ಹಿಂದೂಗಳ (Hindu) ಪಾಲಿಗೆ ಶ್ರೀರಾಮ (Sri Rama) ಎಂದೆಂದಿಗೂ ಆರಾಧ್ಯ ದೈವ. ರಾಮ ಕಾಲ್ಪನಿಕ ವ್ಯಕ್ತಿ (fictional person) ಎನ್ನುವವರು ಇದ್ದಾರೆ. ರಾಮ ದೇವರಲ್ಲ (Not God) ನಮ್ಮನಿಮ್ಮಂತೆ ಸಾಮಾನ್ಯ ವ್ಯಕ್ತಿ ಅಂತ ವಾದಿಸುವವರೂ ಇದ್ದಾರೆ. ರಾಮನೂ ಇದ್ದ, ಅಯೋಧ್ಯೆಯೂ (Ayodhye) ಇತ್ತು, ರಾಮ ರಾಜ್ಯವೂ ಅಸ್ಥಿತ್ವದಲ್ಲಿ ಇತ್ತು ಎಂಬ ಬಗ್ಗೆ ಸಾಕ್ಷಿ ಸಮೇತ ವಾದಿಸಿದವರೂ ಇದ್ದಾರೆ. ಅವುಗಳೆಲ್ಲ ಏನೇ ಇದ್ದರೂ ಪ್ರತಿಯೊಬ್ಬ ಹಿಂದೂಗಳ ಎದೆಯ ಸಿಂಹಾಸನದಲ್ಲಿ ಶ್ರೀರಾಮ ಪಟ್ಟಾಭಿಷೇಕ ಎಂದೇ ನಡೆದು ಹೋಗಿದೆ. ಇದೀಗ ಅಯೋಧ್ಯೇಯ ದೇಗುಲದಲ್ಲಿ ಆತನನ್ನು ನೋಡಿ ಕಣ್ತುಂಬಿಕೊಳ್ಳಬೇಕು ಅಂತ ಹಿಂದೂಗಳು ಕಾಯುತ್ತಿದ್ದಾರೆ. ಹಿಂದೂ ಧರ್ಮದಲ್ಲಿ (Hinduism) ರಾಮಾಯಣಕ್ಕೆ (Ramayana) ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ರಾಮ ಓಡಾಡಿದ ಪ್ರದೇಶ, ಭೇಟಿ ಕೊಟ್ಟ ಸ್ಥಳಗಳೆಲ್ಲ ಪುಣ್ಯ ಪವಿತ್ರವಾಗಿದೆ. ಪೈಕಿ ರಾಮ ಸೇತುವೂ (Ram Setu) ಸೇರಿದೆ. ಇದೀಗ ರಾಮಸೇತು ಇತ್ತು ಎನ್ನುವುದಕ್ಕೆ ಕುರುಹು ಸಿಕ್ಕಿದೆ ಎನ್ನಲಾಗುತ್ತಿದ್ದು, ಫೋಟೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಪತ್ತೆಯಾಯ್ತಾ ರಾಮಸೇತು ಕಲ್ಲು?
ಉತ್ತರ ಪ್ರದೇಶದ ಇಸಾನ್ ನದಿಯ ನೀರಿನಲ್ಲಿ ತೇಲುತ್ತಿರುವ ಕಲ್ಲೊಂದು ಪತ್ತೆಯಾಗಿದೆ ಎಂಬ ಫೋಟೋ ಹಾಗೂ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಲ್ಲು ‘ರಾಮಸೇತು’ ಕಲ್ಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಇಸಾನ್ ನದಿಯಲ್ಲಿ ನೀರಿನ ಮೇಲೆ ದೊಡ್ಡ ಕಲ್ಲೊಂದು ತೇಲಿ ಬಂದಿದೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಕಲ್ಲಿನ ಮೇಲೆ ಹಿಂದಿ ಭಾಷೆಯಲ್ಲಿ ‘ರಾಮ್’ ಎಂದು ಬರೆಯಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಕಲ್ಲು ಖಂಡಿತವಾಗಿಯೂ ಶ್ರೀರಾಮನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಇದು ‘ರಾಮಸೇತುವಿನ ಕಲ್ಲು’ ಎಂದು ಹೇಳುತ್ತಿದ್ದಾರೆ. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಗ್ರಾಮಸ್ಥರು ಕಲ್ಲಿಗೆ ಪೂಜೆ ಮಾಡುತ್ತಿದ್ದಾರೆ.
ಮೀನು ಹಿಡಿಯುವ ಮಕ್ಕಳಿಗೆ ಸಿಕ್ಕಿದ ತೇಲುವ ಕಲ್ಲು
ಇದೇ ಊರಿನಲ್ಲಿ ಮೀನು ಹಿಡಿಯಲು ನದಿಗೆ ತೆರಳಿದ್ದ ಮಕ್ಕಳಿಗೆ ಹಿಂದಿಯಲ್ಲಿ ‘ರಾಮ್’ ಎಂದು ಬರೆದಿರುವ ಈ ಕಲ್ಲು ಸಿಕ್ಕಿದೆ. ಕಲ್ಲು 5.7 ಕೆಜಿ ತೂಕವಿದ್ದರೂ ನೀರಿನಲ್ಲಿ ತೇಲುತ್ತಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ಈ ಕಲ್ಲಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಶ್ರೀರಾಮ ಭಕ್ತರು ಅಲ್ಲಿಂದಲೇ ಕೈಮುಗಿದು, ಇದು ರಾಮಸೇತುಗೆ ಸೇರಿದ ಕಲ್ಲು ಎನ್ನುತ್ತಿದ್ದಾರೆ.
ಇದನ್ನೂ ಓದಿ: Ram Setu: ರಾಮಸೇತು ರಾಮನೇ ಕಟ್ಟಿದ್ದಾ, ಪ್ರಕೃತಿಯೇ ನಿರ್ಮಿಸಿದ್ದಾ? ಅಪರೂಪದ ಸ್ಥಳ ವಿವಾದವಾಗಿದ್ದೇಕೆ?
ರಾಮಸೇತು ಎಲ್ಲಿದೆ?
ಭಾರತ ಮತ್ತು ಶ್ರೀಲಂಕಾದ ಮಧ್ಯೆ ಸಮುದ್ರದಲ್ಲಿ ಸುಮಾರು 36 ಕಿಮೀ ಪ್ರದೇಶದಲ್ಲಿ ರಾಮಸೇತು ಇದೆ. ಆಳವಿಲ್ಲದ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಚಿಪ್ಪಿನಂಥ ಮರಳುಗಲ್ಲುಗಳನ್ನೊಳಗೊಂಡಿರುವ ಕಿರಿದಾದ, ಅರ್ಧ ಮುಳುಗಿರುವ ಒಡ್ಡು ಇದು. ಈ ಪ್ರದೇಶದ ಕೆಲವು ಕಡೆಗಳಲ್ಲಿ ನೀರಿನ ಆಳ 30 ಅಡಿ ಗಳಷ್ಟಿದ್ದು ಅಲ್ಲಲ್ಲೇ ಅನೇಕ ಸಣ್ಣ ಸಣ್ಣ ದ್ವೀಪಗಳೂ ಇವೆ.
ರಾಮಸೇತು ವಿವಾದವಾಗಿದ್ದೇಕೆ?
ಈ ಹಿಂದೆ ಯುಪಿಎ ಸರ್ಕಾರ ಪಂಬನ್ ದ್ವೀಪದಿಂದ ಶ್ರೀಲಂಕಾದ ಮನ್ನಾರ್ ದ್ವೀಪಕ್ಕೆ ಶಾರ್ಟ್‌ಕಟ್ ಮಾರ್ಗವನ್ನು ಒದಗಿಸಲು ಸೇತುಸಮುದ್ರಂ ಯೋಜನೆಯನ್ನು ಪ್ರಸ್ತಾಪಿಸಲಾಯಿತು. 30-ಕಿಮೀ ಉದ್ದದ ಉದ್ದಕ್ಕೂ ಸಮುದ್ರದ ಆಳವು 3 ಅಡಿ ಮತ್ತು 30 ಅಡಿಗಳ ನಡುವೆ ಬದಲಾಗುತ್ತದೆ, ಹೀಗಾಗಿ ಈ ಪ್ರದೇಶದಲ್ಲಿ ಸಮುದ್ರಕ್ಕೆ ಯೋಗ್ಯವಾದ ಹಡಗುಗಳ ಮೂಲಕ ಸಂಚಾರ ಅಸಾಧ್ಯವಾಗಿದೆ.
ಇದನ್ನೂ ಓದಿ: Controversy: 'ರಾಮ' ರಾಮಾ, ದೇವರ ಬಗ್ಗೆ ಇದೆಂತಾ ಮಾತು! ವಿವಾದದ ಬಳಿಕ ಕಾಂಗ್ರೆಸ್ ನಾಯಕಿ ಹೇಳುವುದೇನು?
ಇಂದು, ಭಾರತದ ಪೂರ್ವ ಕರಾವಳಿಗೆ ಹೋಗುವ ಹಡಗುಗಳು ಟುಟಿಕೋರಿನ್, ಚೆನ್ನೈ, ವೈಜಾಗ್, ಪ್ಯಾರಾದಿಪ್ ಮತ್ತು ಇತರ ಬಂದರುಗಳನ್ನು ತಲುಪಲು ಇಡೀ ಶ್ರೀಲಂಕಾ ದ್ವೀಪವನ್ನು ಸುತ್ತಬೇಕು. ಆದ್ದರಿಂದ, ಸೇತುಸಮುದ್ರಂ ಶಿಪ್ಪಿಂಗ್ ಕೆನಾಲ್ ಪ್ರಾಜೆಕ್ಟ್ ಎಂಬ ಯೋಜನೆಯನ್ನು ಭಾರತ ಸರ್ಕಾರವು ಜಾರಿಗೆ ತರಲು ಯೋಚಿಸಿತು. ಇದು ವಿವಾದಕ್ಕೆ ಕಾರಣವಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ