• Home
  • »
  • News
  • »
  • national-international
  • »
  • ರಾಮ ರಾಮ..! ಸೀತೆಗೆ ಎಷ್ಟು ಮಕ್ಕಳು?; ತಿರುಪತಿ ತಿಮ್ಮಪ್ಪ ದೇವಾಲಯದಿಂದ ಹೊರಬಿತ್ತು ವಿವಾದಾತ್ಮಕ ರಾಮಾಯಣ

ರಾಮ ರಾಮ..! ಸೀತೆಗೆ ಎಷ್ಟು ಮಕ್ಕಳು?; ತಿರುಪತಿ ತಿಮ್ಮಪ್ಪ ದೇವಾಲಯದಿಂದ ಹೊರಬಿತ್ತು ವಿವಾದಾತ್ಮಕ ರಾಮಾಯಣ

ರಾಮಾಯಣ ಧಾರಾವಾಹಿಯ ದೃಶ್ಯ

ರಾಮಾಯಣ ಧಾರಾವಾಹಿಯ ದೃಶ್ಯ

9 ವರ್ಷದ ಬಾಲಕ ಬರೆದ ರಾಮಾಯಣದಲ್ಲಿ ಸೀತಾಮಾತೆಗೆ ಲವ ಒಬ್ಬನೇ ಮಗ. ಕುಶ ಎಂಬುವವನು ಆಕೆಯ ಮಗನಲ್ಲ. ಕುಶ ದರ್ಬೆಯಿಂದ ಮಾಡಿದ ಒಂದು ಆಟಿಕೆ ಎಂದು ಬರೆದಿದ್ದಾನೆ.

  • Share this:

ಹೈದರಾಬಾದ್​ (ಜೂ. 3): ಭಾರತದ ಅತಿ ಶ್ರೀಮಂತ ದೇವಸ್ಥಾನವೆಂದೇ ಹೆಸರಾಗಿರುವ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ (ಟಿಟಿಡಿ) ಕೆಲವೇ ದಿನಗಳಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲು ನಿರ್ಧರಿಸಲಾಗಿದೆ. ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ವಿಚಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಟಿಟಿಡಿ ಮತ್ತೊಂದು ವಿವಾದ ಸೃಷ್ಟಿಸಿದೆ. ತಿರುಪತಿ ದೇವಸ್ಥಾನದ ತಿಂಗಳ ಮ್ಯಾಗಜಿನ್​ನಲ್ಲಿ 9 ವರ್ಷದ ಪುನೀತ್ ಎಂಬ ಬಾಲಕ ಬರೆದ ರಾಮಾಯಣವನ್ನು ಪ್ರಕಟಿಸಿದೆ. ಈ ರಾಮಾಯಣ ಈಗ ಆಂಧ್ರ ಪ್ರದೇಶದಲ್ಲಿ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದೆ.


9 ವರ್ಷದ ಬಾಲಕ ಬರೆದ ರಾಮಾಯಣದಲ್ಲಿ ಸೀತಾಮಾತೆಗೆ ಲವ ಒಬ್ಬನೇ ಮಗ. ಕುಶ ಎಂಬುವವನು ಆಕೆಯ ಮಗನಲ್ಲ. ಕುಶ ದರ್ಬೆಯಿಂದ ಮಾಡಿದ ಒಂದು ಆಟಿಕೆ ಎಂದು ಬರೆದಿದ್ದಾನೆ. ಇದು ಆಂಧ್ರ ಪ್ರದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಂಧ್ರದ ಬಿಜೆಪಿ ನಾಯಕರು ಈ ವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹಲವು ಬಗೆಯ ರಾಮಾಯಣಗಳಿವೆ. ವಾಲ್ಮೀಕಿ ಬರೆದ ರಾಮಾಯಣ ಎಲ್ಲದಕ್ಕೂ ಮೂಲ ಎಂದು ಪರಿಗಣಿಸಲಾಗುತ್ತದೆ. ಅದಾದ ಬಳಿಕ ಹಲವು ರಾಮಾಯಣಗಳು ರೂಪ ತಳೆದಿವೆ. ಒಬ್ಬೊಬ್ಬರು ಒಂದೊಂದು ಬದಲಾವಣೆ ಮಾಡಿ ರಾಮಾಯಣವನ್ನು ಕಟ್ಟಿಕೊಟ್ಟಿದ್ದಾರೆ. ಆ ಯಾವ ರಾಮಾಯಣದಲ್ಲೂ ಸೀತೆಯ ಮಕ್ಕಳ ಬಗ್ಗೆ ವಿವಾದಾತ್ಮಕ ಬರಹವಿಲ್ಲ. ಹೀಗಿದ್ದಾಗ ಟಿಟಿಡಿ ಹೇಗೆ ಇಷ್ಟು ಚಿಕ್ಕ ಹುಡುಗ ಬರೆದ, ಆಧಾರರಹಿತ ರಾಮಾಯಣವನ್ನು ಪ್ರಕಟಿಸಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: ಆಹಾರ ಹುಡುಕಿ ಬಂದ ಗರ್ಭಿಣಿ ಆನೆಯ ಬಾಯಲ್ಲಿ ಪಟಾಕಿಯಿಟ್ಟು ಕೊಂದ ಜನ!


ರಾಮಾಯಣದ ಕತೆಯನ್ನು ತಿರುಚುವ ಮೂಲಕ ಟಿಟಿಡಿ ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡಿದೆ. ಇದಕ್ಕೆ ಯಾರು ಕಾರಣರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಂಧ್ರದ ಬಿಜೆಪಿ ವಕ್ತಾರ ಬುದ್ಧ ಚಂದ್ರಶೇಖರ್ ಒತ್ತಾಯಿಸಿದ್ದಾರೆ.


ನಾವೆಲ್ಲರೂ ವಾಲ್ಮೀಕಿ ಬರೆದ ರಾಮಾಯಣವೇ ಸತ್ಯವಾದುದು ಎಂದು ಪರಿಗಣಿಸಿದ್ದೇವೆ. ಆದರೆ, ಇದೇ ಸತ್ಯವಾದುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ದ್ರಾವಿಡ ಭಾಷೆಗಳಾದ ಕನ್ನಡ ಮತ್ತು ತಮಿಳು ಮುಂತಾದ ಭಾಷೆಗಳಲ್ಲಿ ಸಾವಿರಾರು ವರ್ಷದ ಹಿಂದೆಯೇ ಕವಿಗಳು ರಾಮಾಯಣ ಬರೆದಿದ್ದಾರೆ. ಜೊತೆಗೆ, ಜಾನಪದ ರಾಮಾಯಣಗಳೂ ಇವೆ. ತಮಿಳಿನ ಕಂಬ ರಾಮಾಯಣ, ಕನ್ನಡದ ಪಂಪ ರಾಮಾಯಣ ಎರಡೂ ವಾಲ್ಮೀಕಿ ರಾಮಾಯಣಕ್ಕಿಂತಲೂ ಸಾಕಷ್ಟು ಭಿನ್ನವಾಗಿದೆ. ಕತೆ ಒಂದೇ ರೀತಿ ಇದ್ದರೂ ಅದರ ತಿರುಳು, ಪಾತ್ರಗಳನ್ನು ಹೆಣೆದಿರುವ ರೀತಿ ಭಿನ್ನವಾಗಿದೆ.


ಇದನ್ನೂ ಓದಿ: ನಿಸರ್ಗ ಚಂಡಮಾರುತದ ಅಬ್ಬರ; ಮಹಾರಾಷ್ಟ್ರದಲ್ಲಿ ಭಾರೀ ಗಾಳಿ-ಮಳೆ


ಅಂದಹಾಗೆ, ಟಿಟಿಡಿ ಮ್ಯಾಗಜಿನ್​ನಲ್ಲಿ ಈ ರಾಮಾಯಣವನ್ನು ಪ್ರಕಟಿಸಿರುವ ಸಂಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಮಾಹಿತಿಯನ್ನು ಪರೀಕ್ಷಿಸದೆ ಪ್ರಕಟಿಸಿರುವ ಸಂಪಾದಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ. ಇದರಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಟಿಟಿಡಿ ಚೇರ್ಮನ್ ವೈ.ವಿ. ಸುಬ್ಬಾ ರೆಡ್ಡಿ ನ್ಯೂಸ್​18ಗೆ ಮಾಹಿತಿ ನೀಡಿದ್ದಾರೆ.


(ವರದಿ: ಮೇದಬಯಾನಿ ಬಾಲಕೃಷ್ಣ)

Published by:Sushma Chakre
First published: