4 ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ; ಜಾರ್ಖಂಡ್ ಚುನಾವಣಾ ಸಮಾವೇಶದಲ್ಲಿ ಅಮಿತ್ ಶಾ ಭರವಸೆ

ಹಲವು ದಶಕಗಳ ಹಳೆಯದಾ ಬಾಬ್ರಿ-ರಾಮಜನ್ಮ ಭೂಮಿ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ನವೆಂಬರ್ 9ರಂದು ತೀರ್ಪು ನೀಡಿತ್ತು. 2.77 ಎಕರೆ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡುವುದು ಮತ್ತು ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸರ್ಕಾರ ನೀಡಬೇಕು. ಹಾಗೂ ಮಂದಿರ ನಿರ್ಮಾಣ ಸಂಬಂಧ ಮೂರು ತಿಂಗಳಲ್ಲಿ ಟ್ರಸ್ಟ್ ಒಂದನ್ನು ರಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿತ್ತು. 

HR Ramesh | news18-kannada
Updated:December 16, 2019, 5:56 PM IST
4 ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ; ಜಾರ್ಖಂಡ್ ಚುನಾವಣಾ ಸಮಾವೇಶದಲ್ಲಿ ಅಮಿತ್ ಶಾ ಭರವಸೆ
ಅಮಿತ್​ ಶಾ
  • Share this:
ಪಾಕೂರ್ (ಜಾರ್ಖಂಡ್): ಜಗತ್ತಿನಾದ್ಯಂತ ಇರುವ ಭಾರತೀಯ ಆಶಯದಂತೆ ಇನ್ನು ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೋಮವಾರ ಭರವಸೆ ನೀಡಿದರು.

ರಾಮಜನ್ಮ ಭೂಮಿ ಪ್ರಕರಣವನನ್ನು ಸುಪ್ರೀಂಕೋರ್ಟ್​ನಲ್ಲಿ ಎಳೆದಾಡಲು ಕಾಂಗ್ರೆಸ್​ ಪ್ರುಯತ್ನಿಸಿತ್ತು ಎಂದು ಆರೋಪಿಸಿದ  ಅಮಿತ್ ಶಾ, ಪ್ರಕರಣವನ್ನು ನಿಧಾನವಾಗಿ ತೆಗೆದುಕೊಳ್ಳಿ. ಇದನ್ನು ಹಿಂಬಾಲಿಸುವ ಹೊಟ್ಟೆ ನೋವು ನಿಮಗೆ ಏಕೆ ಎಂದು ಕಾಂಗ್ರೆಸ್ ನಾಯಕ ಹಾಗೂ ವಕೀಲ ಕಪಿಲ್ ಸಿಬಾಲ್ ಹೇಳಿದ್ದಾಗಿ ಜಾರ್ಖಂಡ್ ಚುನಾವಣೆಯ ಪ್ರಚಾರ ಸಮಾವೇಶದಲ್ಲಿ ತಿಳಿಸಿದರು. ಸುಪ್ರೀಂಕೋರ್ಟ್ ಪ್ರಕರಣ ಸಂಬಂಧ ಮಹತ್ವದ ಆದೇಶ ನೀಡಿದೆ. ಇನ್ನು ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ಆಕಾಶ ಮುಟ್ಟಿಸುವಂತಹ ರಾಮಮಂದಿರವನ್ನು ನಿರ್ಮಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.

ಇದನ್ನು ಓದಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾಚಾರಗಳು ದುರದೃಷ್ಟಕರ, ದುಃಖಕರ; ಪ್ರಧಾನಿ ಮೋದಿ

ಹಲವು ದಶಕಗಳ ಹಳೆಯದಾ ಬಾಬ್ರಿ-ರಾಮಜನ್ಮ ಭೂಮಿ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ನವೆಂಬರ್ 9ರಂದು ತೀರ್ಪು ನೀಡಿತ್ತು. 2.77 ಎಕರೆ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡುವುದು ಮತ್ತು ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ಸರ್ಕಾರ ನೀಡಬೇಕು. ಹಾಗೂ ಮಂದಿರ ನಿರ್ಮಾಣ ಸಂಬಂಧ ಮೂರು ತಿಂಗಳಲ್ಲಿ ಟ್ರಸ್ಟ್ ಒಂದನ್ನು ರಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶ ನೀಡಿತ್ತು.

First published:December 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ