• Home
  • »
  • News
  • »
  • national-international
  • »
  • Explainer: ರಾಮಮಂದಿರ ವಿಚಾರ ಕೋರ್ಟ್​ನಲ್ಲಿ ಸಿಲುಕಿಕೊಳ್ಳುವಂತೆ ಮಾಡಿದ್ದೆ ಕಾಂಗ್ರೆಸ್; ಅಮಿತ್ ಶಾ ವಾಗ್ದಾಳಿ

Explainer: ರಾಮಮಂದಿರ ವಿಚಾರ ಕೋರ್ಟ್​ನಲ್ಲಿ ಸಿಲುಕಿಕೊಳ್ಳುವಂತೆ ಮಾಡಿದ್ದೆ ಕಾಂಗ್ರೆಸ್; ಅಮಿತ್ ಶಾ ವಾಗ್ದಾಳಿ

ಅಯೋಧ್ಯಾ ಶ್ರೀರಾಮ ಮಂದಿರದ ನಕ್ಷೆ

ಅಯೋಧ್ಯಾ ಶ್ರೀರಾಮ ಮಂದಿರದ ನಕ್ಷೆ

ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಬಗ್ಗೆ ದಶಕಗಳಿಂದ ಕಾಂಗ್ರೆಸ್‌ನ ನಿಲುವು ಸ್ಪಷ್ಟವಾಗಿಲ್ಲ. ಹಿಂದೂಗಳು ಮತ್ತು ಮುಸ್ಲಿಮರಿಬ್ಬರನ್ನೂ ಸಂತೋಷವಾಗಿಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷವು ಡೋಲಾಯಮಾನವಾಯಿತು ಮತ್ತು ಅಂತಿಮವಾಗಿ ಇಬ್ಬರ ಬೆಂಬಲವನ್ನು ಕಳೆದುಕೊಂಡಿತು. ಇದುವೇ ಕಾಂಗ್ರೆಸ್‌ಗೆ ರಾಮ ಮಂದಿರ ವಿವಾದದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುವಂತೆ ಮಾಡಿತು ಎಂದು ಗೃಹ ಸಚುವ ಅಮಿತ್​ ಶಾ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದೆ ಓದಿ ...
  • Share this:

ರಾಮ ಮಂದಿರ (Ram mandir) ವಿಚಾರದಲ್ಲಿ ಗೃಹ ಸಚಿವ ಅಮಿತ್ ಶಾ (Home Minister Amit Shah) ಬಿಜೆಪಿಯ (BJP) ಖಚಿತ ನಿರ್ಧಾರವನ್ನು ಕಾಂಗ್ರೆಸ್ (Congress) ನೇತೃತ್ವದ ಸರ್ಕಾರದೊಂದಿಗೆ ಹೋಲಿಕೆ ಮಾಡಿದ್ದು, ಈ ವಿಚಾರವನ್ನು ವರ್ಷಗಳ ಕಾಲ ನ್ಯಾಯಾಲಯದಲ್ಲಿ (Court) ಇರಿಸಿದ್ದ ಕಾಂಗ್ರೆಸ್, ಅಂತಿಮ ತೀರ್ಮಾನಕ್ಕೆ ಬರುವಲ್ಲಿ ವಿಫಲಗೊಂಡಿತ್ತು ಎಂದು ತಿಳಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ (Independence) ದೊರೆತಾಗಿನಿಂದಲೂ ಕಾಂಗ್ರೆಸ್ ಪಕ್ಷವು ಈ ಸಮಸ್ಯೆಯನ್ನು ಸೆಷನ್ಸ್ ನ್ಯಾಯಾಲಯ, ಹೈಕೋರ್ಟ್ (High Court), ಸುಪ್ರೀಂ ಕೋರ್ಟ್ (Supreme Court) ಮತ್ತು ಪುನಃ ಸೆಷನ್ಸ್ ನ್ಯಾಯಾಲಯಗಳಲ್ಲಿ ಸಿಲುಕಿಕೊಳ್ಳುವಂತೆ ಮಾಡಿತ್ತು ಎಂದು ದೂರಿದ್ದಾರೆ.


ರಾಮ ಮಂದಿರದ ಭೂಮಿ ಪೂಜೆ


ಇದೇ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡ ಮೋದಿಯವರು ಕಾಂಗ್ರೆಸ್‌ನಿಂದ ಆಗದೇ ಇರುವ ಕೆಲಸವನ್ನು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶ ಬಂದಿತು. ಅದರೊಂದಿಗೆ ರಾಮ ದೇವರ ದೇವಾಲಯದ ಭೂಮಿ ಪೂಜೆಯನ್ನು  ಮೋದಿಯವರು ನೆರವೇರಿಸಿದರು, ಜೊತೆಗೆ ನಿರ್ಮಾಣ ಕಾಮಗಾರಿ ಕೂಡ ಆರಂಭವಾಯಿತು ಎಂದು ಅಮಿತ್ ಶಾ ಅವರು ತ್ರಿಪುರಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮಂದಿರ ನಿರ್ಮಾಣದ ದಿನಾಂಕವನ್ನು ಎಂದಿಗೂ ದೃಢೀಕರಿಸಿಲ್ಲ ಎಂದು ರಾಹುಲ್ ಗಾಂಧಿಯನ್ನು ವ್ಯಂಗ್ಯವಾಡಿದ ಅಮಿತ್ ಶಾ, "ಜನವರಿ 1, 2024 ರಂದು ಅಯೋಧ್ಯೆಯ ಸುಂದರ ರಾಮ ಮಂದಿರ ಲೋಕಾರ್ಪಣೆಯಾಗಲಿದೆ, ಹಾಗಾಗಿ ಪ್ರತಿಯೊಬ್ಬ ರಾಮ ಭಕ್ತರು ಅಯೋಧ್ಯೆಗೆ ಟಿಕೆಟ್ ಬುಕ್ ಮಾಡಿ" ಎಂದು ಸಲಹೆ ನೀಡಿದ್ದಾರೆ.


ಕಾಂಗ್ರೆಸ್ ನಿಲುವು ಸ್ಪಷ್ಟವಾಗಿರಲಿಲ್ಲ


ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಬಗ್ಗೆ ದಶಕಗಳಿಂದ ಕಾಂಗ್ರೆಸ್‌ನ ನಿಲುವು ಸ್ಪಷ್ಟವಾಗಿಲ್ಲ. ಹಿಂದೂಗಳು ಮತ್ತು ಮುಸ್ಲಿಮರಿಬ್ಬರನ್ನೂ ಸಂತೋಷವಾಗಿಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷವು ಡೋಲಾಯಮಾನವಾಯಿತು ಮತ್ತು ಅಂತಿಮವಾಗಿ ಇಬ್ಬರ ಬೆಂಬಲವನ್ನು ಕಳೆದುಕೊಂಡಿತು. ಇದುವೇ ಕಾಂಗ್ರೆಸ್‌ಗೆ ರಾಮ ಮಂದಿರ ವಿವಾದದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುವಂತೆ ಮಾಡಿತು.
ಪರಿವಾರ ವಿವಾದ


1980 ರ ದಶಕದಲ್ಲಿ, ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದವು ದಶಕಗಳಿಂದ ನ್ಯಾಯಾಲಯದಲ್ಲಿದ್ದಾಗ, ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮಂದಿರ ನಿರ್ಮಾಣವು ಹಿಂದೂ ನಂಬಿಕೆಯ ವಿಷಯವಾಗಿದೆ ಮತ್ತು ನ್ಯಾಯಾಲಯದಲ್ಲಿ ನಡೆಸುವ ದಾವೆಯಲ್ಲ ಎಂಬ ನಿಲುವನ್ನು ಅಳವಡಿಸಿಕೊಂಡಿತು.


1986 ರಲ್ಲಿ, ಆರ್‌ಎಸ್‌ಎಸ್ (RSS) ಪ್ರತಿನಿಧಿ ಸಭೆಯು ಜನ್ಮಭೂಮಿ ಪ್ರದೇಶ ಮತ್ತು ಪಕ್ಕದ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಹಸ್ತಾಂತರಿಸುವಂತೆ ಸರ್ಕಾರವನ್ನು ಒತ್ತಾಯಿಸಿತು. ಗುಜರಾತ್‌ನ ಸೋಮನಾಥ ದೇವಾಲಯದಂತೆಯೇ ಪುರಾತನವಾದ ಜೊತೆಗೆ ಶಿಥಿಲಗೊಂಡಿರುವ ರಾಮಜನ್ಮಭೂಮಿ ದೇವಾಲಯವನ್ನು ಅದರ ಹಿಂದಿನ ವೈಭವಕ್ಕೆ ಸರಿಸಾಟಿಯಾಗಿ ಪುನರ್ ನಿರ್ಮಾಣ ಮಾಡಬೇಕು ಎಂಬ ಆಶಯವನ್ನು ಕೈಗೆತ್ತಿಕೊಂಡಿತು.


RSS banned 3 times from 1947 read history
ಆರ್​ಎಸ್​ಎಸ್​ (ಸಾಂಕೇತಿಕ ಚಿತ್ರ)


ವಿವಾದವು ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿದೆ ಎಂದು ಬಿಜೆಪಿಯೂ ಭಾವಿಸಿತ್ತು. 1989 ರಲ್ಲಿ ಬಿಜೆಪಿಯ ಪಾಲಂಪೂರ್ ನಿರ್ಣಯವು ಎರಡು ಸಮುದಾಯಗಳ ನಡುವಿನ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು ಅಥವಾ ಇದು ಸಾಧ್ಯವಾಗದಿದ್ದರೆ, ಶಾಸನವನ್ನು ಜಾರಿಗೊಳಿಸುವ ಮೂಲಕ ಪರಿಹರಿಸಬೇಕು, ಹಾಗಾಗಿ ಈ ವಿಷಯದಲ್ಲಿ ವ್ಯಾಜ್ಯವು ಯಾವುದೇ ರೀತಿಯಲ್ಲಿ ಪರಿಹಾರವಲ್ಲ ಎಂಬುದಾಗಿ ಪಕ್ಷವು ತೀರ್ಮಾನಿಸಿತು. ನಂತರ, ಪಕ್ಷವು ತನ್ನ ಮೈತ್ರಿ ಧರ್ಮದ ಪ್ರಕಾರ, ಪ್ರಕರಣವನ್ನು ನ್ಯಾಯಾಲಯದಲ್ಲಿ ಅಥವಾ ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂಬ ನಿಲುವನ್ನು ತಾಳಿತು.


ಬೀಗವನ್ನು ತೆರೆಯುವ ಆದೇಶ


ಬಾಬರಿ ಮಸೀದಿಯ ಬೀಗ ತೆರೆಯಬೇಕೆಂಬ ತನ್ನ ಬೇಡಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ದೃಢವಾಗಿತ್ತು. ಇದಕ್ಕಾಗಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಕೈಗೊಂಡಿತು ಹಾಗೂ ಈ ಪ್ರತಿಭಟನೆಯಲ್ಲಿ ಅಶೋಕ್ ಸಿಂಘಾಲ್, ಯುಪಿ ಮಾಜಿ ಕಾಂಗ್ರೆಸ್ ನಾಯಕ ಮತ್ತು ಸಚಿವ ಥಾವ್ ದಯಾಳ್ ಖನ್ನಾ ಮತ್ತು ಮಾಜಿ ಐಪಿಎಸ್ ಅಧಿಕಾರಿ ಶ್ರೀಶ್ ಚಂದ್ರ ದೀಕ್ಷಿತ್ ಪಾಲ್ಗೊಂಡಿದ್ದರು.


ತಂಡವು ರಾಜೀವ್ ಗಾಂಧಿಯವರ ಸರ್ಕಾರಿ ಅಧಿಕಾರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿತು ಆದರೆ ಅಂತಿಮ ತೀರ್ಮಾನಕ್ಕೆ ಬಂದಿರಲಿಲ್ಲ. ಇದೇ ಸಮಯದಲ್ಲಿ ರಾಮ ಮಂದಿರ ಕುರಿತು ಹಿಂದೂ ಭಾವನೆಗಳನ್ನು ಪರಿಹರಿಸಲು ಹಾಗೂ ಮುಸ್ಲಿಂ ಮತದಾರರನ್ನು ಓಲೈಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. 24 ಸೆಪ್ಟೆಂಬರ್ 1985 ರಂದು ಕಾಂಗ್ರೆಸ್ ತನಗಿದ್ದ ಬೆಂಬಲದ ಕುಸಿತದ ಭೀತಿಯನ್ನು ತಡೆಯಲು NT ತಿವಾರಿ ಬದಲಿಗೆ ವೀರ್ ಬಹದ್ದೂರ್ ಸಿಂಗ್ ಅವರನ್ನು (ಅವಿಭಜಿತ) ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಿಸಿತು.
ಫೆಬ್ರವರಿ 1, 1986 ರಂದು, ಫೈಜಾಬಾದ್ (ಈಗ ಅಯೋಧ್ಯೆ) ನಲ್ಲಿರುವ ಸ್ಥಳೀಯ ನ್ಯಾಯಾಲಯವು ರಾಮ ಜನ್ಮಭೂಮಿಯ ಬೀಗವನ್ನು ತೆರೆಯಲು ಆದೇಶಿಸಿತು. ಈ ಆದೇಶವನ್ನು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿಕೊಳ್ಳದೆ ತಮ್ಮ ಸರ್ಕಾರ ಬೀಗ ತೆರೆಯುವ ಕೆಲಸವನ್ನು ಮಾಡಿದೆ ಎಂಬ ಸಂದೇಶವನ್ನು ಸದ್ದಿಲ್ಲದೆ ಬಿತ್ತರಿಸುವ ಕೆಲಸವನ್ನು ಮಾಡಿತು.


ಸಂಕಷ್ಟದಲ್ಲಿ ಕಾಂಗ್ರೆಸ್


ಎಲ್ ಕೆ ಅಡ್ವಾಣಿ ನೇತೃತ್ವದ ಬಿಜೆಪಿಯು ನಕಲಿ ಜಾತ್ಯತೀತತೆ ಮತ್ತು ಬಹಿರಂಗವಾಗಿ ರಾಮ ಮಂದಿರ ಚಳವಳಿಗೆ ಸೇರುವ ಮೂಲಕ ಒತ್ತಡವನ್ನು ಹೆಚ್ಚಿಸಿತು. ಬಾಬರಿ ಮಸೀದಿಯ ಬೀಗಗಳನ್ನು ತೆರೆದ ನಂತರ, ಸಂಘ ಪರಿವಾರದ ಸಂಘಟನೆಯು ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ದೇವಾಲಯದ ಪ್ರಚಾರವನ್ನು ವೇಗಗೊಳಿಸಿತು. ಬಾರಾಬಂಕಿ ಮತ್ತು ಅಲಹಾಬಾದ್ (ಈಗ ಪ್ರಯಾಗ್ರಾಜ್) ಸೇರಿದಂತೆ ಹಲವಾರು ಸ್ಥಳಗಳಲ್ಲಿ ಕೋಮು ಗಲಭೆಗಳು ಭುಗಿಲೆದ್ದವು.


karnataka politics update bjp slams hd kumaraswamy and siddaramaiah mrq
ಸಾಂದರ್ಭಿಕ ಚಿತ್ರ


ಈ ಸಂದರ್ಭದಲ್ಲಿ 1987 ರಲ್ಲಿ, ಪ್ರಾಂತೀಯ ಸಶಸ್ತ್ರ ಪಡೆಗಳ ಪೊಲೀಸರಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ಮೀರತ್ ಬಳಿಯ ಹಾಶಿಂಪುರದಲ್ಲಿ ಮುಸ್ಲಿಮರು ಹತರಾದರು. ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಹಿಂದೂ ಪರವಾಗಿ ಈ ದಾಳಿ ನಡೆದಿದೆ ಎಂದು ವೀರ್ ಬಹದ್ದೂರ್ ಸಿಂಗ್ ಸರ್ಕಾರವನ್ನು ಅನೇಕ ಕಾಂಗ್ರೆಸ್ಸಿಗರು ದೂಷಿಸಿದರು ಹಾಗೂ ಈ ಆರೋಪವನ್ನು ವೀರ್ ಬಹದ್ದೂರ್ ಸಿಂಗ್ ನಿರಾಕರಿಸಿದರು. ಕಾಂಗ್ರೆಸ್‌ನ ಹಿಂದೂ ಮೇಲ್ಜಾತಿ ಮತ್ತು ಮುಸ್ಲಿಂ ನೆಲೆಗಳೆರಡನ್ನೂ ಉತ್ತಮಗೊಳಿಸುವ ಪ್ರಯತ್ನದಲ್ಲಿ ವೀರ್ ಬಹದ್ದೂರ್ ಸಿಂಗ್ ಎರಡೂ ಬಣಗಳಲ್ಲಿ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದರು.


ಜೂನ್ 1986 ರಲ್ಲಿ, ಅವರ ಸರಕಾರವು ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್‌ನ ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿಯ ಮೂರು ರಥಗಳನ್ನು ವಶಪಡಿಸಿಕೊಂಡಿತು. ಆದರೆ ಇದರಿಂದ ಆಕ್ರೋಶಗೊಂಡಿದ್ದ ವಿಶ್ವ ಹಿಂದೂ ಪರಿಷತ್ತನ್ನು ಸಮಾಧಾನ ಪಡಿಸಲೆಂದು ನವೆಂಬರ್ 22 ರಂದು ಪೋಲೀಸ್ ಬೆಂಗಾವಲುಗಳೊಂದಿಗೆ ಲಕ್ನೋಗೆ ಮರಳಿ ಕಳುಹಿಸಲಾಯಿತು.
ಡಿಸೆಂಬರ್ 19, 1985 ರಂದು, ವೀರ್ ಬಹದ್ದೂರ್ ಸಿಂಗ್ ಅವರು ಅಯೋಧ್ಯೆಯಲ್ಲಿ ಮೂರು ದಿನಗಳ ರಾಮಾಯಣ ಮೇಳದಲ್ಲಿ ಪಾಲ್ಗೊಂಡರು, ಅವರ ಹಿಂದಿನವರಲ್ಲಿ ಒಬ್ಬರಾದ ಶ್ರೀಪತಿ ಮಿಶ್ರಾ ಅವರು 1982 ರಲ್ಲಿ ಸಂತರು ಮತ್ತು ಋಷಿಗಳ ವಾರ್ಷಿಕ ಸಭೆ ಪ್ರಾರಂಭಿಸಿದರು.


ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಉಂಟಾದ ನಷ್ಟ


ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಹಲವಾರು ಬಿಕ್ಕಟ್ಟು ಹಾಗೂ ಸಮಸ್ಯೆಗಳನ್ನು ಎದುರಿಸಿತು. ಇದರಲ್ಲಿ ಹಿರಿಯ ನಾಯಕ ಹಾಗೂ 1980-82ರ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ವಿಪಿ ಸಿಂಗ್ ಬಂಡಾಯವೂ ಒಳಗೊಂಡಿದೆ. ಜೂನ್ 1988 ರಲ್ಲಿ, ಅಲಹಾಬಾದ್‌ನಿಂದ ಲೋಕಸಭಾ ಉಪಚುನಾವಣೆಯಲ್ಲಿ VP ಸಿಂಗ್ ಗೆದ್ದ ನಂತರ, ರಾಜೀವ್ ಗಾಂಧಿಯವರು ವೀರ್ ಬಹದ್ದೂರ್ ಅವರನ್ನು ಕೇಂದ್ರ ಸಚಿವರಾಗಿ ದೆಹಲಿಗೆ ಆಹ್ವಾನಿಸಿದರು ಮತ್ತು NT ತಿವಾರಿ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.


ಅನೇಕ ನಾಯಕರು ವಿಪಿ ಸಿಂಗ್ ಅಥವಾ ಬಿಜೆಪಿಗೆ ಸೇರ್ಪಡೆಗೊಳ್ಳುವುದರೊಂದಿಗೆ, ಕಾಂಗ್ರೆಸ್ ಆ ಸಮಯದಲ್ಲಿ ನಿರ್ಗಮನವನ್ನು ಎದುರಿಸಿತು. 1989 ರಲ್ಲಿ, ಪಕ್ಷವು ದೆಹಲಿ ಮತ್ತು ಲಕ್ನೋದಲ್ಲಿ ತನ್ನ ಸರ್ಕಾರವನ್ನು ಕಳೆದುಕೊಂಡಿತು. ಮುಲಾಯಂ ಸಿಂಗ್ ಯಾದವ್ ಮತ್ತು ವಿಎಚ್‌ಪಿ ನೇತೃತ್ವದ ರಾಜ್ಯ ಸರ್ಕಾರದೊಂದಿಗೆ ಪ್ರಧಾನಿ ವಿಪಿ ಸಿಂಗ್ ಸರ್ಕಾರ ಸರಣಿ ಸಮಾಲೋಚನೆ ನಡೆಸಿತು.


Congress opens first office on Owaisi turf Charminar
ಕಾಂಗ್ರೆಸ್


ವಿಪಿ ಸಿಂಗ್ ಮತ್ತು ಮುಲಾಯಂ ಸಿಂಗ್ ಸರ್ಕಾರಗಳಿಗೆ ಬಿಜೆಪಿ ತನ್ನ ಬೆಂಬಲ ಹಿಂತೆಗೆದುಕೊಂಡ ನಂತರ, ಕಾಂಗ್ರೆಸ್ ದೆಹಲಿಯಲ್ಲಿ ಚಂದ್ರಶೇಖರ್ ಸರ್ಕಾರವನ್ನು ಬೆಂಬಲಿಸಿತು ಮತ್ತು ಯುಪಿಯಲ್ಲಿ ಮುಲಾಯಂ ಸರ್ಕಾರವನ್ನು ಉಳಿಸಿತು. ಆದರೆ ಯುಪಿಯಲ್ಲಿ ಕಾಂಗ್ರೆಸ್‌ನ ಉಚ್ಛ್ರಾಯ ಸ್ಥಿತಿ ಕೊನೆಗೊಂಡಿತು. ದೇವಸ್ಥಾನದ ವಿಚಾರದಲ್ಲಿ ಮುಲಾಯಂ ಕಠಿಣ ನಿಲುವು ತಳೆದು ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಮತದಾರರನ್ನು ತಮ್ಮೆಡೆಗೆ ಸೆಳೆದುಕೊಂಡರು.


ಇದನ್ನೂ ಓದಿ: Karnataka Congress: ‘ವ್ಯಾಪಾರ ಸೌಧದಲ್ಲಿ ಎಲ್ಲವೂ ಮಾರಾಟ, ಇದು ಬಿಜೆಪಿ ಪಾಪಪುರಾಣ‘! ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ‘ಟ್ವೀಟಾಸ್ತ್ರ’!


ಬಿಜೆಪಿಯ ಸಾಮಾಜಿಕ ಕಾರ್ಯಕ್ರಮವು ಕೋಮು ರಾಜಕೀಯ ಮತ್ತು ಮಂಡಲ ರಾಜಕಾರಣವನ್ನು ಸಂಯೋಜಿಸಿತು ಮತ್ತು 1991 ರ ವಿಧಾನಸಭಾ ಚುನಾವಣೆಯಲ್ಲಿ, ಹಿಂದೂ ಮತಗಳ ಕ್ರೋಢೀಕರಣದಲ್ಲಿ ಬಿಜೆಪಿ 425 ವಿಧಾನಸಭಾ ಕ್ಷೇತ್ರಗಳಲ್ಲಿ 221 ಸ್ಥಾನಗಳನ್ನು ಗೆದ್ದಿತು.


karnataka politics tweet war between congress and bjp mrq
ಕಾಂಗ್ರೆಸ್ ಬಿಜೆಪಿ


ದೇಗುಲ ಸಮಸ್ಯೆ ಬಗೆಹರಿಸಲು ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸ ಮತ್ತು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳನ್ನು ವಿಸರ್ಜನೆ ಮಾಡಿದರೂ ಕಾಂಗ್ರೆಸ್‌ಗೆ ಲಾಭವಾಗಲಿಲ್ಲ. ಯುಪಿಯಲ್ಲಿ ಬಿಜೆಪಿ ಮತ್ತು ಎಸ್‌ಪಿ ಮತ್ತು ಬಿಎಸ್‌ಪಿಯಂತಹ ಪಕ್ಷಗಳ ನಡುವೆ ರಾಜಕೀಯ ಬಲವರ್ಧನೆ ಇದ್ದುದೇ ಕಾಂಗ್ರೆಸ್‌ಗೆ ನಷ್ಟವನ್ನುಂಟು ಮಾಡಿತು.

Published by:Monika N
First published: