೇವಿಸಿದ್ದನ್ನ ಆತನ ತಾಯಿ ತಿಳಿಸಿದ್ದಾರೆ. ನಿಪಾ ಮೊದಲಾದ ವೈರಸ್​ಗಳು ಬಾವಲಿಗಳ ಮೂಲಕ ಹರಡುತ್ತವೆ. ಬಾವಲಿಯು ಕಚ್ಚಿದ ಹಣ್ಣನ್ನು ತಿನ್ನುವ ಮನುಷ್ಯರಿಗೆ ನಿಪಾ ಸೋಂಕು ತಗುಲುತ್ತದೆ. 2018ರಲ್ಲಿ ಕೇರಳಕ್ಕೆ ನಿಪಾ ವೈರಸ್ ದಾಂಗುಡಿ ಇಡಲು ಇದೇ ರೀತಿ ಬಾವುಲಿ ಕಚ್ಚಿದ್ದ ಮಾವಿನ ಹಣ್ಣನ್ನು ವ್ಯಕ್ತಿಯೊಬ್ಬ ತಿಂದಿದ್ದು ಕಾರಣ ಎಂಬ ಪ್ರಬಲ ಶಂಕೆ ಇದೆ. ಈ ಬಾರಿ ರಂಬುಟನ್ ಹಣ್ಣಿನ ಮೂಲಕ ಸೋಂಕು ಮರುಕಳಿಸಿರುವ ಸಾಧ್ಯತೆ ಇದೆ.


  ಇದನ್ನೂ ಓದಿ: COVID-19 Symptoms: ಕಿವಿ ಕೇಳಿಸದಿರುವುದು, ಬಾಯಿ ಒಣಗುವುದು ಕೂಡಾ ಕೋವಿಡ್​ ಲಕ್ಷಣಗಳು, ಎಚ್ಚರದಿಂದಿರಿ!


  ರಂಬುಟನ್ ಹಣ್ಣು ಏನು?: ಆಗ್ನೇಯ ಏಷ್ಯಾ (South East Asia) ಮೂಲದ್ದಾಗಿರುವ ರಂಬುಟನ್ ಹಣ್ಣನ್ನು ಒಂದೆರಡು ದಶಕಗಳ ಹಿಂದೆ ಕೇರಳದಲ್ಲಿ ಬೆಳೆಯಲು ಆರಂಭಿಸಲಾಗಿದೆ. ರಂಬುಟನ್ ಎಂದರೆ ಮಲೇ ಭಾಷೆಯಲ್ಲಿ ಕೂದಲು ಎಂದರ್ಥ. ಲಿಚ್ಚಿ ಹಣ್ಣಿನ ರೀತಿ ಈ ಹಣ್ಣಿನ ಮೇಲೆ ಉದ್ದನೆಯ ಕೂದಲಿನಂತೆ ಎಳೆಗಳು ಹೊರಚಾಚಿರುತ್ತವೆ.


  ರೂಟ್ ಮ್ಯಾಪ್: ನಿಪಾಗೆ ಬಲಿಯಾಗುವ ಮುನ್ನ 12 ವರ್ಷದ ಬಾಲಕನಿಗೆ ಆಗಸ್ಟ್ 27ರಂದು ಮೊದಲು ಜ್ವರ ಕಾಣಿಸಿಕೊಂಡಿದೆ. ಬಳಿಕ ಆತನನ್ನು ಪೋಷಕರು ಸ್ಥಳೀಯ ಕ್ಲಿನಿಕ್​ಗೆ ತೋರಿಸುತ್ತಾರೆ. ನಂತರ ಖಾಸಗಿ ಆಸ್ಪತ್ರೆ ಹಾಗೂ ಆ ಬಳಿಕ ಕೋಳಿಕೋಡ್ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ದಾಖಲಿಲಾಗುತ್ತದೆ. ನಂತರ ಮತ್ತೊಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಇದೇ ಭಾನುವಾರ ಬೆಳಗ್ಗೆ 5ಗಂಟೆಗೆ ಈತ ಸಾವನ್ನಪ್ಪಿದ್ದಾನೆ.


  ಆರೋಗ್ಯ ಅಧಿಕಾರಿಗಳು ಆಗಸ್ಟ್ 27ರ ನಂತರ ಆ ಬಾಲಕ ಯಾವ್ಯಾವ ಜಾಗಕ್ಕೆ ಹೋಗಿದ್ದ ಎಂಬುದನ್ನೆಲ್ಲಾ ವಿಚಾರಿಸಿ ಪತ್ತೆ ಮಾಡಿ ರೂಟ್ ಮ್ಯಾಪ್ ಮಾಡಿದೆ. ಇದೇ ವೇಳೆ, ಮೃತ ಬಾಲಕನ ಪ್ರದೇಶದ ಮೂರು ಕಿಮೀ ಸುತ್ತಮುತ್ತಲ ಜಾಗದಲ್ಲಿ ಕಠಿಣ ನಿರ್ಬಂಧಗಳನ್ನ ವಿಧಿಸಲಾಗಿದೆ. ಆಗಸ್ಟ್ 27ರ ನಂತರ ಈ ಬಾಲಕನೊಂದಿಗೆ ಸಂಪರ್ಕಕ್ಕೆ ಬಂದ 188 ವ್ಯಕ್ತಿಗಳನ್ನ ಅಧಿಕಾರಿಗಳು ಗುರುತಿಸಿದ್ದಾರೆ. ಇವರ ಪೈಕಿ 20 ಮಂದಿಯನ್ನ ಹೈ ರಿಸ್ಕ್ ಎಂದು ವಿಭಾಗಿಸಲಾಗಿದೆ. ಈ ಹೈ ರಿಸ್ಕ್ ಕೆಟಗರಿಯಲ್ಲಿರುವವರ ಪೈಕಿ ಇಬ್ಬರಲ್ಲಿ ನಿಪಾ ರೋಗಲಕ್ಷಣಗಳಿವೆ. ಈ ಇಬ್ಬರೂ ಕೂಡ ಆರೋಗ್ಯ ಕಾರ್ಯಕರ್ತರೇ ಆಗಿದ್ದಾರೆ. ಹೈ ರಿಸ್ಕ್ ಕೆಟಗರಿಯಲ್ಲಿರುವ 20 ಮಂದಿಯನ್ನ ಕೋಳಿಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.


  ಹಿಂದಿನ ನಿಪಾ ದಾಳಿ: ನಿಪಾ ವೈರಸ್ ಭಾರತದಲ್ಲಿ 2001ರಿಂದ ನಾಲ್ಕೈದು ಬಾರಿ ದಾಳಿ ಮಾಡಿದೆ. ಬಂಗಾಳದಲ್ಲಿ ಎರಡು ಬಾರಿ, ಕೇರಳದಲ್ಲಿ ಇದು ಮೂರನೇ ಬಾರಿ ನಿಪಾ ವೈರಸ್ ದಾಳಿ ಮಾಡಿದೆ. 2018ರಲ್ಲಿ ಕೇರಳದ ಕೋಳಿಕೋಡ್​ನಲ್ಲಿ ಮೊದಲು ಕಾಣಿಸಿಕೊಂಡಾಗ 17 ಮಂದಿ ಬಲಿಯಾಗಿದ್ದರು. ಆಗ ಬಹಳ ಕ್ಷಿಪ್ರವಾಗಿ ನಿರ್ಧಾರಗಳನ್ನ ಕೈಗೊಂಡು ಹೆಚ್ಚು ಅನಾಹುತವಾಗದಂತೆ ತಡೆಯಲಾಗಿತ್ತು. ಈ ಘಟನೆ ಬಗ್ಗೆ ಮಲಯಾಳಂನಲ್ಲಿ ‘ವೈರಸ್’ ಹೆಸರಿನ ಒಂದು ಸಿನಿಮಾ ಕೂಡ ತಯಾರಾಗಿ ಜನಪ್ರಿಯವಾಗಿದೆ.

  Published by:Vijayasarthy SN
  First published: