ಅಯೋಧ್ಯೆಯಲ್ಲಿ ಡಿಸೆಂಬರ್ 6ರಿಂದ ರಾಮ ಮಂದಿರ ನಿರ್ಮಾಣ ಕಾರ್ಯ: ಸಾಕ್ಷಿ ಮಹಾರಾಜ್

ದೇವಾಲಯ ನಿರ್ಮಾಣ ಕಾರ್ಯದಲ್ಲಿ ಹಿಂದೂಗಳು ಮತ್ತು ಮುಸ್ಲಿಂಮರು ಒಟ್ಟಿಗೆ ಸೇರಿ ಸಹಾಯ ಮಾಡಬೇಕು. ಬಾಬರ್ ಒಬ್ಬ ಆಕ್ರಮಣಕಾರನೇ ಹೊರತು ತಮ್ಮ ಪೂರ್ವಜರಲ್ಲ ಎಂಬ ಅಂಶವನ್ನು ಸುನ್ನಿ ವಾಕ್ಫ್​ ಬೋರ್ಡ್​ ಒಪ್ಪಿಕೊಳ್ಳಬೇಕು ಎಂದಿದ್ದಾರೆ.

Latha CG | news18-kannada
Updated:October 16, 2019, 3:51 PM IST
ಅಯೋಧ್ಯೆಯಲ್ಲಿ ಡಿಸೆಂಬರ್ 6ರಿಂದ ರಾಮ ಮಂದಿರ ನಿರ್ಮಾಣ ಕಾರ್ಯ: ಸಾಕ್ಷಿ ಮಹಾರಾಜ್
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್​
Latha CG | news18-kannada
Updated: October 16, 2019, 3:51 PM IST
ಲಕ್ನೋ(ಅ. 16): ಸುಪ್ರೀಂ ಕೋರ್ಟ್​ನಲ್ಲಿ ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆ ಇವತ್ತು ಮುಕ್ತಾಯವಾಗಿದೆ. ಅಂತಿಮ ತೀರ್ಪು ಬರುವುದು ಬಾಕಿ ಇದೆ. ಆಗಲೇ ಬಿಜೆಪಿ ನಾಯಕರೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಡಿಸೆಂಬರ್ 6ರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್​ ಹೇಳಿದ್ದಾರೆ.

ತಮ್ಮ ಕ್ಷೇತ್ರ ಉನ್ನಾವೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 6 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ನೆಲಸಮ ಮಾಡಲಾಗಿತ್ತು. ಬಾಬ್ರಿ ಮಸೀದಿ ನೆಲಸಮಗೊಂಡ ದಿನವೇ ರಾಮ ದೇಗುಲ ಕಟ್ಟುವ ಕಾರ್ಯ ಆರಂಭವಾಗುತ್ತಿದೆ ಎಂದು ಮಹಾರಾಜ್​ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸೈನಿಕ ಕಾರ್ಯಾಚರಣೆ ; ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಅವರ ಅವಿರತ ಶ್ರಮದಿಂದಾಗಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವ ಕನಸು ನನಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

ದೇವಾಲಯ ನಿರ್ಮಾಣ ಕಾರ್ಯದಲ್ಲಿ ಹಿಂದೂಗಳು ಮತ್ತು ಮುಸ್ಲಿಂಮರು ಒಟ್ಟಿಗೆ ಸೇರಿ ಸಹಾಯ ಮಾಡಬೇಕು. ಬಾಬರ್ ಒಬ್ಬ ಆಕ್ರಮಣಕಾರನೇ ಹೊರತು ತಮ್ಮ ಪೂರ್ವಜರಲ್ಲ ಎಂಬ ಅಂಶವನ್ನು ಸುನ್ನಿ ವಾಕ್ಫ್​ ಬೋರ್ಡ್​ ಒಪ್ಪಿಕೊಳ್ಳಬೇಕು ಎಂದಿದ್ದಾರೆ.

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...