Arun Govil: ಬಿಜೆಪಿ ಸೇರಿದ ರಾಮಾಯಣದ ರಾಮ ಪಾತ್ರಧಾರಿ ಅರುಣ್​ ಗೋವಿಲ್​

80ರ ದಶಕದ ಮನೆ ಮಾತಾಗಿದ್ದ ರಾಮಾಯಣ ಧಾರಾವಾಹಿ ಕಳೆದ ವರ್ಷ ಕೋವಿಡ್​  ಲಾಕ್​ಡೌನ್​ ಅವಧಿಯಲ್ಲಿ ಮರು ಪ್ರಸಾರಗೊಂಡು ದೇಶದ ಜನರ ಮನಸೊರೆಗೊಂಡಿತ್ತು.

ಅರುಣ್​ ಗೋವಿಲ್​

ಅರುಣ್​ ಗೋವಿಲ್​

 • Share this:
  ರಾಮಯಾಣ ಧಾರಾವಾಹಿ ಮೂಲಕ ಭಗವಾನ್​ ರಾಮನ ಅವತಾರವನ್ನು ದೇಶದ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಅರುಣ್​ ಗೋವಿಲ್​ ಇಂದು ಬಿಜೆಪಿ ಸೇರಿದ್ದಾರೆ. 80ರ ದಶಕದ ಮನೆ ಮಾತಾಗಿದ್ದ ರಾಮಾಯಣ ಧಾರಾವಾಹಿ ಕಳೆದ ವರ್ಷ ಕೋವಿಡ್​  ಲಾಕ್​ಡೌನ್​ ಅವಧಿಯಲ್ಲಿ ಮರು ಪ್ರಸಾರಗೊಂಡು ದೇಶದ ಜನರ ಮನಸೊರೆಗೊಂಡಿತ್ತು. ಅಷ್ಟೇ ಅಲ್ಲದೇ ಹಿಂದಿನ ದಾಖಲೆಗಳನ್ನು ಮುರಿದು ಈ ಧಾರಾವಾಹಿ ಅತಿ ಹೆಚ್ಚು ಜನರನ್ನು ತಲುಪಿತು. ಈ ಮೂಲಕ ಮತ್ತೆ ದೇಶವಾಸಿಗಳಿಗೆ ರಾಮನ ಪಾತ್ರಧಾರಿ ಮತ್ತಷ್ಟು ಆಪ್ತವಾಗಿತ್ತು. ಗೋವಿಲ್​ ಬಿಜೆಪಿ ಸೇರ್ಪಡನೆಯಿಂದ ಮತ್ತಷ್ಟು ಜನರಿಗೆ ಪಕ್ಷ ಸೇರಲು ಉತ್ತೇಜನ ಸಿಗದಲಿದೆ. ಬಿಜೆಪಿ ನಾಯಕರಾದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ತಮ್ಮ ಪ್ರತಿ ಭಾಷಣವನ್ನು ಜೈ ಶ್ರೀರಾಮ್​ ಘೋಷಣೆ ಮೂಲಕ ಆರಂಭಿಸುತ್ತಾರೆ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಈ ಘೋಷಣೆ ಧಾರ್ಮಿಕತೆಗಿನ್ನ ಹೆಚ್ಚಾಗಿ ರಾಜಕೀಯವಾಗಿ ಬಳಕೆಯಾಗುತ್ತಿದೆ.  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೈ ಶ್ರೀರಾಮ್​ ಘೋಷಣೆ ಕೂಗುತ್ತಿದ್ದವರ ವಿರುದ್ಧ  ಸಿಎಂ ಮಮತಾ ಬ್ಯಾನರ್ಜಿ  ಹರಿಹಾಯ್ದಿದ್ದರು. ಇದಾದ ಬಳಿಕ ಮಮತಾ ಬ್ಯಾನರ್ಜಿ ಕಂಡಾಗಲೆಲ್ಲಾ ಜೈ ಶ್ರೀರಾಮ್​ ಘೋಷಣೆಗಳು ಕೇಳಿ ಬರುತ್ತವೆ.

  ಜನವರಿಯಲ್ಲಿ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ 124ನೇ ಜನ್ಮ ದಿನಾಚರಣೆ ಅಂಗವಾಗಿ ಕೋಲ್ಕತ್ತಾದಲ್ಲಿ ಪ್ರಧಾನಿ ಮೋದಿ ಜೊತೆ ದೀದಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಮಾತನಾಡಲು ಮುಂದಾದಗ ಜೈ ಶ್ರೀರಾಮ್​ ಘೋಷಣೆ ಕೂಗಲಾಯಿತು. ಇದರಿಂದ ಸಿಟ್ಟಾದ ಮಮತಾ ಬ್ಯಾನರ್ಜಿ ಸಾರ್ವಜನಿಕ ಕಾರ್ಯಕ್ರಮವನ್ನು ರಾಜಕೀಯ ವೇದಿಕೆ ಮಾಡಿಕೊಂಡಿದ್ದರ ಬಗ್ಗೆ ಆಕ್ಷೇಪಿಸಿ ಮಾತನಾಡಲು ನಿರಾಕರಿಸಿದರು.

  ಇದನ್ನು ಓದಿ: ಆಟ ಶುರು ಅಲ್ಲ, ಅಭಿವೃದ್ಧಿ ಆರಂಭ; ದೀದಿಗೆ ಕುಟುಕಿದ ಪ್ರಧಾನಿ ಮೋದಿ

  ಇದಾದ ಕೆಲವು ದಿನಗಳ ಬಳಿಕ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಜೈ ಶ್ರೀರಾಮ್​ ಘೋಷಣೆ ಒಬ್ಬ ವ್ಯಕ್ತಿಗೆ ಇಷ್ಟು ಕಿರಿಕಿರಿ ಮಾಡಬಹುದೇ ಎಂದು ಆಶ್ಚರ್ಯ ವ್ಯಕ್ತಡಿಸಿದ್ದರು. ಅಲ್ಲದೇ ಜೈ ಶ್ರೀ ರಾಮ್​ ಎಂಬುದು ನಮಸ್ಕಾರ ಎಂಬಂತೆ ಒಂದು ಶಿಷ್ಟಾಚಾರವಾಗಿದೆ. ಈ ಬಗ್ಗೆ ಯಾಕೆ ಅನ್ಯತಾ ಭಾವಿಸಬೇಕು ಎಂದಿದ್ದರು.

  ರಾಜಕೀಯವಾಗಿ ಶಕ್ತಿಹೊಂದಿರುವ ಈ ಜೈ ಶ್ರೀರಾಮ್​ ಘೋಷಣೆ ಯಾವಾಗ ರಾಜಕೀಯ ಪ್ರವೇಶಿಸಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, 1990-92ರ ವೇಳೆ ರಾಮ ಮಂದಿರ ನಿರ್ಮಾಣದ ವೇಳೆ ಆರ್​ಎಸ್​ಎಸ್​ ಮತ್ತು ವಿಎಸ್​ಪಿ ಬಳಕೆ ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
  Published by:Seema R
  First published: