HOME » NEWS » National-international » RAM MANDIR ONLY STONES TO BE USED FOR AYODHYA RAM MANDIR CONSTRUCTION WHICH STANDS FOR 1000 YEARS SCT

Ram Mandir: 2023ರಲ್ಲಿ ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕಲ್ಲುಗಳಿಂದಲೇ ಕಟ್ಟಲಾದ ಬೃಹತ್ ರಾಮ ಮಂದಿರ!

Ayodhya Ram Mandir Design: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕಬ್ಬಿಣವನ್ನು ಬಳಸುವುದಿಲ್ಲ. ಕಲ್ಲುಗಳನ್ನು ಮಾತ್ರ ಬಳಸಿ ಮಂದಿರ ನಿರ್ಮಿಸಲಾಗುವುದು. ಇದರಿಂದ 1 ಸಾವಿರ ವರ್ಷಕ್ಕೂ ಹೆಚ್ಚು ಸಮಯ ರಾಮ ಮಂದಿರ ಹಾಗೇ ಉಳಿಯಲಿದೆ.

Sushma Chakre | news18-kannada
Updated:August 20, 2020, 3:41 PM IST
Ram Mandir: 2023ರಲ್ಲಿ ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕಲ್ಲುಗಳಿಂದಲೇ ಕಟ್ಟಲಾದ ಬೃಹತ್ ರಾಮ ಮಂದಿರ!
ಅಯೋಧ್ಯೆ ರಾಮ ಮಂದಿರದ ವಿನ್ಯಾಸ
  • Share this:
ನವದೆಹಲಿ (ಆ. 20): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಎರಡು ವಾರಗಳ ಹಿಂದಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿದ್ದರು. ಇದೀಗ ರಾಮ ಮಂದಿರದ ಕಾಮಗಾರಿಗೆ ಕೆಲಸಗಳು ಆರಂಭವಾಗಿದ್ದು, 36ರಿಂದ 40 ತಿಂಗಳಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕಬ್ಬಿಣವನ್ನು ಬಳಸುವುದಿಲ್ಲ. ಕಲ್ಲುಗಳನ್ನು ಮಾತ್ರ ಬಳಸಿ ಮಂದಿರ ನಿರ್ಮಿಸಲಾಗುವುದು. ಇದರಿಂದ 1 ಸಾವಿರ ವರ್ಷಕ್ಕೂ ಹೆಚ್ಚು ಸಮಯ ರಾಮ ಮಂದಿರ ಹಾಗೇ ಉಳಿಯಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದಾರೆ.

only Stones to be Used for Ayodhya Ram Mandir Construction which stands for 1000 Years
ಅಯೋಧ್ಯೆ ರಾಮ ಮಂದಿರದ ವಿನ್ಯಾಸ


ಈಗಾಗಲೇ ಇಂಜಿನಿಯರ್​ಗಳು ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿರುವ ಜಾಗದ ಮಣ್ಣಿನ ಪರೀಕ್ಷೆ ಮಾಡುತ್ತಿದ್ದಾರೆ. 36ರಿಂದ 40 ತಿಂಗಳೊಳಗೆ ಆ ಜಾಗದಲ್ಲಿ ಐತಿಹಾಸಿಕ ರಾಮ ಮಂದಿರ ತಲೆಯೆತ್ತಲಿದೆ. ಐಐಟಿ ಚೆನ್ನೈ ಮತ್ತು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆಗಳು ರಾಮಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಲಿವೆ.
ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 10 ಸಾವಿರ ತಾಮ್ರದ ಸಲಾಕೆಗಳನ್ನು ಬಳಸಲಾಗುತ್ತದೆ. ದೇಶದಲ್ಲಿ ಹಲವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಒಂದು ಭಾವನಾತ್ಮಕ ವಿಷಯವಾಗಿದ್ದು ನಿರ್ಮಾಣ ಕಾರ್ಯಕ್ಕೆ ಕೊಡುಗೆ ನೀಡಲು ಇಚ್ಛಿಸುವವರು ತಾಮ್ರದ ರಾಡುಗಳಿಗೆ ಹಣವನ್ನು ದಾನ ಮಾಡಬಹುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿಗಳು ಹೇಳಿದ್ದಾರೆ.

ಇದನ್ನೂ ಓದಿ: ಮಳೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ರಸಗೊಬ್ಬರ ಪೂರೈಕೆ ಮಾಡಿ; ಸರ್ಕಾರಕ್ಕೆ ಎಚ್​.ಡಿ. ಕುಮಾರಸ್ವಾಮಿ ಒತ್ತಾಯ

ಕಬ್ಬಿಣದ ಬದಲು ಕೇವಲ ಕಲ್ಲುಗಳನ್ನು ಬಳಸಿ ರಾಮ ಮಂದಿರ ಕಟ್ಟುವುದರಿಂದ 1 ಸಾವಿರ ವರ್ಷವಾದರೂ ಮಂದಿರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಗಾಳಿ, ಬೆಳಕು, ನೀರಿನಿಂದ ಕಲ್ಲಿನ ಕಟ್ಟಡ ಬೇಗ ಹಾಳಾಗುವುದಿಲ್ಲ. ಹೀಗಾಗಿ, ಕಲ್ಲುಗಳನ್ನು ಮಾತ್ರ ಬಳಸಿ ಈ ಮಂದಿರ ನಿರ್ಮಿಸಲಾಗುತ್ತಿದೆ ಎಂದು ಚಂಪತ್ ರೈ ಮಾಹಿತಿ ನೀಡಿದ್ದಾರೆ.
Youtube Video

ಭಾರತದ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ ಎನ್ನಲಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. 161 ಅಡಿ ಎತ್ತರದ ಈ ದೇವಾಲಯವು ಐದು ಗುಮ್ಮಟಗಳನ್ನು ಹೊಂದಲಿದೆ. 1983ರಲ್ಲಿ ಸಿದ್ಧಪಡಿಸಲಾಗಿರುವ ರಾಮ ಮಂದಿರದ ವಿನ್ಯಾಸಕ್ಕೆ ಕೊಂಚ ಬದಲಾವಣೆ ಮಾಡಲಾಗಿದೆ.
Published by: Sushma Chakre
First published: August 20, 2020, 2:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories