Ram Navami 2020 - ರಾಮ ನವಮಿಗೆ ಶುಭ ಹಾರೈಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ರಾಮನವಮಿಯು ಹಿಂದೂ ಕ್ಯಾಲೆಂಡರ್​ನ ಚೈತ್ರ ಮಾಸದ ಒಂಬತ್ತನೇ ದಿನವಾಗಿದೆ. ನವರಾತ್ರಿಯಂದು ಒಂಬತ್ತು ದಿನಗಳಿಂದ ಉಪವಾಸ ಇರುವ ಭಕ್ತರು ಈ ದಿನ ಆಹಾರ ಸೇವಿಸಿ ಉಪವಾಸ ನಿಲ್ಲಿಸುತ್ತಾರೆ.

news18
Updated:April 2, 2020, 2:40 PM IST
Ram Navami 2020 - ರಾಮ ನವಮಿಗೆ ಶುಭ ಹಾರೈಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ.
  • News18
  • Last Updated: April 2, 2020, 2:40 PM IST
  • Share this:
ನವದೆಹಲಿ(ಏ. 02): ಇವತ್ತು ದೇಶದೆಲ್ಲೆಡೆ ರಾಮನವಮಿಯ ಸಂಭ್ರಮ. ವಿಷ್ಣುವಿನ ಅವತಾರವಾಗಿದ್ದ ಶ್ರೀ ರಾಮನ ಜನನದ ನೆನಪಿಗಾಗಿ ಹಿಂದೂಗಳು ರಾಮ ನವಮಿ ಆಚರಿಸುತ್ತಾರೆ. ಒಂಬತ್ತು ದಿನಗಳ ದುರ್ಗಾ ಪೂಜೆಯ ನವರಾತ್ರಿಯ ಒಂಬತ್ತನೆ ದಿನದಂದು ರಾಮನವಮಿ ಇದೆ.

ಪ್ರಧಾನಿ ನರೇಂದ್ರ ಮೋದಿ ಈ ವಿಶೇಷ ಸಂದರ್ಭದಲ್ಲಿ ಜನರಿಗೆ ಟ್ವೀಟ್ ಮಾಡಿ ಹಾರೈಸಿದ್ದಾರೆ. “ರಾಮನವಮಿಯ ಪವಿತ್ರ ಸಂದರ್ಭದಲ್ಲಿ ದೇಶದ ಎಲ್ಲ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜೈ ಶ್ರೀ ರಾಮ್” ಎಂದು ಪ್ರಧಾನಿ ಹಿಂದಿಯಲ್ಲಿ ಟ್ವೀಟ್‌ ಮಾಡಿ ಶುಭ ಕೋರಿದ್ದಾರೆ.
ಈ ಹಿಂದೆಯೂ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಮೂಲಕ ನವರಾತ್ರಿಗೆ ಜನರಿಗೆ ಶುಭ ಹಾರೈಸಿದ್ದರು. ನವರಾತ್ರಿ ಮಾತ್ರವಲ್ಲ, ಯುಗಾದಿ, ಗುಡಿ ಪಾಡ್ವಾ, ನವ್ರೆಹ್ ಮತ್ತು ಸಾಜಿಬು ಚಿರೋಬಾ ಸೇರಿದಂತೆ ಹಲವಾರು ಹಬ್ಬಗಳಿಗೆ ಹೃತ್ಪೂರ್ವಕ ಶುಭಾಶಯ ಕೋರಿದ್ದರು. “ಇಡೀ ಪ್ರಪಂಚ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಈ ಉತ್ಸವಗಳನ್ನು ಆಚರಿಸಲಾಗುತ್ತಿದೆ. ಆದರೆ ಮೊದಲಿನಂತೆ ಆಚರಿಸಲು ಸಾಧ್ಯವಿಲ್ಲ. ಆದರೆ ಇವು ಈ ಸಂಕಷ್ಟ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ನಮಗೆ ಬಲ ನೀಡುತ್ತದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದರು.ಇದನ್ನೂ ಓದಿ: ಕೊರೋನಾ ಹಾಡು: ರಾಯಚೂರು ಎಸ್ಪಿಯಿಂದ ವಿನೂತನ ಪ್ರಚಾರಸಾಜಿಬು ಚಿರೋಬಾ ಎಂಬುದು ಈಶಾನ್ಯ ಭಾರತದ ಕೆಲವೆಡೆ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಗುಡಿ ಪಡ್ವಾ ಎಂಬುದು ಕೊಂಕಣಿ ಸಮುದಾಯದವರು ಆಚರಿಸುವ ಉತ್ಸವವಾಗಿದೆ.

ಇನ್ನು, ರಾಮನವಮಿಯು ಹಿಂದೂ ಕ್ಯಾಲೆಂಡರ್​ನ ಚೈತ್ರ ಮಾಸದ ಒಂಬತ್ತನೇ ದಿನವಾಗಿದೆ. ನವರಾತ್ರಿಯಂದು ಒಂಬತ್ತು ದಿನಗಳಿಂದ ಉಪವಾಸ ಇರುವ ಭಕ್ತರು ಈ ದಿನ ಆಹಾರ ಸೇವಿಸಿ ಉಪವಾಸ ನಿಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಭಕ್ತರು 9 ಕನ್ಯೆಯರನ್ನು ಕರೆದು ಭೂರಿ ಭೋಜನ ಹಾಕಿಸುತ್ತಾರೆ. ಇದಕ್ಕೆ ಕನ್ಯಾ ಭೋಜ್ ಎಂದು ಕರೆಯುತ್ತಾರೆ. ಹಿಂದೂ ಪುರಾಣಗಳ ಪ್ರಕಾರ, ರಾಮನವಮಿಯ ಈ ದಿನವೇ ಭಗವಾನ್ ರಾಮ ಅಯೋಧ್ಯೆಯಲ್ಲಿ ಜನಿಸಿದನೆಂದು ನಂಬಲಾಗಿದೆ.

ಈಗ ಕೊರೋನಾ ವೈರಸ್ ಭೀತಿ ಇರುವುದರಿಂದ ಎಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಜನರು ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಾರ್ವಜನಿಕವಾಗಿ ನಡೆಯುತ್ತಿಲ್ಲ. ಮಸೀದಿಗಳಲ್ಲಿ ನಮಾಜ್ ಕೂಡ ನಡೆಯುತ್ತಿಲ್ಲ. ದೇವಸ್ಥಾನಗಳಲ್ಲಿ ಕೇವಲ ಅರ್ಚಕರಿಂದಷ್ಟೇ ಪೂಜೆಗಳಾಗುತ್ತಿವೆ.

- ಸಂಧ್ಯಾ ಎಂ.

First published: April 2, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading