ಬೊಂಬೆ ನಗರಿಯಲ್ಲಿ ಕುಡುಕರ, ಸೋಮಾರಿಗಳ ಅಡ್ಡೆಯಾದ ಗಾಂಧಿ ಭವನ

ಮಹಾತ್ಮ ಗಾಂಧಿಜೀ ಅವರ ನೆನಪಿನ ಸ್ಮಾರಕ ಇಂದು ಸೋಮಾರಿಗಳ ಆವಾಸ ಸ್ಥಾನವಾಗಿದೆ. ಗಾಂಧೀಜಿಯವರು ಬಂದು ಹೋದ ನೆನ್ನನಪಿಗಾಗಿ ಈ ಸ್ಮಾರಕವನ್ನ ಕಟ್ಟಲಾಗಿತ್ತು. ಈ ಸ್ಮಾರಕವನ್ನ ಕೇಂದ್ರ ಗ್ರಂಥಾಲಯವಾಗಿ ಮಾರ್ಪಾಡು ಮಾಡಿ, ಪಾರಂಪರಿಕತೆಯನ್ನು ಉಳಿಸಿಕೊಳ್ಳಲಾಗಿತ್ತು. ಆದ್ರೆ ಈಗ ಅದೇ ಸ್ಮಾರಕ ಪ್ರತಿನಿತ್ಯ ಕೆಲಸವಿಲ್ಲದೇ, ಕುಡಿದು ಮಲಗೋ ಸೋಮಾರಿಗಳ ತಾಣವಾಗಿದೆ. ಸ್ಮಾರಕವನ್ನ ಸಂರಕ್ಷಿಸಬೇಕಾದ ತಾಲ್ಲೂಕು ಆಡಳಿತ, ನಗರಾಡಳಿತ ಸಂಪೂರ್ಣ ವಿಫಲವಾಗಿ, ಕಣ್ಣಿದ್ದೂ ಕುರುಡಾಗಿದೆ.

news18
Updated:October 2, 2018, 8:27 AM IST
ಬೊಂಬೆ ನಗರಿಯಲ್ಲಿ ಕುಡುಕರ, ಸೋಮಾರಿಗಳ ಅಡ್ಡೆಯಾದ ಗಾಂಧಿ ಭವನ
ಚೆನ್ನಪಟ್ಟಣದಲ್ಲಿ ಗಾಂಧಿ ಭವನದ ದುರವಸ್ಥೆ
  • Advertorial
  • Last Updated: October 2, 2018, 8:27 AM IST
  • Share this:
- ಎ.ಟಿ. ವೆಂಕಟೇಶ್, ನ್ಯೂಸ್18 ಕನ್ನಡ

ರಾಮನಗರ(ಅ.02): ಬೀಳುವ ಹಂತದಲ್ಲಿರುವ ಕಟ್ಟಡದ ಗೋಡೆಗಳು. ಕಟ್ಟಡದ ಆವರಣದೊಳಗೆ ಮಲಗಿರುವ ಸೋಮಾರಿಗಳು. ಸರಿಯಾಗಿ ನಿರ್ವಹಣೆ ಇಲ್ಲದೆ ಆಳುದ್ದ ಬೆಳೆದು ನಿಂತಿರುವ ಗಿಡಗಡ್ಡೆಗಳು.... ಅಂದಹಾಗೆ ಇಂತಹ ದೃಶ್ಯಕಂಡು ಬರೋದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣದಲ್ಲಿ. ಹತ್ತು ದಶಕಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರು ಚನ್ನಪಟ್ಟಣಕ್ಕೆ ಬಂದು ಹೋದ ನೆನಪಿಗಾಗಿ ಗಾಂಧಿ ಹೆಸರಿನಲ್ಲಿ ಈ ಭವನವನ್ನು ನಿರ್ಮಾಣ ಮಾಡಲಾಗಿತ್ತು. ನಂತರ ಇದನ್ನು ಗ್ರಂಥಾಲಯವಾಗಿ ಮಾರ್ಪಾಡು ಮಾಡಲಾಗಿದೆ. ಆದ್ರೆ ಈಗ ಅದೇ ಸ್ಮಾರಕ ಪ್ರತಿನಿತ್ಯ ಕೆಲಸ ಇಲ್ಲದೆ ಕುಡಿದು ಮಲಗುವವರ ತಾಣವಾಗಿದೆ. ತಂಪಾಗಿ ಮಲಗೋದಕ್ಕೆ ಸ್ಮಾರಕವನ್ನ ಉಪಯೋಗಿಸಿಕೊಳ್ಳಲಾಗುತ್ತಿದೆ. ಇನ್ನು, ಇದನ್ನ ಸಂರಕ್ಷಿಸಿಸಬೇಕಾದ ತಾಲ್ಲೂಕು ಆಡಳಿತ ಹಾಗೂ ನಗರಾಡಳಿತ ಸಂಪೂರ್ಣ ವಿಫಲಾಗಿದೆ.

ಈ ಗಾಂಧಿ ಗ್ರಂಥಾಲಯ ಪ್ರತಿನಿತ್ಯ ಬೆಳಗ್ಗೆ 8ರಿಂದ 12 ಗಂಟೆವರೆಗೆ ತೆರೆಯಲಾಗುತ್ತೆ. ಆದರೆ ಪ್ರತಿಕ್ಷಣ ಇಲ್ಲಿ ಕುಡಿದು ಮಲಗುವ ಜನರಿಂದ ವಿದ್ಯಾರ್ಥಿಗಳು ಸೇರಿದಂತೆ ಯಾರೊಬ್ಬರೂ ಗ್ರಂಥಾಲಯಕ್ಕೆ ಬರುತ್ತಿಲ್ಲ. ಗ್ರಂಥಾಲಯದ ಕಟ್ಟದ ಹಳೆಯದಾಗಿದ್ದು, ಶಿಥಿಲಾವ್ಯಸ್ಥೆಗೆ ತಲುಪಿದೆ. ಇವರು ಕಂಠಪೂರ್ತಿ ಕುಡಿದು ತೇಲಾಡುತ್ತಾ ಮಲಗಿರುವ ಸಮಯದಲ್ಲಿ ಕಟ್ಟಡವೇನಾದರೂ ಬಿದ್ದರೆ ಏನ್ ಕಥೆ ಅಂತಿದ್ದಾರೆ ಸ್ಥಳೀಯರು. ಹಾಗೆಯೇ ಯಾರೂ ಇಲ್ಲದ ವೇಳೆ ರಾತ್ರಿಯಾದ್ರೆ ಸಾಕು ಇಲ್ಲಿಯೇ ಮದ್ಯ ಪಾರ್ಟಿ ಕೂಡ ನಡೆಯುತ್ತೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಗ್ರಂಥಾಲಯವನ್ನು ಉಳಿಸಿ, ಕಟ್ಟವನ್ನು ದುರಸ್ತಿ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಸೋಮಾರಿಗಳ ಅಡ್ಡೆಯಾಗಿ, ಶಿಥಿಲಾವಸ್ಥೆಗೂ ತಲುಪಿರುವ ಗಾಂಧಿಜೀಯವರ ನೆನಪಿನ ಸ್ಮಾರಕವನ್ನ ರಕ್ಷಿಸುವ ಕಾರ್ಯವಾಗಬೇಕಿದೆ. ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ಚನ್ನಪಟ್ಟಣದ ಜನರ ಈ ಕೂಗಿಗೆ ಸರಕಾರ ಕಿವಿಗೊಡುತ್ತದೆಂಬ ವಿಶ್ವಾಸವಿದೆ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ